ಛತ್ತೀಸ್​ಗಢ: ಕಾಡಾನೆ ದಾಳಿಗೆ ಒಂದೇ ಕುಟುಂಬದ ಮೂವರು ಸೇರಿ ಒಟ್ಟು ನಾಲ್ಕು ಮಂದಿ ಬಲಿ

|

Updated on: Aug 10, 2024 | 8:18 PM

ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಒಂದೇ ಕುಟುಂಬದ ಮೂವರು ಸೇರಿದಂತೆ ಒಟ್ಟು ನಾಲ್ಕು ಮಂದಿ  ಸಾವನ್ನಪ್ಪಿದ್ದಾರೆ. ಮುಂಜಾನೆ ಕಾಡಾನೆಯೊಂದು ಮಹಿಳೆಯೊಬ್ಬರನ್ನು ಕೊಂದು ಹಾಕಿತ್ತು. ಇದಾದ ಬಳಿಕ ರಾತ್ರಿ ಇಬ್ಬರು ಮಹಿಳೆಯರನ್ನು ತುಳಿದು ಕೊಂದಿದೆ.

ಛತ್ತೀಸ್​ಗಢ: ಕಾಡಾನೆ ದಾಳಿಗೆ ಒಂದೇ ಕುಟುಂಬದ ಮೂವರು ಸೇರಿ ಒಟ್ಟು ನಾಲ್ಕು ಮಂದಿ ಬಲಿ
ಆನೆ ದಾಳಿ
Follow us on

ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಒಂದೇ ಕುಟುಂಬದ ಮೂವರು ಸೇರಿದಂತೆ ಒಟ್ಟು ನಾಲ್ಕು ಮಂದಿ  ಸಾವನ್ನಪ್ಪಿದ್ದಾರೆ. ಮುಂಜಾನೆ ಕಾಡಾನೆಯೊಂದು ಮಹಿಳೆಯೊಬ್ಬರನ್ನು ಕೊಂದು ಹಾಕಿತ್ತು. ಇದಾದ ಬಳಿಕ ರಾತ್ರಿ ಇಬ್ಬರು ಮಹಿಳೆಯರನ್ನು ತುಳಿದು ಕೊಂದಿದೆ.

ಜಿಲ್ಲೆಯ ಕಟ್ಘೋರಾ ಅರಣ್ಯ ವಿಭಾಗದ ವ್ಯಾಪ್ತಿಯ ಖೈರಭವನ ಗ್ರಾಮದಲ್ಲಿ ತೀಜ್ಕುನ್ವರ್ ಮತ್ತು ಸುರುಜಾ ಎಂಬ ಇಬ್ಬರು ಮಹಿಳೆಯರು ಕಾಡಾನೆ ದಾಳಿಗೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ದಿನಗಳ ಹಿಂದೆ ಕೋರ್ಬಾ ಅರಣ್ಯ ವಿಭಾಗದ ಕರ್ತಾಲಾ ಅರಣ್ಯ ಪ್ರದೇಶದಲ್ಲಿ ಎಂಟು ಆನೆಗಳ ಗುಂಪು ತಿರುಗಾಡುತ್ತಿತ್ತು. ಒಂದು ಆನೆ ತನ್ನ ಹಿಂಡಿನಿಂದ ಬೇರ್ಪಟ್ಟಿದೆ ಎನ್ನಲಾಗಿದೆ.

ಬುಧವಾರ ರಾತ್ರಿಯೇ ರಾಲಿಯಾ ಗ್ರಾಮಕ್ಕೆ ಬಂದಿದ್ದ ಆನೆ ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ ಗಾಯತ್ರಿ ರಾಥೋಡ್‌ ಅವರನ್ನು ಕೂಡ ಹತ್ಯೆ ಮಾಡಿದೆ.

ಮತ್ತಷ್ಟು ಓದಿ: ಮೈಸೂರು: ಬಹಿರ್ದೆಸೆಗೆ ತೆರಳಿದ್ದ ವೇಳೆ ಆನೆ ದಾಳಿ, ವ್ಯಕ್ತಿ ಸ್ಥಳದಲ್ಲೇ ಸಾವು

ಮಹಿಳೆಯ ಮೇಲೆ ದಾಳಿ ಮಾಡಿದ ನಂತರ, ಕಾಡು ಆನೆ ಅಲ್ಲಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಖೋದ್ರಿ ಗ್ರಾಮಕ್ಕೆ ಹೋಗಿ ಅಲ್ಲಿ ಐದು ಜಾನುವಾರುಗಳನ್ನು ಕೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:17 pm, Sat, 10 August 24