ಪದವಿ ಮುಗಿಸಿದ್ದರೂ ಉದ್ಯೋಗವಿಲ್ಲ, ಮದ್ವೆಯಾಗಲು ಹೆಣ್ಣು ಸಿಕ್ಕಿಲ್ಲ; ಖಿನ್ನತೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ತೇಲಂಗಾರ ಗ್ರಾಮದ ಹೊರವಲಯದಲ್ಲಿ ಯುವಕನೊರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗರಾಜ ಗಣಪತಿ ಗಾಂವ್ಕರ (35) ಮೃತ ವ್ಯಕ್ತಿ.
ಉತ್ತರ ಕನ್ನಡ: ರಾಜ್ಯದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ಹುಡುಗಿ ಸಿಕ್ಕಿಲ್ಲ, ಕೆಲಸ ಸಿಕ್ಕಿಲ್ಲ ಎಂಬಿತ್ಯಾದಿ ಕಾರಣಗಳಿಂದ ಇಂತಹ ದುರ್ಘಟನೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ(Yellapur)ದ ತೇಲಂಗಾರ ಗ್ರಾಮದ ಹೊರವಲಯದಲ್ಲಿ ಯುವಕನೊರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗರಾಜ ಗಣಪತಿ ಗಾಂವ್ಕರ (35) ಮೃತ ವ್ಯಕ್ತಿ. ಇತ ಕೆಲವು ವರ್ಷಗಳ ಹಿಂದೆ ಪದವಿ ಮುಗಿಸಿದ್ದರೂ, ಓದಿಗೆ ತಕ್ಕ ಹಾಗೆ ಕೆಲಸ ಸಿಕ್ಕಿಲ್ಲ. ಇದರಿಂದ ಮದುವೆಯಾಗಲು ಹೆಣ್ಣು ಕೂಡ ಸಿಗುತ್ತಿರಲಿಲ್ಲವಂತೆ. ಇದೇ ಕಾರಣಕ್ಕೆ ಮನನೊಂದಿದ್ದ ಯುವಕ, ಖಿನ್ನತೆಗೆ ಒಳಗಾಗಿ ಇದೀಗ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮೃತ ಯುವಕ ನಾಗರಾಜ್
ಇನ್ನು ಮೃತ ನಾಗರಾಜ ಉದ್ಯೋಗಕ್ಕಾಗಿ ಅಲೆದು ಸುಸ್ತಾಗಿ ಹೋಗಿದ್ದ. ಎಷ್ಟೇ ಅಲೆದರೂ ಉದ್ಯೋಗ ದೊರೆತಿರಲಿಲ್ಲ. ಇದಾದ ಮೇಲೆ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಈ ಎಲ್ಲಾ ಚಿಂತೆಗಳ ಮಧ್ಯೆ ಇತ್ತಿಚೆಗೆ ಆತನಿಗೆ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ. ಈ ಎಲ್ಲಾ ಕಾರಣಗಳಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಆತ ಮನೆಯ ಸಮೀಪದಲ್ಲಿರುವ ಗುಡ್ಡಕ್ಕೆ ಹೋಗಿ, ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಇಬ್ಬರು ಯುವಕರೊಂದಿಗೆ ಪ್ರೀತಿಯ ನಾಟಕ; ವಿಷಯ ತಿಳಿದ ಪ್ರಿಯಕರರಿಂದ ಪ್ರೀಯತಮೆಗೆ ಬ್ಲ್ಯಾಕ್ಮೇಲ್, ಯುವತಿ ಆತ್ಮಹತ್ಯೆ
ಹಾಡಹಗಲೇ ಮಚ್ಚು ಹಿಡಿದು ದಾಂಧಲೆ ನಡೆಸಿದ್ದ ಪುಡಿ ರೌಡಿ ಬಂಧನ
ಕೋಲಾರ: ಕೆಜಿಎಫ್ ನಗರದ ರಾಬರ್ಟ್ಸನ್ ಪೇಟೆ 3ನೇ ಕ್ರಾಸ್ನಲ್ಲಿ ಹಾಡಹಗಲೇ ಮಚ್ಚು ಹಿಡಿದು ದಾಂಧಲೆ ನಡೆಸಿದ್ದ ಪುಡಿ ರೌಡಿ ಇಮ್ರಾನ್(30) ಎಂಬಾತನನ್ನ ಬಂಧಿಸಲಾಗಿದೆ. ಕೆಲ ದಿನಗಳ ಹಿಂದೆ ಗ್ರಾಹಕರೊಬ್ಬರ ಮೇಲೆ ತಲ್ವಾರ್ ಬೀಸಿದ್ದ, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಕೃತ್ಯದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರೌಡಿ ಇಮ್ರಾನ್ ಊರು ಬಿಟ್ಟಿದ್ದ. ಇದೀಗ ರಾಬರ್ಟ್ಸನ್ ಪೇಟೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:28 pm, Thu, 29 June 23