Sign In

By signing in or creating an account, you agree with Associated Broadcasting Company's Terms & Conditions and Privacy Policy.

R Ashoka; ಲೋಕ ಸಭಾ ಚುನಾವಣೆ ನಂತರ ರಾಜ್ಯ ರಾಜಕೀಯ ಚಿತ್ರಣ ಬದಲಾಗಲಿದೆ: ಆರ್ ಅಶೋಕ, ಶಾಸಕ

R Ashoka; ಲೋಕ ಸಭಾ ಚುನಾವಣೆ ನಂತರ ರಾಜ್ಯ ರಾಜಕೀಯ ಚಿತ್ರಣ ಬದಲಾಗಲಿದೆ: ಆರ್ ಅಶೋಕ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 19, 2023 | 6:48 PM

ಎಲ್ಲಿಯವರೆಗೆ ಫ್ರೀ ಸ್ಕೀಮ್ ಗಳು ಜಾರಿಯಲ್ಲಿರುತ್ತವೋ ಅಲ್ಲಿವರೆಗೆ ಜನ ಎಂಜಾಯ್ ಮಾಡಲಿ ಅಂತ ಅಶೋಕ ಕುಹುಕವಾಡಿದರು

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಒಂದೊಂದಾಗಿ ಗ್ಯಾರಂಟಿಗಳನ್ನು ಈಡೇರಿಸಲು ಪ್ರಾರಂಭಿಸುತ್ತಿದ್ದಂತೆಯೇ ಬಿಜೆಪಿ ನಾಯಕರು ಅಧೀರರಾಗುತ್ತಿದ್ದಾರೆ ಅಂತ ಭಾಸವಾಗುತ್ತಿದೆ. ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಶಾಸಕ ಆರ್ ಅಶೋಕ (R Ashoka) ಶಕ್ತಿ ಯೋಜನೆಯನ್ನು (Shakti Scheme) ಗೇಲಿ ಮಾಡುವುದು ನಿಲ್ಲಿಸಲಿಲ್ಲ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಖಾಸಗಿ ಬಸ್, ಆಟೋ, ಕ್ಯಾಬ್ ಗಳಿಗೆ ಭಯಂಕರ ನಷ್ಟವಾಗುತ್ತಿದೆ, ಅವುಗಳಲ್ಲೂ ಉಚಿತ ಪ್ರಯಾಣ ಅಂತ ಘೋಷಿಸಿದರೆ ಅವರು ಬದುಕಿಕೊಳ್ಳುತ್ತಾರೆ ಎಂದು ಹೇಳಿದರು. ಯೋಜನೆ ಜಾರಿಗೊಳ್ಳುವ ಮೊದಲು ಇವರಿಂದ ಸಾಧ್ಯವಾಗದು, ಜನಕ್ಕೆ ಮೋಸ ಮಾಡುತ್ತಿದ್ದಾರೆ ಅಂತ ಹೇಳುತ್ತಿದ್ದವರು ಅದು ಜಾರಿಯಾದ ಬಳಿಕ ಮತ್ತೊಂದು ಬಗೆಯ ವರಾತ. ಉಚಿತ ಡ್ರಾಮ ಬಹಳ ದಿನ ನಡೆಯದು, ಲೋಕ ಸಭಾ ಚುನಾವಣೆಯ (Lok Sabha Polls) ನಂತರ ರಾಜ್ಯದಲ್ಲಿ ಏನೇನಾಗಲಿದೆಯೋ? ಹಾಗಾಗಿ, ಎಲ್ಲಿಯವರೆಗೆ ಫ್ರೀ ಸ್ಕೀಮ್ ಗಳು ಜಾರಿಯಲ್ಲಿರುತ್ತವೋ ಅಲ್ಲಿವರೆಗೆ ಜನ ಎಂಜಾಯ್ ಮಾಡಲಿ ಅಂತ ಅಶೋಕ ಕುಹುಕವಾಡಿದರು

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ