ಕಾಶ್ಮೀರದಲ್ಲಿ ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆ

  • TV9 Web Team
  • Published On - 8:33 AM, 7 Jul 2020
ಕಾಶ್ಮೀರದಲ್ಲಿ ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆ

ಹೈದರಾಬಾದ್: ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಶ್ಮೀರದಲ್ಲಿ ನಡೆದಿದೆ. ಯೋಧ ಶ್ರೀನಿವಾಸ್(27) ಆತ್ಮಹತ್ಯೆ ಮಾಡಿಕೊಂಡ ಯೋಧ. ಇವರು ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ನಾಗೇಪಲ್ಲಿಯವರು.

ಬಾರಾಮುಲ್ಲ 226 ಫೀಲ್ಡ್ ಯುನಿಟ್​ನಲ್ಲಿ ಘಟನೆ ನಡೆದಿದೆ. ಯೋಧ ಶ್ರೀನಿವಾಸ್ ತಂದೆ ದನ ಕಾಯುವ ಕೆಲಸ‌ಮಾಡುತ್ತಿದ್ದರು. ತುಂಬು ಬಡತನದ ಕುಟುಂಬದಿಂದ‌ ಬಂದಿದ್ದ ಶ್ರೀನಿವಾಸ್ 2013ರಲ್ಲಿ‌ ಸೇನೆಗೆ ಸೇರಿದ್ದರು. 2 ವರ್ಷದ ಹಿಂದೆ‌ ಇವರಿಗೆ ವಿವಾಹವಾಗಿತ್ತು. ಆದರೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರೊ ಬಾರಾಮಲ್ಲ ಪೊಲೀಸರು ತನಿಖೆ ಶುರು ಮಾಡಿದ್ದಾರೆ.