ಮೈಸೂರು: ಬಹಿರ್ದೆಸೆಗೆ ತೆರಳಿದ್ದ ವೇಳೆ ಆನೆ ದಾಳಿ, ವ್ಯಕ್ತಿ ಸ್ಥಳದಲ್ಲೇ ಸಾವು

ಹುಣಸೂರು ತಾಲೂಕು ವೀರನಹೊಸಹಳ್ಳಿ ಬಳಿ ಆನೆ ತುಳಿತಕ್ಕೆ ಹಾಡಿ‌ ನಿವಾಸಿ ವಸಂತ್(36) ಬಲಿಯಾಗಿದ್ದಾರೆ, ರಾತ್ರಿ ಬಹಿರ್ದೆಸೆಗೆ ಹೋಗಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಈ ಪರಿಣಾಮ ವಸಂತ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಮೈಸೂರು: ಬಹಿರ್ದೆಸೆಗೆ ತೆರಳಿದ್ದ ವೇಳೆ ಆನೆ ದಾಳಿ, ವ್ಯಕ್ತಿ ಸ್ಥಳದಲ್ಲೇ ಸಾವು
ಆನೆ ದಾಳಿಗೆ ಬಲಿಯಾದ ವಸಂತ್
Follow us
ರಾಮ್​, ಮೈಸೂರು
| Updated By: ಆಯೇಷಾ ಬಾನು

Updated on: Oct 27, 2023 | 7:45 AM

ಮೈಸೂರು, ಅ.27: ಮೈಸೂರಿನಲ್ಲಿ ಕಾಡು ಪ್ರಾಣಿ‌ ಮಾನವ ಸಂಘರ್ಷ ಮುಂದುವರೆದಿದೆ (Mysuru Elephant Attack). ಆನೆ ತುಳಿತಕ್ಕೆ ಹಾಡಿ‌ ನಿವಾಸಿ ವಸಂತ್(36) ಬಲಿಯಾಗಿದ್ದಾರೆ (Death). ಹುಣಸೂರು ತಾಲೂಕು ವೀರನಹೊಸಹಳ್ಳಿ ಬಳಿ ಘಟನೆ ನಡೆದಿದೆ. ಮೃತ ವಸಂತ್ ಅವರು ಬಹಿರ್ದೆಸೆಗೆ ಹೋಗಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಸದ್ಯ ಸ್ಥಳಕ್ಕೆ ಹಿರಿಯ ಅರಣ್ಯ ಇಲಾಖೆ‌‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆನೆ ಬಾಲ ಅರ್ಧ ಕಟ್ ಮಾಡಿದ ಕಿಡಿಗೇಡಿಗಳು

ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗವಾಗಿ ಹತ್ತು ಕಿಲೋಮೀಟರ್ ಕ್ರಮಿಸಿದರೆ ಸಿಗುವ ಸಕ್ರೆಬೈಲು ಕ್ಯಾಂಪ್ ಆನೆ ಪಳಗಿಸುವಲ್ಲಿ ಹಾಗೂ ಸಾಕುವಲ್ಲಿ ಖ್ಯಾತಿ ಪಡೆದಿದೆ. ಮಲೆನಾಡಿನ ಪ್ರಮುಖ ಪ್ರವಾಸಿ ತಾಣವೂ ಆಗಿದೆ. ಆದರೆ ಇಲ್ಲೊಂದು ಅಹಿರಕತ ಘಟನೆ ನಡೆದಿರುವುದು ನಿಜಕ್ಕೂ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಆದರೆ ಅರಣ್ಯ ಇಲಾಖೆ ಮಾತ್ರ ಈ ಘಟನೆಯನ್ನು ಸಣ್ಣ ಘಟನೆ ಎನ್ನುವ ಮೂಲಕ ಸುಮ್ಮನಾಗಿದೆ.

ಇದನ್ನೂ ಓದಿ: ಮೈಸೂರು: ಬೆಳೆ ಕಾವಲಿಗೆ ಹೋದ ರೈತನ ಮೇಲೆ ಆನೆ ದಾಳಿ

ಶಿವಮೊಗ್ಗ ತಾಲೂಕಿ ಸಕ್ರೆಬೈಲು ಆನೆ ಬಿಡಾರ. ಪ್ರವಾಸಿಗರ ಪಾಲಿಗೆ ಸ್ವರ್ತ ಇದ್ದಂತೆ. ಆನೆಗಳ ತುಂಟಾಟ ಮತ್ತು ತುಂಗಾ ನದಿ ಹಿನ್ನೀರಿನ ಸೌಂದರ್ಯದ ಜೊತೆ ಹಚ್ಚು ಹಸಿರಿನಿಂದ ಕೂಡಿದ ಕಾಡು ಪ್ರದೇಶ. ಇಂತಹ ಸಕ್ರೆಬೈಲು ಆನೆ ಬಿಡಾರದಲ್ಲಿ ಹತ್ತಾವರು ಮಾವುತರು, ಕಾವಾಡಿಗರು, ಅರಣ್ಯ ಸಿಬ್ಬಂದಿ, ಅರಣ್ಯ ಅಧಿಕಾರಿಗಳು ಸಾಕಾಣೆಗಳ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಇಷ್ಟೊಂದು ಆರೈಕೆ ಮತ್ತು ನಿಗಾ ನಡುವೆ ಸಕ್ರೆಬೈಲು ಆನೆಬಿಡಾರದಲ್ಲಿ ದೊಡ್ಡ ಪ್ರಮಾದ ನಡೆದು ಹೋಗಿದೆ. ಸಕ್ರೆಬೈಲಿನ ಹೆಣ್ಣಾನೆ ಭಾನುಮತಿ ಹದಿನೆಂಟು ತಿಂಗಳ ಗರ್ಭಿಣಿ (ಆನೆ ಪ್ರಸವ ಸಮಯ ಸರಾಸರಿ 24 ತಿಂಗಳು).

ತುಂಗಾ ತೀರದಲ್ಲಿ ಎಂದಿನಂತೆ ಸ್ನಾನ ಮಾಡಿಸಿ ಕಾಡಿಗೆ ಮೇಯಲು ಬಿಟ್ಟಾಗ ಹಾದಿಯಲ್ಲಿ ರಕ್ತ ಚೆಲ್ಲಿತ್ತು. ಮರಿ ಹಾಕಿ ಬಿಡ್ತೇನೋ ಎಂಬ ಖುಷಿಯಿಂದ ಆನೆ ಜಾಡು ಹಿಡಿದು ಹೊರಟ ಸಿಬ್ಬಂದಿಗೆ ಕಂಡಿದ್ದು ತುಂಡಾಗಿ ನೇತಾಡುತ್ತಿದ್ದ ಆನೆ ಬಾಲ. ಯಾರೋ ಕಿಡಿಗೇಡಿಗಳು ಹರಿತದ ಆಯುಧದಿಂದ ಒಂದೇ ಏಟಿಗೆ ಬಾಲ ಜೋತಾಡುವಂತೆ ಹೊಡೆದಿದ್ದರು. ಘಟನೆ ಕುರಿತು ಅರಣ್ಯ ಇಲಾಖೆಯ ಸಿಬ್ಬಂದಿ ಈ ರೀತಿಯಲ್ಲಿ ವಿವರಣೆ ಕೊಟ್ಟಿದ್ದಾರೆ. ಆದ್ರೆ ಇಷ್ಟೊಂದು ಜನರ ನಡುವೆ ಭಾನುಮತಿ ಆನೆ ಮೇಲೆ ಅಟ್ಯಾಕ್ ಮಾಡಿದ್ದು ಯಾರು.. ಯಾಕೇ ಎನ್ನುವುದು ಮಾತ್ರ ಗೌಪ್ಯವಾಗಿದೆ. ಅರಣ್ಯ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಇದೊಂದು ಸಣ್ಣ ಘಟನೆ ಅಂತಾ ಉತ್ತರ ನೀಡುತ್ತಿದ್ದಾರೆ. ವನ್ಯಜೀವಿ ಕಾಯ್ದೆಗಳು ಎಷ್ಟೊಂದು ಕಠಿಣವಾಗಿವೆ. ಈ ನಡುವೆ ಆನೆ ಮೇಲೆ ದಾಳಿ ಆದರೂ ಅರಣ್ಯ ಅಧಿಕಾರಿಗಳು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಡಿಎಫ್ ಓ (ವನ್ಯಜೀವಿ ವಿಭಾಗ) ಪ್ರಸನ್ನ ಕೃಷ್ಣ ಪಟಗಾರ್ ಅವರ ಪ್ರಕಾರ ಆನೆ ಬಾಲ ಅರ್ಧ ಇಂಚಷ್ಟೇ ಕಟ್ ಆಗಿದೆ. ಕಟ್ ಆದ ದೇಹದ ಭಾಗಕ್ಕೆ ಸ್ಟಿಚ್ ಮಾಡಲಾಗಿದೆ. ಸದ್ಯ ಭಾನುಮತಿ ಆರೋಗ್ಯ ಚೆನ್ನಾಗಿದೆ. ಯಾವುದೇ ಸಮಸ್ಯೆ ಇಲ್ಲ. ಆದರೆ ಯಾರು ಮಾಡಿದರು ಎಂದು ಕಂಡು ಹಿಡಿಯಲು ತನಿಖೆಗೆ ಆದೇಶ ನೀಡಿದ್ದೇನೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ