AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಟಪದಲ್ಲಿಯೇ ವರನಿಗೆ ಚುಂಬಿಸಿದ ವಧು; ಶಿಕ್ಷೆ ಕೊಡುವುದೋ, ಶಭಾಷ್​ ಎನ್ನುವದೋ?

Indian Marriage : ಎದುರಿಗೇ ಇದ್ದ ಪುರೋಹಿತರು ಈ  ಬಗ್ಗೆ ಏನು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಇದಕ್ಕಾಗಿ ಯಾವ ಶಾಂತಿಹೋಮ ಮಾಡಿಸಬೇಕು ಎಂದಿದ್ಧಾರೆ ಎಂದು ನಮಗೆ ಗೊತ್ತಾದರೆ ಖಂಡಿತ ನಿಮಗೆ ತಿಳಿಸುತ್ತೇವೆ! ಕಾಯುತ್ತೀರಲ್ಲ?

ಮಂಟಪದಲ್ಲಿಯೇ ವರನಿಗೆ ಚುಂಬಿಸಿದ ವಧು; ಶಿಕ್ಷೆ ಕೊಡುವುದೋ, ಶಭಾಷ್​ ಎನ್ನುವದೋ?
Bride And Groom Kiss On The Mandap In Front of Pandit Ji And Family
TV9 Web
| Edited By: |

Updated on:Oct 28, 2022 | 11:08 AM

Share

Viral Video : ಭಾರತೀಯ ಮದುವೆಗಳ ವೈಭವ ಕೇಳಬೇಕೆ? ಮದುವೆ ಮಂಟಪದಿಂದ ಪ್ರಸ್ತದವರೆಗೂ ನೂರೆಂಟು ಶಾಸ್ತ್ರಗಳು. ವಧುವರರೋ ಖಾಸಗಿ ಗಳಿಗೆಗಾಗಿ ತಹತಹಿಸುವಂಥ ಸಂದರ್ಭ. ಅತ್ತ ಪುರೋಹಿತರು, ಇತ್ತ ಬಂಧುಗಳು, ಸುತ್ತುವರಿದ ಸ್ನೇಹಿತರು ಹೀಗೆ. ಈಗಿಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ. ವರ ವಧುವಿಗೆ ತಾಳಿ ಕಟ್ಟುವ ಸಂದರ್ಭ. ವಧುವಿನ ತಾಯಿ ಅದಕ್ಕೆ ಸಹಾಯ ಮಾಡುತ್ತಿದ್ದಾಳೆ. ಇಂಚುಗಳ ಅಂತರದಲ್ಲಿ ವಧುವರರ ಮುಖಗಳು. ಇದ್ದಕ್ಕಿದ್ದ ಹಾಗೆ ವಧು ವರನಿಗೆ ಚುಂಬಿಸಿಬಿಡುತ್ತಾಳೆ! ಹೀಗೆ ಮೈಮರೆತ ಚೆಂದದ ಕ್ಷಣಕ್ಕೆ ತನಗೇ ನಗು ಬಂದು ಜೋರಾಗಿ ನಕ್ಕುಬಿಟ್ಟಿದ್ದಾಳೆ ವಧು. ಬಂಧುಗಳೆಲ್ಲ ಈ ಮುದ್ದಾದ ಕ್ಷಣಗಳನ್ನು ನೋಡಿ ಆನಂದಿಸಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ವರನಿಗೆ ಈ ಅನಿರೀಕ್ಷಿತತೆಯಿಂದ ನಾಚಿಕೆ ಬಂದಿದೆ. ಏನಿದು ಈಕೆ ಹೀಗೆ ಪುರೋಹಿತರು, ಬಂಧುಬಳಗದವರೆದುರೇ ಚುಂಬಿಸಿದಳೆಂದು ಸುತ್ತುವರೆದವರೆಲ್ಲರನ್ನೂ ಒಂದು ಕ್ಷಣ ನೋಡಿದ್ದಾನೆ. ಕೆಲ ನೆಟ್ಟಿಗರು ಈ ವಿಡಿಯೋ ನೋಡಿ ನಕ್ಕಿದ್ದಾರೆ. ಇದು ಬಹುಶಃ ಪೂರ್ವನಿಯೋಜಿತವಿದ್ದಿರಬೇಕು. ಮಂಟಪದಲ್ಲಿಯೇ ಯಾರು ಯಾರಿಗೆ ಮೊದಲು ಮುತ್ತು ಕೊಡುತ್ತಾರೆ ಎಂದು ಹಾಕಿಕೊಂಡ ಸವಾಲಿರಬಹುದು. ಅಂತೂ ಬಹಳ ಮುದ್ದಾಗಿದೆ ಎಂದಿದ್ದಾರೆ.

ಇನ್ನೂ ಕೆಲವರು ಇದು ಭಾರತೀಯ ವಿವಾಹ ಪದ್ಧತಿಗೆ ವಿರುದ್ಧವಾಗಿದೆ. ಮಂಟಪದಲ್ಲಿಯೇ ಹೀಗೆ ವಧು ವರನನ್ನು ಚುಂಬಿಸಿರುವುದು ಅಪರಾಧ ಎಂಬಂತೆ ವಾದ ಮಾಡಿದ್ದಾರೆ. ಭಾರತೀಯ ಸಂಸ್ಕೃತಿಯ ಮರ್ಯಾದೆಯನ್ನು ಹೀಗೇ ಕಳೆಯುವುದು ಈಗಿನ ಹುಡುಗಿಯರು ಎಂದು ಕೆಲವರು ಕುಪಿತರಾಗಿದ್ದಾರೆ. ಇನ್ನೂ ಕೆಲವರು ರೀಲ್ ಮಾಡಿ ಪ್ರಸಿದ್ಧಿ ಹೊಂದಲೆಂದೇ ಈಕೆ ಹೀಗೆ ಮಾಡಿದ್ದಿದೆ ಎಂದು ಹಲವರು ಹೇಳಿದ್ದಾರೆ.

ಎದುರಿಗೇ ಇದ್ದ ಪುರೋಹಿತರು ಈ  ಬಗ್ಗೆ ಏನು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಇದಕ್ಕಾಗಿ ಯಾವ ಶಾಂತಿಹೋಮ ಮಾಡಿಸಬೇಕು ಎಂದಿದ್ಧಾರೆ ಎಂದು ನಮಗೆ ಗೊತ್ತಾದರೆ ಖಂಡಿತ ನಿಮಗೆ ತಿಳಿಸುತ್ತೇವೆ! ಕಾಯುತ್ತೀರಲ್ಲ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:04 am, Fri, 28 October 22