ಉತ್ತರ ಪ್ರದೇಶದ ವಾರಾಣಸಿಯ ಆಷ್ಫಕ್ನಗರ ಕಾಲನಿಯಲ್ಲಿ ಸೀರೆ ನೇಯ್ಗೆ ಘಟಕವೊಂದಕ್ಕೆ ಬೆಂಕಿ ಬಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಈ ಕೆಲಸದ ಕೋಣೆಯಲ್ಲಿ ಕಾರ್ಮಿಕರು ಅಡುಗೆ ಮಾಡಿಕೊಳ್ಳಲೆಂದು ಒಂದು ಚಿಕ್ಕ ಅಡುಗೆ ಕೋಣೆಯನ್ನೂ ಇಡಲಾಗಿದೆ. ಇಂದು ಬೆಳಗ್ಗೆ 11.30ರ ಹೊತ್ತಿಗೆ ಕೆಲವರು ಅಡುಗೆ ಮಾಡುತ್ತಿದ್ದರು. ಆಗ ವಿದ್ಯುತ್ ವೈಯರ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ. ಬೆಂಕಿಯಿಂದ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಈ ವೇಳೆ ಕಟ್ಟಡದೊಳಗೆ ಇದ್ದ ನಾಲ್ವರು ಅಲ್ಲಿಯೇ ಸಜೀವ ದಹನವಾಗಿದ್ದಾರೆ. ಮೃತರಲ್ಲಿ ಒಬ್ಬಾತ 45 ವರ್ಷದ ವ್ಯಕ್ತಿಯಾಗಿದ್ದು, ಇನ್ನೊಬ್ಬ ಅವರ ಪುತ್ರ. ಹಾಗೇ ಇನ್ನಿಬ್ಬರು ಬಿಹಾರ ಮೂಲದ ಕಾರ್ಮಿಕರು.
ಕಟ್ಟಡಕ್ಕೆ ಬೆಂಕಿಬೀಳುತ್ತಿದ್ದಂತೆ ಅದರಲ್ಲಿದ್ದ ಕಾರ್ಮಿಕರು ಸಹಾಯಕ್ಕಾಗಿ ಅರಚಿದ್ದಾರೆ. ಅದನ್ನು ಕೇಳಿ ಸ್ಥಳೀಯ ಒಂದಷ್ಟು ಮಂದಿ ಬೆಂಕಿಯನ್ನು ನಂದಿಸಲು ಬಂದರೂ ಅಷ್ಟರಲ್ಲಾಗಲೇ ಕಾಲ ಮಿಂಚಿತ್ತು. ಮೃತದೇಹಗಳನ್ನು ಪೋಸ್ಟ್ ಮಾರ್ಟಮ್ಗೆ ಒಳಪಡಿಸಿದ ಬಳಿಕ, ಅವರ ಕುಟುಂಬಕ್ಕೆ ನೀಡಲಾಗಿದೆ. ಅಷ್ಟರಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಯೂ ಆಗಮಿಸಿದ್ದಾರೆ. ಇದೊಂದು ಸೀರೆ ಫಿನಿಶಿಂಗ್ ಮತ್ತು ಪ್ಯಾಕೇಜಿಂಗ್ ವರ್ಕ್ ಶಾಪ್ ಆಗಿದ್ದರಿಂದ ಅಲ್ಲಿ ಸಿಂಥೆಟಿಕ್ ಬಟ್ಟೆಗಳು ಹೆಚ್ಚಾಗಿವೆ. ಹೀಗಾಗಿ ಬೆಂಕಿ ಶೀಘ್ರವೇ ಆವರಿಸಿದೆ. ಹಾಗೇ, ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂಪಾಯಿ ನೀಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ್ದಾರೆ.
ನಿನ್ನೆ ರಾತ್ರಿ ಆಂಧ್ರಪ್ರದೇಶ ಎಲುರು ಜಿಲ್ಲೆಯಲ್ಲಿ ಭೀಕರ ಅಗ್ನಿದುರಂತ ನಡೆದಿದ್ದು ಅದರಲ್ಲಿ ಆರು ಮಂದಿ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮಸುನೂರು ಮಂಡಲ್ನ ಅಕ್ಕಿರೆಡ್ಡಿ ಗುಡೆಮ್ನಲ್ಲಿರುವ ಪೋರಸ್ ರಾಸಾಯಾನಿಕ ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ದುರಂತ ಉಂಟಾಗಿತ್ತು. ಅದರಲ್ಲಿ ಐದು ಜನ ಸಜೀವದಹನಗೊಂಡಿದ್ದರೆ,
ಇದನ್ನೂ ಓದಿ: ಈ ಜಾತ್ರೆಯಲ್ಲಿ ಭಕ್ತರು ಮುಳ್ಳು ಗದ್ದುಗೆಯ ಮೇಲೆ ನಡೆದು ಕುಣಿಯುತ್ತಾರೆ ಮತ್ತು ಕುಪ್ಪಳಿಸುತ್ತಾರೆ!