ಕೊರೊನಾ ಆರ್ಭಟದ ಮಧ್ಯೆ ಮಧ್ಯಾಹ್ನ ಅಪ್ಪಳಿಸಲಿದೆ ‘ಮಹಾ ಅಲೆ’..!

| Updated By:

Updated on: Jul 06, 2020 | 1:18 PM

ಮುಂಬೈ: ಕೊರೊನಾ ಮಹಾಮಾರಿಯಿಂದ ವಾಣಿಜ್ಯ ನಗರಿ ಮುಂಬೈ ತತ್ತರಿಸಿಹೋಗಿದೆ. ವೈರಸ್​ ಆರ್ಭಟದಿಂದ ನಗರದಲ್ಲಿ ಪ್ರತಿದಿನ ಸಾವು ನೋವು ಸಂಭವಿಸುತ್ತಿದೆ. ಈ ಮಧ್ಯೆ ಮಳೆಗಾಲವು ಶುರುವಾಗಿದ್ದು ಇದೀಗ ಮುಂಬೈಗೆ ಮತ್ತೊಂದು ಕಂಟಕ ಎದುರಾಗಿದೆ. ಹೌದು, ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಮಧ್ಯೆ ಇಂದು ಬರೋಬ್ಬರಿ 4.67 ಮೀಟರ್​ ಎತ್ತರದ ಮಹಾ ಅಲೆಯೊಂದು (Tidal wave) ಮುಂಬೈ ಕಡಲತೀರಕ್ಕೆ ಅಪ್ಪಳಿಸಲಿದೆ ಎಂಬ ಸೂಚನೆ ಸಿಕ್ಕಿದೆ. ಮಧ್ಯಾಹ್ನ ಸುಮಾರು 1.30ಕ್ಕೆ ಈ ಮಹಾ ಅಲೆ ನಗರದ ಕಡಲ ತೀರಕ್ಕೆ ಅಪ್ಪಳಿಸಲಿದೆ ಎಂದು […]

ಕೊರೊನಾ ಆರ್ಭಟದ ಮಧ್ಯೆ ಮಧ್ಯಾಹ್ನ ಅಪ್ಪಳಿಸಲಿದೆ ‘ಮಹಾ ಅಲೆ’..!
Follow us on

ಮುಂಬೈ: ಕೊರೊನಾ ಮಹಾಮಾರಿಯಿಂದ ವಾಣಿಜ್ಯ ನಗರಿ ಮುಂಬೈ ತತ್ತರಿಸಿಹೋಗಿದೆ. ವೈರಸ್​ ಆರ್ಭಟದಿಂದ ನಗರದಲ್ಲಿ ಪ್ರತಿದಿನ ಸಾವು ನೋವು ಸಂಭವಿಸುತ್ತಿದೆ. ಈ ಮಧ್ಯೆ ಮಳೆಗಾಲವು ಶುರುವಾಗಿದ್ದು ಇದೀಗ ಮುಂಬೈಗೆ ಮತ್ತೊಂದು ಕಂಟಕ ಎದುರಾಗಿದೆ.

ಹೌದು, ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಮಧ್ಯೆ ಇಂದು ಬರೋಬ್ಬರಿ 4.67 ಮೀಟರ್​ ಎತ್ತರದ ಮಹಾ ಅಲೆಯೊಂದು (Tidal wave) ಮುಂಬೈ ಕಡಲತೀರಕ್ಕೆ ಅಪ್ಪಳಿಸಲಿದೆ ಎಂಬ ಸೂಚನೆ ಸಿಕ್ಕಿದೆ. ಮಧ್ಯಾಹ್ನ ಸುಮಾರು 1.30ಕ್ಕೆ ಈ ಮಹಾ ಅಲೆ ನಗರದ ಕಡಲ ತೀರಕ್ಕೆ ಅಪ್ಪಳಿಸಲಿದೆ ಎಂದು ಮುಂಬೈ ಮಹಾನಗರ ಪಾಲಿಕೆ ಪ್ರಕಟಿಸಿದೆ.

ಮಹಾ ಅಲೆಯಿಂದ ಮುಂಬೈಗೆ ಎದುರಾಗುವ ಸಮಸ್ಯೆ ಏನು..?
ಸಮುದ್ರ ಉಬ್ಬರದಿಂದ (HighTide) ಉಂಟಾಗುತ್ತಿರುವ ಈ ಮಹಾ ಅಲೆಯಿಂದ ನಗರದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಅರಬ್ಬಿ ಸಮುದ್ರಕ್ಕೆ ಅಂಟಿಕೊಂಡಿರುವ ನಗರದ ಪ್ರಮುಖ ರಾಜಕಾಲುವೆಗಳು ಮತ್ತು ಚರಂಡಿ ವ್ಯವಸ್ಥೆಯ ಮೂಲಕ ಸಮುದ್ರದ ನೀರು ನಗರಕ್ಕೆ ಪ್ರವೇಶಿಸಿ ರಸ್ತೆ ಮತ್ತು ಬಡಾವಣೆಗಳನ್ನು ಜಲಾವೃತಗೊಳಿಸಬಹುದು. ಹೀಗಾಗಿ ಮುಂಬೈ ಪಾಲಿಕೆಯು ಆಯಾ ಚರಂಡಿಗಳ ಹೊರಹರಿವಿನ ಗೇಟ್​ಗಳನ್ನು ಬಂದ್​ ಮಾಡಲಿದೆ. ಈ ಮೂಲಕ ಸಮುದ್ರದ ನೀರು ಒಳಕ್ಕೆ ಹರಿಯುವುದನ್ನು ತಡೆಯೋಕೆ ಮುಂದಾಗಿದೆ.

ಇದರೊಟ್ಟಿಗೆ ಹವಾಮಾನ ಇಲಾಖೆಯು ಮುಂದಿನ 24 ಗಂಟೆಯಲ್ಲಿ ನಗರದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಮಾಡಿದೆ. ಹೀಗಾಗಿ ಮೀನುಗಾರರು ಮತ್ತು ಸ್ಥಳೀಯರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಹ ನೀಡಿದೆ.

Published On - 12:06 pm, Mon, 6 July 20