Pregnant elephant: ಗರ್ಭಿಣಿ ಆನೆಗೆ ತಾಲೀಮು ಹೆಸರಿನಲ್ಲಿ 3 ದಿನ ಚಿತ್ರಹಿಂಸೆ! ಜಂಬೂಸವಾರಿ ಹಿಂದಿನ ದಿನ ಮರಿ ಹಾಕಿದ ಆನೆ!

Shivamogga Dasara: ದಸರಾ ಜಂಬೂಸವಾರಿಗಾಗಿ ಮೂರು ದಿನಗಳಿಂದ ಶಿವಮೊಗ್ಗದಲ್ಲಿದ್ದು, ನೇತ್ರಾವತಿ ಎಂಬ ಗರ್ಭವತಿ ಆನೆಗೆ ಮೂರು ದಿನಗಳ ಕಾಲ ನಿರಂತರವಾಗಿ ತಾಲೀಮು ಹೆಸರಿನಲ್ಲಿ ಚಿತ್ರಹಿಂಸೆಯಾಗಿದೆ. ಆದ್ರೆ ನೇತ್ರಾವತಿಯು ಜಂಬೂ ಸವಾರಿಗೆ ಮೊದಲೇ ಮರಿ ಹಾಕಿದೆ. ಸದ್ಯ ಶಿವಮೊಗ್ಗ ವನ್ಯಜೀವಿ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಡಿರುವ ಪ್ರಮಾದಕ್ಕೆ ಮಲೆನಾಡಿನಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿವೆ. ಮೈಸೂರು ದಸರಾ ವೇಳೆ ಆನೆ ಮರಿ ಹಾಕಿದ್ದ ಪ್ರಕರಣ ಕಣ್ಮುಂದೆ ಇದ್ದರೂ ಸಹ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಎದ್ದು ಕಾಣುತ್ತಿದೆ.

Pregnant elephant: ಗರ್ಭಿಣಿ ಆನೆಗೆ ತಾಲೀಮು ಹೆಸರಿನಲ್ಲಿ 3 ದಿನ ಚಿತ್ರಹಿಂಸೆ! ಜಂಬೂಸವಾರಿ ಹಿಂದಿನ ದಿನ ಮರಿ ಹಾಕಿದ ಆನೆ!
ಜಂಬೂಸವಾರಿ: ಪ್ರಗ್ನೆನ್ಸಿ ಪರೀಕ್ಷೆ ಮಾಡದೇ ಗರ್ಭಿಣಿ ಆನೆಗೆ ತಾಲೀಮು ಹೆಸರಿನಲ್ಲಿ 3 ದಿನ ಚಿತ್ರಹಿಂಸೆ!
Follow us
Basavaraj Yaraganavi
| Updated By: ಸಾಧು ಶ್ರೀನಾಥ್​

Updated on: Oct 26, 2023 | 2:10 PM

ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಿಂದ ಕರೆ ತಂದ ಆನೆಯು ತುಂಬು ಗರ್ಭವತಿ. ಈ ವಿಷಯವನ್ನು ಮರೆಮಾಚಿದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಈಗ ದೊಡ್ಡ ಯಡವಟ್ಟು ಮಾಡಿಕೊಂಡಿದ್ದಾರೆ. ಗರ್ಭಿಣಿ ಆನೆಯನ್ನು (Pregnant elephant) ಶಿವಮೊಗ್ಗ ದಸರಾ ಜಂಬೂ ಸವಾರಿಗೆ (Shivamogga Dasara) ಕರೆತಂದಿದ್ದರು. ಜಂಬೂ ಸವಾರಿ ಹಿಂದಿನ ರಾತ್ರಿ ಆನೆಯು ಮರಿ ಹಾಕಿದೆ.. ಅಷ್ಟಕ್ಕೂ ಜಂಬೂ ಸವಾರಿ ದಿನ (Jamboo Savari) ಆನೆ ಮರಿ ಹಾಕಿದ್ದರೆ ಗತಿಯೇನೆಂದು ವನ್ಯಜೀವಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ವನ್ಯಜೀವಿ ವಿಭಾಗದ ಅಧಿಕಾರಿಗಳ ಯಡವಟ್ಟು ಕುರಿತು ಒಂದು ವರದಿ ಇಲ್ಲಿದೆ.

ಮಲೆನಾಡಿನ ದಸರಾ ಅಂಬಾರಿ ಹೊರುವುದಕ್ಕೆ ಸಾಗರ ಆನೆ ಎಂಟ್ರಿಕೊಟ್ಟಿತ್ತು. ಸಾಗರ ಆನೆಗೆ ನೇತ್ರಾವತಿ ಮತ್ತು ಹೇಮಾವತಿ ಎರಡು ಆನೆಗಳು ಸಾಥ್ ಕೊಟ್ಟಿದ್ದವು. ಮೊನ್ನೆ ಅ. 24 ರಂದು ಶಿವಮೊಗ್ಗದಲ್ಲಿ ಅದ್ಧೂರಿ ದಸರಾ ಆಚರಣೆ ನಡೆಯಿತು. ಇದರ ಹಿಂದಿನ ದಿನ ಅಂದ್ರೆ ಅ. 23 ರ ತಡರಾತ್ರಿ ನೇತ್ರಾವತಿ ಆನೆಯು ಮರಿ ಹಾಕುವ ಮೂಲಕ ಎಲ್ಲರಿಗೂ ದೊಡ್ಡ ಶಾಕ್ ಕೊಟ್ಟಿತ್ತು.

ನಗರದ ವಾಸವಿ ಶಾಲಾ ಆವರಣದಲ್ಲಿ ಮರಿ ಹಾಕಿದ ನೇತ್ರಾವತಿಯನ್ನು ನೋಡಲು ಬಿಡಾರದ ವೈದ್ಯ ಡಾ. ವಿನಯ ಮತ್ತು ವನ್ಯಜೀವಿ ವಿಭಾಗದ ಡಿಎಫ್ ಓ ಪಟೆಗಾರ್ ದೌಡಾಯಿಸಿದ್ದರು. ವನ್ಯಜೀವಿ ಬಳಕೆಗೆ ನೂರೆಂಟು ಕಾನೂನು ಮತ್ತು ನಿಯಮಗಳಿವೆ. ಆರೋಗ್ಯವಾಗಿರುವ ಆನೆಗಳನ್ನು ಮಾತ್ರ ದಸರಾದ ಜಂಬೂ ಸವಾರಿಗೆ ಅವಕಾಶ ನೀಡಲಾಗುತ್ತದೆ. ಶಿವಮೊಗ್ಗ ದಸರಾಗೆ ಬಂದ ಸಕ್ರೇಬೈಲಿನ ನೇತ್ರಾವತಿ ಆನೆ ಮರಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಆರೈಕೆ ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಬಟಾಬಯಲಾಗಿದೆ.

ನೇತ್ರಾವತಿ ಆನೆ ಗರ್ಭವತಿಯಾಗಿದ್ದರೂ ಮಾಹಿತಿ ಇಲ್ಲವೆಂದ ವೈದ್ಯರು, ಅಧಿಕಾರಿಗಳು:

ಆನೆಗಳಿಗೆ ಪ್ರಗ್ನೆನ್ಸಿ ಪರೀಕ್ಷೆ ಮಾಡದೇ ಕರೆತಂದಿದ್ದಾರೆ. ಆನೆಗೆ ತಾಲೀಮು ನಡೆಸಿರುವ ಅಧಿಕಾರಿಗಳಿಂದ ಬೇಜವಾಬ್ದಾರಿ ಪ್ರದರ್ಶನವಾಗಿದೆ. ಹೌದು ಮೈಸೂರು ದಸರಾ ವೇಳೆ ಆನೆ ಮರಿ ಹಾಕಿದ್ದ ಪ್ರಕರಣ ಕಣ್ಮುಂದೆ ಇದ್ದರೂ ಸಹ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಎದ್ದು ಕಾಣುತ್ತಿದೆ. ಆನೆಗಳ ಪ್ರಗ್ನೆನ್ಸಿ ಟೆಸ್ಟ್ ಕಡ್ಡಾಯವಾಗಿದ್ದರೂ, ಅರಣ್ಯ ಇಲಾಖೆ ಅಧಿಕಾರಿಗಳು ನಾವು ಪರೀಕ್ಷೆ ಮಾಡುವಾಗ ನಮಗೆ ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ಹಾರಿಕೆ ಉತ್ತರ ನೀಡುತ್ತಿರುವುದಕ್ಕೆ ಈಗ ಸಾಮಾಜಿಕ ಹೋರಾಟಗಾರರು,ವನ್ಯಜೀವಿ ಹೋರಾಟಗಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಜಂಬೂ ಸವಾರಿಯ ಮೆರವಣಿಗೆಗೆಂದು ಬಂದಿದ್ದ ನೇತ್ರಾವತಿ ಆನೆ, ನಗರದ ವಾಸವಿ ಶಾಲೆ ಆವರಣದಲ್ಲಿ ಹೆಣ್ಣು ಮರಿಗೆ ಜನ್ಮ ನೀಡಿ ಸುದ್ಧಿ ಮಾಡಿದೆ. ಅ. 24 ರಂದು ಮಧ್ಯಾಹ್ನ ದಸರಾ ಅಂಬಾರಿ ಮೆರವಣಿಗೆಯಲ್ಲಿ ಭಾಗಿಯಾಗಬೇಕಿದ್ದ ನೇತ್ರಾವತಿ ಆನೆ, ತುಂಬು ಗರ್ಭಾವತಿ ಆಗಿದ್ದೇ ಅರಣ್ಯ ಇಲಾಖೆಗೆ ತಿಳಿಯದಾಗಿದ್ದು, ಇಲ್ಲಿ ವಿಶೇಷವಾಗಿದೆ.

ಅ. 23 ರ ರಾತ್ರಿ ಹೆಣ್ಣು ಮರಿಗೆ ಜನ್ಮ ನೀಡಿದ ನೇತ್ರಾವತಿ ಹಾಗೂ ಮರಿಯಾನೆ ಆರೋಗ್ಯದಿಂದಿವೆ. ಒಟ್ಟು ಈವರೆಗೆ 5 ಮರಿ ಹಾಕಿರುವ 27 ವರ್ಷದ ನೇತ್ರಾವತಿಯ ಈ ಮರಿ 80 ಕೆಜಿ ತೂಕವಿದ್ದು, ಬೇರೆ ಆನೆಗಳ ಸಹಾಯವಿಲ್ಲದೇ, ಹಾಲು ಕುಡಿಯುತ್ತಿರುವುದು, ಒಳ್ಳೆಯ ಬೆಳವಣಿಗೆಯಾಗಿದೆ. ಹೀಗಾಗಿ, ತಕ್ಷಣವೇ ನಿರ್ಧಾರ ತೆಗೆದುಕೊಂಡ ಅರಣ್ಯ ಇಲಾಖಾಧಿಕಾರಿಗಳು, ಮರಿಯಾನೆ ಹಾಗೂ ನೇತ್ರಾವತಿ ಆನೆಯನ್ನು ಲಾರಿಯಲ್ಲಿ ಸಕ್ರೆಬೈಲು ಆನೆ ಬಿಡಾರಕ್ಕೆ ಕಳಿಸಿದ್ದಾರೆ.

ಈ ವೇಳೆ ಲಾರಿ ಹತ್ತಿಸಲು ಮಾವುತರು, ಕಾವಾಡಿಗರು ಹರಸಾಹಸಪಟ್ಟರು. ದಸರಾ ಮೆರವಣಿಗೆಗೆಂದು ಬಂದು ಮರಿ ಹಾಕಿರುವ ಮರಿಯಾನೆ ಸೇರಿದಂತೆ, 5 ಹೆಣ್ಣಾನೆಗಳು, 16 ಗಂಡಾನೆಗಳು ಈಗ ಬಿಡಾರದಲ್ಲಿದ್ದು, ಸಕ್ರೆಬೈಲು ಆನೆ ಬಿಡಾರದಲ್ಲಿ ಒಟ್ಟು 21 ಆನೆಗಳಾದಂತಾಗಿವೆ. ಬಿಡಾರಕ್ಕೆ ಮತ್ತೊಂದು ಹೊಸ ಅತಿಥಿಯ ಎಂಟ್ರಿಯಾಗಿದೆ.

ಮೂರು ದಿನಗಳಿಂದ ನಗರದಲ್ಲಿದ್ದು, ನಗರ ಪರಿಸರ ಹೊಂದಿಕೊಳ್ಳಲು ಮಾವುತರು ನೇತ್ರಾವತಿ ಮತ್ತು ಇತರೆ ಎರಡು ಆನೆಗಳಿಗೆ ಭರ್ಜರಿ ತಾಲೀಮು ನೀಡಿದ್ದರು. ನೇತ್ರಾವತಿ ಗರ್ಭವತಿ ಆನೆಗೆ ಮೂರು ದಿನಗಳ ಕಾಲ ನಿರಂತರವಾಗಿ ತಾಲೀಮು ಹೆಸರಿನಲ್ಲಿ ಚಿತ್ರಹಿಂಸೆಯಾಗಿದೆ. ಆದ್ರೆ ಅದೃಷ್ಟ ಚೆನ್ನಾಗಿತ್ತು, ನೇತ್ರಾವತಿಯು ಜಂಬೂ ಸವಾರಿಗೆ ಮೊದಲೇ ಮರಿ ಹಾಕಿದೆ. ಸದ್ಯ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾಡಿರುವ ಪ್ರಮಾದಕ್ಕೆ ಮಲೆನಾಡಿನಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿವೆ.

ಸಾಮಾಜಿಕ ಹೋರಾಟಗಾರರು ಮತ್ತು ವನ್ಯಜೀವಿ ಪ್ರಿಯರು ಅರಣ್ಯ ಸಚಿವರಿಗೆ ಈ ಯಡವಟ್ಟಿನ ಕುರಿತು ಪತ್ರ ಕೂಡಾ ಬರೆದಿದ್ದಾರೆ. ಪತ್ರದಲ್ಲಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ನಡುವೆ ಘಟನೆ ಕುರಿತು ವನ್ಯಜೀವಿ ಡಿಎಫ್ ಓ ಅವರು ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಒಂದು ತಂಡವನ್ನು ತನಿಖೆಗೆ ನಿಯೋಜನೆ ಕೂಡಾ ಮಾಡಿದ್ದಾರೆ. ಅಧಿಕಾರಿಗಳ ತನಿಖೆಯಿಂದ ಸಕ್ರೆಬೈಲಿ ಆನೆಬಿಡಾರದಲ್ಲಿ ನಡೆದ ಅವಾಂತರ ಹೊರಗೆ ಬೀಳಬೇಕಿದೆ.

ಒಟ್ಟಾರೆ ದಸರಾ ಮೆರವಣಿಗೆ ಬಂದ ಆನೆ ಜಂಬೂ ಸವಾರಿ ನಡೆಯುವ ಕೆಲವೇ ಘಂಟೆಗೆ ಮೊದಲು ನೇತ್ರಾವತಿ ಆನೆಯು ಮರಿಗೆ ಜನ್ಮ ನೀಡಿದೆ. ಈ ಘಟನೆಯ ಕುರಿತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಪ್ರದರ್ಶನವಾಗಿದೆ. ಪ್ರಕಣದಲ್ಲಿ ನಿರ್ಲಕ್ಷ ತೋರಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್