Madikeri; ಎಲ್ಲಾದಕ್ಕೂ ಪರ್ಸೆಂಟೇಜ್ ನಿಗದಿ ಮಾಡಿರುವ ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯದು: ಆರ್ ಅಶೋಕ, ಶಾಸಕ
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಗ್ಗು ಬಡಿದು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಆರ್ ಅಶೋಕ ಕರೆ ನೀಡಿದರು.
ಮಡಿಕೇರಿ: ನಗರದಲ್ಲಿಂದು ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತಾಡಿದ ಶಾಸಕ ಆರ್ ಅಶೋಕ (R Ashoka) ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ (Congress government) ಬಹಳ ದಿನ ಉಳಿಯಲ್ಲ ಎಂದು ಹೇಳಿದರು. ಸರ್ಕಾರದಲ್ಲಿ ಈಗಾಗಲೇ ಪರ್ಸೆಂಟೇಜ್ (percentage) ವ್ಯವಹಾರ ಶುರುವಾಗಿದೆ, ವರ್ಗಾವಣೆಗೆ ಇಷ್ಟು, ಬಿಲ್ ಗಳನ್ನು ಪಾಸ್ ಮಾಡಲು ಇಂತಿಷ್ಟು, ಪ್ಲ್ಯಾನ್ ಗಳನ್ನು ಮಂಜೂರು ಮಾಡಲು ಇಷ್ಟು ಹಣ ಅಂತ ನಿಗದಿ ಮಾಡಲಾಗಿದೆ ಎಂದು ಮಾಜಿ ಸಚಿವ ಹೇಳಿದರು. ಕಳೆದ ವಿಧಾನ ಸಭೆಯಲ್ಲಿ ಸೋತಿರುವ ಕಾರಣಕ್ಕೆ ಎದೆಗುಂದುವ ಅವಶ್ಯಕತೆಯಿಲ್ಲ, ನಾವು ಹೋರಾಟ ಮಾಡುವುದನ್ನು ನಿಲ್ಲಿಸಬಾರದು, ವಿಧಾನ ಸಭೆಯ ಒಳಗಡೆ ಮತ್ತು ಹೊರಗಡೆ-ಎರಡೂ ಕಡೆ ಹೋರಾಟ ಜಾರಿಯಲ್ಲಿಡಬೇಕು ಎಂದು ಅಶೋಕ ಹೇಳಿದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಗ್ಗು ಬಡಿದು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಆರ್ ಅಶೋಕ ಕರೆ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos