Bidar Tourism: ಬೀದರ್ ಪ್ರವಾಸೋದ್ಯಮ ಅಭಿವೃದ್ಧಿ: ಜಿಲ್ಲಾಡಳಿತಕ್ಕೂ ಆಸಕ್ತಿಯಿಲ್ಲ, ಶಾಸಕರಿಗೂ ಬೇಕಿಲ್ಲ!

Bidar Tourism: ಬೀದರ್ ಪ್ರವಾಸೋದ್ಯಮ ಅಭಿವೃದ್ಧಿ: ಜಿಲ್ಲಾಡಳಿತಕ್ಕೂ ಆಸಕ್ತಿಯಿಲ್ಲ, ಶಾಸಕರಿಗೂ ಬೇಕಿಲ್ಲ!

ಸುರೇಶ ನಾಯಕ
| Updated By: ಸಾಧು ಶ್ರೀನಾಥ್​

Updated on: Jun 29, 2023 | 6:10 PM

ಇಲ್ಲಿನ ಪ್ರವಾಸೋದ್ಯಮದ ಅಭಿವೃದ್ಧಿ ಬಗ್ಗೆ ಹಿರಿಯ ರಾಜಕಾರಣಿಗಳನ್ನ ಕೇಳಿದರೆ ಇಲ್ಲಿನ ಐತಿಹಾಸಿಕ ಕೋಟೆಗಳು ಸ್ಮಾರಕಗಳು ಪುರಾತತ್ವ ಇಲಾಖೆಯ ಅಡಿಯಲ್ಲಿದ್ದು ನಾವು ಏನೂ ಮಾಡದಂತಹ ಸ್ಥಿತಿಯಲ್ಲಿದ್ದೇವೆಂದು ಹೇಳುತ್ತಾರೆ. ಆದರೆ ಇಲ್ಲಿನ ಜನರು ಹೇಳುವುದೇ ಬೇರೆ.

ಆ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದ್ದು ಐತಿಹಾಸಿಕ ಸ್ಮಾರಕಗಳಿಂದ ರಾಷ್ಟ್ರದ ಗಮನ ಸೆಳೆಯುತ್ತಿದೆ. ದೇಶದ ಅತೀ ದೊಡ್ಡ ಕೋಟೆ, ಆರು ಶತಮಾನದಷ್ಟೂ ಹಳೇದಾದ ಬಹುಮನಿ ಸುಲ್ತಾನರ ಕಾಲದ ರಾಜ ಮಹಾರಾಜರ ಘೋರಿಗಳು ಜಿಲ್ಲೆಯ ಗತವೈಭವವನ್ನ ಸಾರಿ ಸಾರಿ ಹೇಳುತ್ತಿವೆ. ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದರು ಸರಕಾರ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರೆತೆಯಿಂದ ಪ್ರವಾಸಿಗರನ್ನ ಸೇಳೆಯಲು ಹರಸಾಹಸ ಪಡುವಂತಾಗಿದೆ. ದೇಶದ ಅತಿ ದೊಡ್ಡ ಕೋಟೆಯಿದ್ದರು ಪ್ರವಾಸಿಗರನ್ನ ಸೆಳೆಯುತ್ತಿಲ್ಲ ಬೀದರ್ ಜಿಲ್ಲೆ… ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದರೂ ನಿರಾಸಕ್ತಿ…. ಐತಿಹಾಸಿಕ ಸ್ಥಳಗಳಿದ್ದರು ಪ್ರವಾಸಿಗರನ್ನ ಸೆಳೆಯುವ ಯೋಜನೆ ಇಲ್ಲ…. ಪ್ರವಾಸಿಗರನ್ನ ಸೆಳೆಯಲು ಏನೆನೋ ಮಾಡುವುದಾಗಿ ಹೇಳಿ ನೆಪಥ್ಯಕ್ಕೆ ಸರಿದ ಅಧಿಕಾರಿಗಳು…ಹೌದು ದಖನ್ ಪ್ರಸ್ತಭೂಮಿಯಲ್ಲಿರುವ ಬೀದರ್ ಪಾರಂಪರಿಕವಾಗಿ ಸಮೃದ್ಧವಾಗಿದೆ. ಇಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿಯೂ ಕೋಟೆಗಳು ವಾಡೆಗಳು ಚಾಲುಕ್ಯರ ಕಾಲದ ದೇವಾಲಯಗಳಿಗೆ. ಇನ್ನು ನಗರದಲ್ಲಂತೂ ಆರು ಶತಮಾನದಷ್ಟೂ ಹಳೆಯದಾದ ಬಹುಮನಿ ಸುಲ್ತಾನರ ಕಾಲದ ರಾಜಮಹಾರಾಜರ ಕಾಲದ ಘೊಡಿಗಳಿವೆ. ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲೂ ಐತಿಹಾಸಿಕ ತಾಣಗಳಿರುವ ಕಾರಣ ಟೂರಿಸಂ ಕಾರಿಡಾರ್ ಯೋಜನೆ ರೂಪಿಸಬೇಕು ಎನ್ನುವ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಇಂದಿಗೂ ಕೂಡಾ ಕನಸಾಗಿಯೇ ಉಳಿದಿದೆ.

ಇದರ ಜೊತೆಗೆ ಇಲ್ಲಿನ ಐತಿಹಾಸಿಕ ಸ್ಮಾರಕಗಳ ರಕ್ಷಣೆಯೂ ಕೂಡಾ ಇಲ್ಲಿ ಮಾಡುತ್ತಿಲ್ಲವಾದ್ದರಿಂದ ಅವುಗಳು ಹಾಳಾಗುತ್ತಿವೆ. ಇಲ್ಲಿನ ಇತಿಹಾಸ ಪ್ರಸಿದ್ಧ ಸ್ಮಾರಕಗಳನ್ನ ನೋಡಲು ಪ್ರತಿನಿತ್ಯ ನೂರಾರು ಪ್ರವಾಸಿಗರು ಶಾಲಾ ಕಾಲೇಜುಗಳಿಂದ ನೂರಾರು ಮಕ್ಕಳು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಸ್ಮಾರಕಗಳನ್ನ ವೀಕ್ಷಣೆಗೆಂದು ಬರುವವರಿಗೆ ಇಲ್ಲಿನ ಇತಿಹಾಸವನ್ನ ಪರಿಚಯಿಸಲು ಟೂರ್​​ ಗೈಡ್​​​ಗಳೂ ಇಲ್ಲಿ ಇಲ್ಲ. ಇನ್ನು ಇಲ್ಲಿ ಅದೆಷ್ಟೋ ಸಾಮಾಧಿಗಳಿವೆ, ಕೋಟೆಗಳಿವೆ. ಅವು ಹಾಳಾಗಿ ಹೋಗುತ್ತಿವೆ. ನಾವೆಲ್ಲ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವನ್ನ ಕಳೆದ ವರ್ಷದ ಅದ್ಧೂರಿಯಾಗಿ ಆಚರಿಸಿದ್ದೇವೆ. ದೇಶದ ಇತಿಹಾಸ ಸಾರುವ ಕೋಟೆಗಳು, ಸ್ಮಾರಕಗಳು, ಇತಿಹಾಸ ಪ್ರಸಿದ್ಧ ಮಸೀದಿಗಳ ಮೇಲೆ ತ್ರಿವರ್ಣದ ಧ್ವಜದ ಜಗಮಗಿಸುವ ಲೈಟ್ ಗಳ ಅಳವಡಿಸಿ ಖುಷಿಪಟ್ಟಿದ್ದೇವೆ. ಆದರೆ ಇದರ ಜೊತೆಗೆ ಪ್ರಾವಾಸೋದ್ಯಮಕ್ಕೆ ಹೆಚ್ಚಿನ ಒತ್ತುಕೊಡಿ ಎಂದು ಇಲ್ಲಿನ ಜನರು ಮನವಿ ಮಾಡುತ್ತಿದ್ದಾರೆ.

ಇನ್ನು ಜಿಲ್ಲೆ ಪ್ರವಾಸೋದ್ಯಮಕ್ಕೆ ಪ್ರವಾಸಿಗರನ್ನ ಸೆಳೆಯಲು ಹೇಳಿ ಮಾಡಿಸಿದ ಸ್ಥಳವಾಗಿದೆ. ಇನ್ನು ಪ್ರತಿ ಶನಿವಾರ ಹಾಗೂ ಭಾನುವಾರದಂದು ಬೀದರ್ ಕೋಟೆ, ಮಹಮಹ್ಮದ್ ಗವಾನ್ ಪುರಾತನ ವಿಶ್ವವಿದ್ಯಾಲಯ, ಚೌಬಾದ್ ಹಾಗೂ ಅಷ್ಟೂರಿನಲ್ಲಿರುವ ಬಹುಮನಿ ಸುಲ್ತಾನರ ಸ್ಮಾರಕ, ನರಸಿಂಹ ಝರಣಾ, ಗುರುನಾನಕ ಝೀರಾ, ಬಸವಕಲ್ಯಾಕ ಕೋಟೆ, ಜಲಸಂಗ್ವಿ ಹಾಗೂ ನಾರಾಯಣಪುರದ ಐತಿಹಾಸಿಕ ಶಿವನ ದೇವಾಲಯಗಳನ್ನ ನೋಡಲು ಪ್ರತಿ ನಿತ್ಯ ಕನಿಷ್ಟ ಎರಡು ಸಾವರ ಜನ ಬರುತ್ತಾರೆ.

ಇನ್ನುಳಿದ ದಿನಗಳಲ್ಲಿ ಈ ಸಂಖ್ಯೆ 500 ದಾಟುವುದಿಲ್ಲ. ಇದಕ್ಕೆ ಪ್ರಮುಖವಾದ ಕಾರಣವೆಂದರೆ ಜಿಲ್ಲೆಯಲ್ಲಿನ ಐತಿಹಾಸಿಕ ಸ್ಥಳಗಳ ಬಗ್ಗೆ ಪ್ರಚಾರದ ಕೊರತೆ ಎದ್ದು ಕಾಣುತ್ತಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಪ್ರವಾಸಿಗರು ಬಂದರೆ ಅವರಿಗೆ ಇಲ್ಲಿ ಉಳಿದುಕೊಳ್ಳಲು ಉತ್ತಮವಾದ ಹೊಟೇಲ್ ಗಳಿಲ್ಲ. ಹೀಗಾಗಿ ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಇನ್ನು ಪ್ರವಾಸೋದ್ಯಮಕ್ಕೆ ಇಲ್ಲಿ ಸಾಕಷ್ಟುಯ ಅವಕಾಶಗಳಿದ್ದರೂ ಜಿಲ್ಲಾಡಳಿತ, ಸರಕಾರ ಹಾಗೂ ಜನರ ಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಇಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಕಾಣಿತ್ತಿಲ್ಲ. ಇನ್ನು ಇಲ್ಲಿನ ಪ್ರವಾಸೋದ್ಯಮದ ಅಭಿವೃದ್ಧಿ ಬಗ್ಗೆ ಹಿರಿಯ ರಾಜಕಾರಣಿಗಳನ್ನ ಕೇಳಿದರೆ ಇಲ್ಲಿನ ಐತಿಹಾಸಿಕ ಕೋಟೆಗಳು ಸ್ಮಾರಕಗಳು ಪುರಾತತ್ವ ಇಲಾಖೆಯ ಅಡಿಯಲ್ಲಿದ್ದು ನಾವು ಏನೂ ಮಾಡದಂತಹ ಸ್ಥಿತಿಯಲ್ಲಿದ್ದೇವೆಂದು ಹೇಳುತ್ತಾರೆ. ಆದರೆ ಇಲ್ಲಿನ ಜನರು ಹೇಳುವ ಪ್ರಕಾರ ಇಲ್ಲಿನ ಪ್ರವಾಸಿ ಸ್ಥಳಗಳನ್ನ ಅಭಿವೃದ್ಧಿ ಪಡಿಸಿ ಅವುಗಳನ್ನ ಜನರಿಗೆ ಪರಿಚಯಿಸುವಲ್ಲಿ ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರು ವಿಫಲರಾಗಿದ್ದಾರೆಂದು ಹೇಳುತ್ತಿದ್ದಾರೆ.