AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ತ್ರೀರೋಗ ತಜ್ಞೆಯ ಸೋಗಿನಲ್ಲಿ 38 ಮಹಿಳೆಯರನ್ನು ಫೇಸ್​ಬುಕ್​ ಮೂಲಕ ವಂಚಿಸಿದ ಪುರುಷಪುಂಗವ

Facebook Fraud : 4 ವರ್ಷಗಳಲ್ಲಿ 38 ಮಹಿಳೆಯರನ್ನು ವಂಚಿಸಿದ್ಧಾನೆ. ಖಾಸಗಿ ಅಂಗಗಳ ವಿಡಿಯೋ, ಫೋಟೋ ಕಳಿಸಿದಲ್ಲಿ ಚಿಕಿತ್ಸೆಗೆ ಅನುಕೂಲಕರ ಎಂದು ಹೇಳಿ 1,000 ವಿಡಿಯೋ ಫೋಟೋ ಸಂಗ್ರಹಿಸಿದ್ದಾನೆ. ಈಗ ಜೈಲುಕಂಬಿ ಎಣಿಸುತ್ತಿದ್ಧಾನೆ.

ಸ್ತ್ರೀರೋಗ ತಜ್ಞೆಯ ಸೋಗಿನಲ್ಲಿ 38 ಮಹಿಳೆಯರನ್ನು ಫೇಸ್​ಬುಕ್​ ಮೂಲಕ ವಂಚಿಸಿದ ಪುರುಷಪುಂಗವ
Man Posing As Female Gynecologist Dupes 38 Women Into Sending Photos Videos Of Private Parts
TV9 Web
| Updated By: ಶ್ರೀದೇವಿ ಕಳಸದ|

Updated on:Oct 28, 2022 | 12:40 PM

Share

Viral : ಸಾಮಾಜಿಕ ಜಾಲತಾಣಗಳ ಮೂಲಕ ಇಂದು ಯಾರನ್ನೂ ಹೇಗೂ ವಂಚಿಸಿ ತಮ್ಮ ಕಾಮನೆಗಳನ್ನು ಪೂರೈಸಿಕೊಳ್ಳಬಹುದು ಎಂಬುದಕ್ಕೆ ಉದಾಹರಣೆಯಂತಿದೆ ಈ ಪ್ರಕರಣ. ಆದರೆ ಒಂದಿಲ್ಲಾ ಒಂದು ದಿನ ವಂಚಕತನ ಹೊರಬರಲೇಬೇಕು. ಕಾನೂನಿನ ಮುಂದೆ ಶರಣಾಗಲೇಬೇಕು. ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ತ್ರೀರೋಗ ತಜ್ಞೆಯಾಗಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿ ಫೇಸ್​ಬುಕ್​ ಖಾತೆಯೊಂದರ ಮೂಲಕ ಅನೇಕ ಮಹಿಳೆಯರಿಗೆ ವಂಚಿಸಿದ ಪುರುಷ ಮಹಾಶಯ ಈಗ ಸಿಂಗಪೂರಿನ ಜೈಲಿನ ಕಂಬಿಗಳನ್ನು ಎಣಿಸುತ್ತಿದ್ದಾನೆ. ಈತ 4 ವರ್ಷದೊಳಗೆ 38 ಮಹಿಳೆಯರಿಂದ ಸಂಗ್ರಹಿಸಿದ ಖಾಸಗಿ ಅಂಗಗಳ ವಿಡಿಯೋ ಫೋಟೋಗಳ ಸಂಖ್ಯೆ 1,000!

ಸಿಎನ್‌ಎನ್ ವರದಿಯ ಪ್ರಕಾರ, ಸಿಂಗಪೂರಿನ ರಾಜ್ಯ ನ್ಯಾಯಾಲಯವು ಬುಧವಾರದಂದು ಮಲೇಷಿಯಾ ಮೂಲದ ಓಯಿ ಚುಯೆನ್ ವೀ (37) ಎಂಬ ಈ ಆರೋಪಿಗೆ ಜೈಲುಶಿಕ್ಷೆ ವಿಧಿಸಿದೆ. ಮಹಿಳೆಯರನ್ನು ವಂಚಿಸಲು ಈ ಆರೋಪಿಯು ಫೇಸ್​ಬುಕ್​ ಅನ್ನು ಅವಲಂಬಿಸಿದ್ದ. ಸ್ತ್ರೀರೋಗ ತಜ್ಞೆಯ ಹೆಸರಲ್ಲಿ ನಕಲಿ ಖಾತೆ ತೆರೆದು ಅನೇಕ ಮಹಿಳೆಯರಿಗೆ ವಂಚಿಸುತ್ತಿದ್ದ ಎಂದು ನ್ಯಾಯಾಲಯದ ದಾಖಲೆಗಳಿಂದ ತಿಳಿದುಬಂದಿದೆ. ಮಹಿಳೆಯರ ಲೈಂಗಿಕ ಜೀವನ, ಖಾಸಗೀ ಅಂಗಗಳ ವಿವರಗಳನ್ನು ಪಡೆಯಲು ಸಮೀಕ್ಷಾ ಅರ್ಜಿಯನ್ನು ಭರ್ತಿ ಮಾಡಲು ಕೇಳಿಕೊಳ್ಳುತ್ತಿದ್ದ. ಸಮಸ್ಯೆಗೆ ಪರಿಹಾರ ಸಿಕ್ಕರೆ ಸಾಕು ಎಂಬ ಭ್ರಮೆಯಲ್ಲಿ ಅನೇಕ ಮಹಿಳೆಯರು ಈತ ಹೇಳಿದಂತೆ ಮಾಡುತ್ತಿದ್ದರು.

ಈತ ತನ್ನ ಕೃತ್ಯ ಸಾಧಿಸಲು ನಕಲಿ ಹೆಸರು ಮತ್ತು ಪ್ರೊಫೈಲ್​ ಅನ್ನು ಹೊಂದಿದ್ದ. ಡಾ. ಲೀ ಎಂಬ ಹೆಸರಿನಲ್ಲಿ ಮಲೇಷಿಯಾ ಮಹಿಳೆಯ ಮುಖಚರ್ಯೆ ಹೋಲುವ ಫೋಟೋ ಅವನ ಫೇಸ್​ಬುಕ್​  ಪ್ರೊಫೈಲ್​ ಫೋಟೋಗೆ ಅಳವಡಿಸಿದ್ದ. ಜನರನ್ನು ನಂಬಿಸಲು ಅದೇ ಹೆಸರಿನ ಪ್ರೊಫೈಲುಗಳನ್ನು ಇನ್​ಸ್ಟಾಗ್ರಾಂ, ಲಿಂಕ್ಡಿನ್​ನಲ್ಲಿಯೂ ತೆರೆದಿದ್ದ. ಮಹಿಳೆಯರ ಮನಃಸ್ಥಿತಿ ಗಮನಿಸಿ, ಚಾಟ್​ ಮೂಲಕ ಆಪ್ತಸಮಾಲೋಚನೆ ನಡೆಸುತ್ತಿದ್ದ. ನಂತರ ಖಾಸಗಿ ಅಂಗಗಳ ವಿಡಿಯೋ ಕಳಿಸಿದಲ್ಲಿ ಆರೋಗ್ಯ ಸಮಸ್ಯೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದು ಹೇಳುತ್ತಿದ್ದ. ಆದರೆ ಈ ವಂಚಕತನಕ್ಕೂ ಒಂದು ಆಯಸ್ಸು ಎನ್ನುವುದೊಂದಿರುತ್ತದೆ. ಅದು ಮುಗಿಯುತ್ತಾ ಬಂದಿತ್ತು.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಕಳೆದ ಜುಲೈನಲ್ಲಿ ಈ ವಂಚಕನ ಬಗ್ಗೆ ಮಹಿಳೆಯೊಬ್ಬರಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದರು. ಆಗ ಪೊಲೀಸರು ತನಿಖೆ ನಡೆಸಲಾಗಿ ಈತನ ಕೃತ್ಯಗಳು ಒಂದೊಂದಾಗಿ ಬಯಲಾದವು. ನಂತರ ಈತನ ಮನೆಯ ಮೇಲೆ ದಾಳಿ ನಡೆಸಿ ಅವನ ಲ್ಯಾಪ್​ಟಾಪ್​, ಮೊಬೈಲ್​ ಕ್ಯಾಮೆರಾಗಳನ್ನು ವಶಪಡಿಸಿಕೊಂಡರು. ಮಾಡಿದ್ದುಣ್ಣೋ ಮಹಾರಾಯ. ವಿಚಾರಣೆಯ ಸಂದರ್ಭದಲ್ಲಿ ಆರೋಪಿಯು ನ್ಯಾಯಾಲಯದೆದುರು ತನ್ನ ಅಪರಾಧವನ್ನು ಒಪ್ಪಿಕೊಂಡನು.

ಡೆಪ್ಯೂಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್. ಅರವಿಂದ್ರೆನ್, ‘ಈತ ತನ್ನ ಲೈಂಗಿಕ ಆಸೆಯನ್ನು ಪೂರೈಸಿಕೊಳ್ಳಲು ರೂಪಿಸಿದ ಯೋಜನೆ ಇದಾಗಿತ್ತು. ಸ್ತ್ರೀರೋಗ ವೈದ್ಯೆ ಎಂದು ನಂಬಿಸಿ, ಅನೇಕ ಮಹಿಳೆಯರಿಂದ ವಿಡಿಯೋ ಫೋಟೋ ಕಳಿಸುವಂತೆ ದುಂಬಾಲು ಬೀಳುತ್ತಿದ್ದ. ಈತ ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಹಾಗಾಗಿ ಮೂರುವರ್ಷಗಳದ ಮೇಲೆ ಎಂಟುತಿಂಗಳ ತನಕ ಜೈಲುಶಿಕ್ಷೆ ವಿಧಿಸಲಾಗಿದೆ’ ಎಂದಿದ್ದಾರೆ.

ಯಾವುದಕ್ಕೂ ಜಾಗ್ರತೆ ಆನ್​ಲೈನ್​ ವಂಚಕರಿಂದ!

ಟ್ರೆಂಡಿಂಗ್​ ನ್ಯೂಸ್​ ಓದಲು ಕ್ಲಿಕ್ ಮಾಡಿ

Published On - 12:37 pm, Fri, 28 October 22