Belagavi: ಅಶೋಕ್ ಮಣ್ಣಿಕೇರಿ ಅಂತಿಮ ದರ್ಶನ ಪಡೆದ ಲಕ್ಷ್ಮಿ ಹೆಬ್ಬಾಳ್ಕರ್, ಕುಟುಂಬದ ಸದಸ್ಯರನ್ನು ಸಂತೈಸಿದರು

Belagavi: ಅಶೋಕ್ ಮಣ್ಣಿಕೇರಿ ಅಂತಿಮ ದರ್ಶನ ಪಡೆದ ಲಕ್ಷ್ಮಿ ಹೆಬ್ಬಾಳ್ಕರ್, ಕುಟುಂಬದ ಸದಸ್ಯರನ್ನು ಸಂತೈಸಿದರು

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 29, 2023 | 5:53 PM

ಅಲ್ಲಿಗೆ ತೆರಳುವ ಮೊದಲು ಸಚಿವೆ ಟ್ವೀಟ್ ಮೂಲಕ ಅಶೋಕ್ ಸಾವಿಗೆ ಆಘಾತ ಮತ್ತು ದುಃಖ ಪ್ರಕಟಿಸಿದ್ದರು.

ಬೆಳಗಾವಿ: ತನಗೆ ಆಪ್ತರಾಗಿದ್ದ ಮತ್ತು ಮೊದಲ ಬಾರಿ ಶಾಸಕರಾಗಿದ್ದಾಗ ಅಪ್ತ ಸಹಾಯಕರಾಗಿ ಕೆಲಸ ಮಾಡಿದ್ದ ಅಶೋಕ್ ಮಣ್ಣಿಕೇರಿ (Ashok Mannikeri) ಆಕಸ್ಮಿಕ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಎಸಿ ಕಚೇರಿಯಲ್ಲಿ ಗ್ರೇಡ್-2 ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶೋಕ್ ಕಳೆದ ರಾತ್ರಿ ಹೃದಯಾಘಾತದಿಂದ (heart attack) ಮರಣವನ್ನಪ್ಪಿದರು. ಅವರ ಪಾರ್ಥಿವ ಶರೀರದ ಅಂತಿನ ದರ್ಶನ ಪಡೆದ ಸಚಿವೆ ಲಕ್ಷ್ಮಿ ಕುಟುಂಬದ ಸದಸ್ಯರನ್ನು ಸಂತೈಸಿದರು. ಅಲ್ಲಿಗೆ ತೆರಳುವ ಮೊದಲು ಸಚಿವೆ ಟ್ವೀಟ್ ಮೂಲಕ ಅಶೋಕ್ ಸಾವಿಗೆ ಆಘಾತ ಮತ್ತು ದುಃಖ ಪ್ರಕಟಿಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ