AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯ ಗ್ರೇಡ್-2 ತಹಶೀಲ್ದಾರ್ ಅನುಮಾನಸ್ಪದ ಸಾವು: ಹೆಂಡ್ತಿ, ಭಾವನ ಮೇಲೆ ಅನುಮಾನ

ಈ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಆಪ್ತ ಸಹಾಯಕರಾಗಿದ್ದ ಬೆಳಗಾವಿ ಗ್ರೇಡ್-2 ತಹಶೀಲ್ದಾರ್​ ದಿಢೀರ್​ ಮೃತಪಟ್ಟಿದ್ದು, ಈ ಸಾವಿನ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ.

ಬೆಳಗಾವಿಯ ಗ್ರೇಡ್-2 ತಹಶೀಲ್ದಾರ್ ಅನುಮಾನಸ್ಪದ ಸಾವು: ಹೆಂಡ್ತಿ, ಭಾವನ ಮೇಲೆ ಅನುಮಾನ
Sahadev Mane
| Edited By: |

Updated on:Jun 29, 2023 | 1:49 PM

Share

ಬೆಳಗಾವಿ: ಬೆಳಗಾವಿ (Belagavi) ಎಸಿ ಕಚೇರಿಯ ಗ್ರೇಡ್- 2 ತಹಶೀಲ್ದಾರ್ (tahsildar) ಹಠಾತ್ ಮೃತಪಟ್ಟಿದೆ. ಈ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್​ ಮೊದಲ ಬಾರಿಗೆ ಶಾಸಕರಾಗಿದ್ದ ಅವರ ಆಪ್ತ ಸಹಾಯಕ ಕಾರ್ಯನಿರ್ವಹಿಸಿದ್ದ ‌ಅಶೋಕ‌್ ಮಣ್ಣಿಕೇರಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಇವರ ಸಾವಿನ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಅಶೋಕ್ ಮಣ್ಣಿಕೇರಿ ಪತ್ನಿ ಭೂಮಿ ಮತ್ತು ಆಕೆಯ ಸಹೋದರ ಸ್ಯಾಮ್ಯುಯೆಲ್ ವಿರುದ್ಧವೇ ಕೊಲೆ ಆರೋಪ ಕೇಳಿಬಂದಿದೆ. ಮೃತ ಅಶೋಕ್​ ಕುಟುಂಬಸ್ಥರು ಈ ಬಗ್ಗೆ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಗೆ ದೂರು ನೀಡಿದ್ದು,  ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪದವಿ ಮುಗಿಸಿದ್ದರೂ ಉದ್ಯೋಗವಿಲ್ಲ, ಮದ್ವೆಯಾಗಲು ಹೆಣ್ಣು ಸಿಕ್ಕಿಲ್ಲ; ಖಿನ್ನತೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆ

ಅಶೋಕ್ ಮಣ್ಣಿಕೇರಿ ಕುಟುಂಬ ಬೆಳಗಾವಿಯ ಕಾಳಿ ಅಂಬ್ರಾಯದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿತ್ತು, ತಡರಾತ್ರಿ ಹೃದಯಾಘಾತವಾಗಿದೆ ಎಂದು ಅಶೋಕ್ ಮಣ್ಣಿಕೇರಿ ಅವರನ್ನು ಪತ್ನಿ ಭೂಮಿ ಹಾಗೂ ಆಕೆಯ ಸಹೋದರ ಸ್ಯಾಮ್ಯುಯೆಲ್ ಅವರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದ್ರೆ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆಯೇ ಅಶೋಕ್ ಮಣ್ಣಿಕೇರಿ ಕೊನೆಯುಸೆರೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಅಶೋಕ್ ಮಣ್ಣಿಕೇರಿ ಸಾವಿನ ಹಿಂದೆ ಅನುಮಾನಗಳು ವ್ಯಕ್ತವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆಗೆ ನಡೆಸುವಂತೆ ಅಶೋಕ್ ಮಣ್ಣಿಕೇರಿ ಕುಟುಂಬಸ್ಥರು ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಭೂಮಿ ಹಾಗೂ ಆಕೆಯ ಸಹೋದರ ಸ್ಯಾಮ್ಯುಯೆಲ್ ಮೇಲೆ ಮೃತ ಅಶೋಕ್ ಕುಟುಂಬಸ್ಥರು ಹಲ್ಲೆಗೆ ಯತ್ನಿಸಿದ್ದಾರೆ. ಆ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಇಬ್ಬರನ್ನು ಕರೆದುಕೊಂಡು ಹೋಗಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಳೆದ ಬಾರಿ ಶಾಸಕಿಯಾಗಿದ್ದ ವೇಳೆ ಮೃತ ಅಶೋಕ್ ಮಣ್ಣಿಕೇರಿ ಅವರು ಆಪ್ತ ಸಹಾಯಕನಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಬೆಳಗಾವಿ ಎಸಿ ಕಚೇರಿಯಲ್ಲಿ ಗ್ರೇಡ್ 2 ತಹಶಿಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಜನಾನುರಾಗಿ ಅಧಿಕಾರಿ ಎಂದೇ ಹೆಸರುವಾಸಿಯಾಗಿದ್ದ ಅಶೋಕ್ ಮಣ್ಣಿಕೇರಿ ಇದೀಗ ಹಠಾತ್ ಸಾವಿನ ಸುದ್ದಿ ಎಲ್ಲರಿಗೂ ಆಘಾತ ಉಂಟು ಮಾಡಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ

ಗ್ರೇಡ್ 2 ತಹಶಿಲ್ದಾರ್ ಅಶೋಕ ಮಣ್ಣಿಕೇರಿ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ ಸೂಚಿಸಿದ್ದಾರೆ. ‘ನನ್ನ ಆಪ್ತ ಸಹಾಯಕರಾಗಿದ್ದ ಅಶೋಕ ಮಣ್ಣಿಕೇರಿ ನಿಧನದ ಸುದ್ದಿ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ. ಅಪಾರ ಜ್ಞಾನ, ಅನುಭವವುಳ್ಳ ವ್ಯಕ್ತಿ ಕಳೆದುಕೊಂಡಿರುವುದು ದೊಡ್ಡ ನಷ್ಟವೆನಿಸುತ್ತಿದೆ. ಈ ಸಮಯದಲ್ಲಿ ಅವರ ಆತ್ಮಕ್ಕೆ ಶಾಂತಿಯನ್ನು‌ ಕೋರಿ ಅವರ ಕುಟುಂಬಸ್ಥರಿಗೆ ಭಗವಂತ ನೋವು ಸಹಿಸುವ ಶಕ್ತಿ ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 1:44 pm, Thu, 29 June 23