ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಾಲು ವಿತರಣೆ ಸ್ಥಗಿತ: ಕೆಎಂಎಫ್​ ಜೊತೆ ಮಾತುಕತೆ- ಲಕ್ಷ್ಮೀ ಹೆಬ್ಬಾಳ್ಕರ್

ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಾಲು ವಿತರಣೆ ಸ್ಥಗಿತ ವಿಚಾರವಾಗಿ ಬೆಳಗಾವಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದರು.

ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಾಲು ವಿತರಣೆ ಸ್ಥಗಿತ: ಕೆಎಂಎಫ್​ ಜೊತೆ ಮಾತುಕತೆ- ಲಕ್ಷ್ಮೀ ಹೆಬ್ಬಾಳ್ಕರ್
ಲಕ್ಷ್ಮೀ ಹೆಬ್ಬಾಳ್ಕರ್
Follow us
ವಿವೇಕ ಬಿರಾದಾರ
|

Updated on: Jun 29, 2023 | 5:51 PM

ಬೆಳಗಾವಿ: ಅಂಗನವಾಡಿ (Anganwadi) ಮಕ್ಕಳಿಗೆ, ಗರ್ಭಿಣಿಯರಿಗೆ (Pregnant Women), ಬಾಣಂತಿಯರಿಗೆ ಹಾಲು ವಿತರಣೆ ಸ್ಥಗಿತವಾಗಿದೆ. ಕಳೆದ ನಾಲ್ಕು ತಿಂಗಳಿಂದ ನನ್ನ ಇಲಾಖೆಗೆ ಹಾಲು ಪೂರೈಕೆ ಆಗುತ್ತಿಲ್ಲ. ಹಾಲಿನ ಬೆಲೆ ಹೆಚ್ಚಾಗಿದೆ. ಹಿಂದಿನ ಬೆಲೆಯಲ್ಲಿ ಹಾಲಿನ ಪೌಡರ್ ಕೊಡಲು ಆಗುವುದಿಲ್ಲ ಎಂದು ಕೆಎಂಎಫ್‌ನವರು (KMF) ವಿಥ್ ಡ್ರಾ ಮಾಡಿದ್ದಾರೆ. ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡಬೇಕೆಂಬುವುದು ನಮ್ಮ ಉದ್ದೇಶ. ಈಗಾಗಲೇ ನಾವು ಮಾತುಕತೆ ನಡೆಸಿದ್ದೇವೆ. ಹಾಲಿನ ಪೌಡರ್ ಕೊಡಲಾಗದಿದ್ದರೆ ಬೇರೆ ಪೌಷ್ಟಿಕ ಆಹಾರ ಕೊಡುವ ಬಗ್ಗೆ ಚರ್ಚೆ ಮಾಡುವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹೇಳಿದರು.

ವಿಚಾರವಾಗಿ ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಗೃಹಲಕ್ಷ್ಮೀ ಯೋಜನೆ ಅರ್ಜಿ ಹೆಸರಿನಲ್ಲಿ 150 ರೂ. ವಸೂಲಿ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು ಬಳ್ಳಾರಿಯಲ್ಲಿ ಈ ರೀತಿ ಪ್ರಕರಣ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಗೃಹಲಕ್ಷ್ಮೀ ಯೋಜನೆಗೆ ಒಂದೂ ರೂ. ಖರ್ಚು ಮಾಡುವುದು ಬೇಡ. ಅರ್ಜಿ ಸಲ್ಲಿಕೆಗೆ ನಿಗದಿಯಾದ 20 ರೂ. ಹಣವನ್ನು ಸರ್ಕಾರ ಭರಿಸಲಿದೆ. ನನ್ನ ಇಲಾಖೆಯ ಎಲ್ಲ ಸಿಬ್ಬಂದಿಗೂ ಈಗಾಗಲೇ ಸೂಚನೆ ನೀಡಿದ್ದೇನೆ. ಸೇವಾಸಿಂಧು, ಗ್ರಾಮ ಒನ್, ನಾಡಕಚೇರಿ, ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್​ನಲ್ಲಿ ಅರ್ಜಿ ಸಲ್ಲಿಸುವ ವೆಚ್ಚವನ್ನು ಸರ್ಕಾರ ಭರಿಸುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ: ಬೆಳಗಾವಿಯ ಗ್ರೇಡ್-2 ತಹಶೀಲ್ದಾರ್ ಅನುಮಾನಸ್ಪದ ಸಾವು: ಹೆಂಡ್ತಿ, ಭಾವನ ಮೇಲೆ ಅನುಮಾನ

ಸೇವಾ ಕೇಂದ್ರಗಳಿಗೆ ಇಲಾಖೆಯಿಂದಲೇ ಅರ್ಜಿಗೆ 20 ರೂ. ನೀಡುತ್ತೇವೆ. ಮಧ್ಯವರ್ತಿಗಳ ಆಮಿಷಗಳಿಗೆ ಮಹಿಳೆಯರು ಕಿವಿಗೊಡಬಾರದು. ಅರ್ಜಿ ಸಲ್ಲಿಕೆ ವೇಳೆ ಯಾರೂ ಒಂದು ರೂಪಾಯಿಯನ್ನೂ ಕೊಡಬೇಡಿ. ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗೆ ಯಾವುದೇ ಟೈಂ ಲಿಮಿಟ್ಸ್​​ ಇಲ್ಲ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸ್ವೀಕಾರ ಪ್ರಕ್ರಿಯೆ ನಿರಂತರವಾಗಿ ಇರುತ್ತೆ ಎಂದು ಹೇಳಿದರು.

ಇನ್ನು ಬೆಳಗಾವಿಯಲ್ಲಿ ಗ್ರೇಡ್ 2 ತಹಶಿಲ್ದಾರ್ ಅಶೋಕ್ ಮಣ್ಣಿಕೇರಿ ಅನುಮಾನಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ನಿನ್ನೆ (ಜೂ.28) ರಾತ್ರಿ ಮೂರು ಗಂಟೆ ಸುಮಾರಿಗೆ ನನ್ನ ಮೊಬೈಲ್‌ಗೆ ಎರಡ್ಮೂರು ಮಿಸ್‌ಕಾಲ್ ಇತ್ತು. ಅಶೋಕ್ ಮಣ್ಣಿಕೇರಿ ಮೊಬೈಲ್‌ನಿಂದ ಅವರ ಧರ್ಮಪತ್ನಿ ಮೊಬೈಲ್​​ನಿಂದ ಮಿಸ್ ಕಾಲ್ ಇತ್ತು. ಬೆಳಗ್ಗೆ 5.30ಕ್ಕೆ ಮಿಸ್ ಕಾಲ್ ನೋಡಿ ನಾನು ಕರೆ ಮಾಡಿದೆ. ಆಗ ಅವರ ತಮ್ಮನ ಹೆಂಡತಿ ಫೋನ್ ರಿಸೀವ್ ಮಾಡಿ ಹೇಳಿದಾಗ ಗೊತ್ತಾಯ್ತು. ಬೆಳ್ಳಂಬೆಳಗ್ಗೆ ನನಗೆ ಬಹಳ ಶಾಕ್ ಆಯ್ತು ಎಂದರು.

2018ರಿಂದ 2023ರವರೆಗೆ ನಾಲ್ಕೂವರೆ ವರ್ಷ ನನ್ನ ಆಪ್ತ ಕಾರ್ಯದರ್ಶಿ ಆಗಿದ್ದರು. ರಾತ್ರಿ ಹಗಲು ಸಹಾಯ ಮಾಡಿ ಕೆಲಸ ಮಾಡಿ ಕ್ಷೇತ್ರದ ಜನರ ಕಷ್ಟ-ಸುಖಕ್ಕೆ ಸ್ಪಂದಿಸಿದ ಅತ್ಯಂತ ಸರಳ ವ್ಯಕ್ತಿ. ಆತ್ಮೀಯ ಸಹೋದರ ಅಂತಾನೆ ಹೇಳುತ್ತೇನೆ. ಕ್ಷೇತ್ರದ ಜನರಿಗೆ ಸಹಾಯ ಮಾಡುವಲ್ಲಿ ಕೆಲಸ ಮಾಡುವುದರಲ್ಲಿ ಬಹಳ ಮುಂಚೂಣಿಯಲ್ಲಿದ್ದರು. ಇಂತಹ ಆಪ್ತ ಸಹಾಯಕನ ಕಳೆದುಕೊಂಡಿದ್ದೇನೆಂದು ಬಹಳ ಬೇಜಾರಾಗುತ್ತೆ ಎಂದು ಸಂತಾಪ ವ್ಯಕ್ತಪಡಿಸಿದರು.

ನಾನು ಮಂತ್ರಿ ಆದ ಮೇಲೆ ಮಂತ್ರಿ ಗಾಡಿ ಹತ್ತುತ್ತೀನಿ ಅಂತ ಬಹಳ ಆಸೆ ಪಟ್ಟಿದ್ದರು. ನನ್ನ ಇಲಾಖೆಗೆ ಕರೆಸಿಕೊಳ್ಳೋಣ ಅಂತ ಮೊನ್ನೆ ಸರ್ಕಾರಕ್ಕೆ ನಾನು ವಿನಂತಿ ಮಾಡಿ ಪತ್ರ ಕೊಟ್ಟಿದ್ದೆ. ನನಗೆ ನನ್ನ ಕೈ ಕಳೆದುಕೊಂಡಿದ್ದೇನೋ ಅಂತ ಅನಿಸುತ್ತಿದೆ ಅಶೋಕ್ ಮಣ್ಣಿಕೇರಿ ಸಾವಿನ ಬಗ್ಗೆ ಅನುಮಾನ ಇದೆ ಎಂದು ಸಹೋದರಿಯರು ದೂರು ವಿಚಾರವಾಗಿ ಮಾತನಾಡಿದ ಅವರು ಅದರ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ, ಏನೇ ಇದ್ದರೂ ಕಾನೂನು ಇದೆ. ಕಾನೂನಾತ್ಮಕವಾದ ಕೆಲಸ ನಡೆಯುತ್ತೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ