ಮದುವೆಯಲ್ಲಿ ತಮ್ಮ ಮುದ್ದಿನ ನಾಯಿಯೊಂದಿಗೆ ನರ್ತಿಸಿದ ವಧುವರ
Wedding Ceremony : ಭಾರತೀಯ ಮದುವೆಗಳಲ್ಲಿ ಇಂಥ ದೃಶ್ಯವನ್ನು ಊಹಿಸಿಕೊಳ್ಳಿ, ಮದುವೆ ಕಾರ್ಯಗಳು ಶುರುವಾಗುವ ಮೊದಲೇ ಸಾಕುಪ್ರಾಣಿಗಳನೆಲ್ಲ ಮೈಲಿದೂರ ಕಟ್ಟಿಹಾಕಿ ಎಂಬ ‘ಆದೇಶ’ ಹೊರಬರುತ್ತದೆ!
Viral Video : ವಿದೇಶಗಳಲ್ಲಿ ಪ್ರಾಣಿಗಳನ್ನು ಮನುಷ್ಯ ಸಮಾನರಾಗಿಯೇ ಕಾಣುವ ರೂಢಿ ಇದೆ. ಊಟ ಪಾಠ ಆಟ ನಿದ್ದೆ ಪ್ರವಾಸ ಹೀಗೆ. ಎಲ್ಲಿ ಹೋದರೂ ತಮ್ಮೊಂದಿಗೇ ತಮ್ಮ ಸಾಕುಪ್ರಾಣಿಗಳನ್ನು ಕರೆದೊಯ್ಯುತ್ತಾರೆ. ಮಗು ಬೇರೆ ಅಲ್ಲ ಪ್ರಾಣಿ ಬೇರೆ ಅಲ್ಲ ಎಂಬಂತೆ ಅಷ್ಟೇ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಪ್ರಾಣಿಪ್ರೀತಿಯ ಮತ್ತೊಂದು ಮಜಲನ್ನು ತೋರಿಸುತ್ತದೆ. ಮದುಮಕ್ಕಳು ತಮ್ಮ ಮದುವೆಯಲ್ಲಿ ತಮ್ಮ ಮುದ್ದಿನ ನಾಯಿಯನ್ನು ಎತ್ತಿಕೊಂಡೇ ನೃತ್ಯ ಮಾಡಿದ್ದಾರೆ.
View this post on Instagram
@ilovemyretrieverdog ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಮೊದಲು ಈ ವಿಡಿಯೋ ಅನ್ನು ಹಂಚಿಕೊಂಡಿದ್ದು ಟಿಕ್ಟಾಕ್ನಲ್ಲಿ @steppdunn722. ಈಗಾಗಲೇ ಈ ವಿಡಿಯೋ ಸುಮಾರು 7 ಮಿಲಿಯನ್ ಜನರಿಂದ ನೋಡಲ್ಪಟ್ಟಿದೆ. 6 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ, ಖುಷಿಪಟ್ಟಿದ್ಧಾರೆ.
‘ಎಂಥ ಚೆಂದದ ವಿಡಿಯೋ ಇದು. ನಿಮ್ಮಿಬ್ಬರಿಗೂ ಅಭಿನಂದನೆ’ ಎಂದು ನವದಂಪತಿಗಳನ್ನು ಹಾರೈಸಿದ್ದಾರೆ. ‘ಇದು ಸ್ವಲ್ಪ ಅತಿಯೂ ಮತ್ತು ಬಹಳ ಅಮೂಲ್ಯವೂ ಆಗಿದೆ. ಈಗ ನನ್ನ ಜೊತೆಗಿರುವ ನಾಯಿ ಆಗ ನನ್ನ ಮದುವೆಯ ಸಂದರ್ಭದಲ್ಲಿ ಇದ್ದಿದ್ದರೆ ಹೀಗೆಯೇ ನಮ್ಮಿಬ್ಬರ ನಡುವೆಯೇ ಇರುತ್ತಿತ್ತು’ ಎಂದಿದ್ದಾರೆ ಮತ್ತೊಬ್ಬರು. ‘ಇದು ಮಾತ್ರ ಕೋಟಿ ಕೊಟ್ಟರೂ ಸಿಗದ ಸಂತೋಷ. ಮೂವರಿಗೂ ಒಳ್ಳೆಯದಾಗಲಿ’ ಎಂದು ಮಗದೊಬ್ಬರು ಹಾರೈಸಿದ್ದಾರೆ.
ನಿನಗೆ ನಾನಿದ್ದೇನೆ. ನನಗೆ ನೀನು ಬೇಕು, ನೀನು ನನ್ನೊಂದಿಗೇ ಇರುತ್ತೀಯಾ, ನೀನಿಲ್ಲದೆ ನನಗಿರಲು ಆಗದು, ನನ್ನೊಂದಿಗೆ ನೀನೂ ಇರಲೇಬೇಕು… ಇಂಥ ಮಾತುಗಳು ಮತ್ತು ಅದಕ್ಕೆ ಪುಷ್ಠಿ ನೀಡುವ ವರ್ತನೆಗಳು ಜೊತೆಗಿರುವ ಜೀವಕ್ಕೆ ಸ್ಫೂರ್ತಿ, ಭದ್ರಭಾವವನ್ನು ಒದಗಿಸುತ್ತವೆ. ತಾವಿಬ್ಬರೂ ಮದುವೆಯಾಗುತ್ತಿದ್ದಂತೆ ಬೇರೆಯದೇ ಜಗತ್ತಿನಲ್ಲಿ ಮುಳುಗಿ ಹೋದರೆ? ಎಂಬ ಆತಂಕ ನಾಯಿಗೆ ಬರಬಾರದು ಎಂದು ಇವರು ಹೀಗೆ ಆಲೋಚಿಸಿರಲು ಸಾಕು. ಏಕೆಂದರೆ ನಾಯಿಗಳು ಬಹಳ ಸೂಕ್ಷ್ಮ ಮತ್ತು ಅಂತಃಕರುಣವುಳ್ಳವುಗಳು. ಸದಾ ಮನುಷ್ಯನ ವಿಶ್ವಾಸ ಕಾಯ್ದುಕೊಳ್ಳುತ್ತ ಜೀವ ಸವೆಸುವಂಥವು.
ನಿಮಗೇನಾದರೂ ಇಂಥ ಪ್ರೀತಿಯ ಸಾಹಸಕ್ಕೆ ಮುಂದಾಗುವ ಆಲೋಚನೆ ಇದೆಯೋ?
ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ