ನ್ಯಾಯ ಬೇಕು ಎಂದು ಟ್ವಿಟರ್​​ನಲ್ಲಿ ಮನವಿ ಮಾಡಿದ ಅಸ್ಸಾಂನ ಬಾಲಕ; ಪ್ರಧಾನಿ, ಗೃಹ ಸಚಿವ ಮತ್ತು ಮುಖ್ಯಮಂತ್ರಿ ಮಧ್ಯಪ್ರವೇಶಕ್ಕೆ ಒತ್ತಾಯ

| Updated By: ರಶ್ಮಿ ಕಲ್ಲಕಟ್ಟ

Updated on: Sep 16, 2021 | 1:21 PM

Assam: ಸಾಹಿದುಲ್ ನಿಗೂಢ ಹತ್ಯೆ ನಡೆದು ನಾಲ್ಕು ವರ್ಷಗಳು ಕಳೆದಿದ್ದು ಕ್ಯಾಚಾರ್ ಪೋಲಿಸರು ಉದ್ದೇಶಪೂರ್ವಕವಾಗಿ ಅಪರಾಧಿಗಳನ್ನು ಇಲ್ಲಿಯವರೆಗೆ ಹಿಡಿಯಲು ವಿಫಲರಾಗಿದ್ದಾರೆ ಎಂದು ಮೃತರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ನ್ಯಾಯ ಬೇಕು ಎಂದು ಟ್ವಿಟರ್​​ನಲ್ಲಿ ಮನವಿ ಮಾಡಿದ ಅಸ್ಸಾಂನ ಬಾಲಕ; ಪ್ರಧಾನಿ, ಗೃಹ ಸಚಿವ ಮತ್ತು ಮುಖ್ಯಮಂತ್ರಿ ಮಧ್ಯಪ್ರವೇಶಕ್ಕೆ ಒತ್ತಾಯ
ರಿಜ್ವಾನ್
Follow us on

ದೆಹಲಿ: ನನ್ನ ಹೆಸರು ರಿಜ್ವಾನ್ ಸಾಹಿದ್ ಲಸ್ಕರ್(Rizwan Sahid Laskar). ನನಗೆ 3 ತಿಂಗಳಿದ್ದಾಗ ನನ್ನ ತಂದೆಯನ್ನು 11 ದುಷ್ಕರ್ಮಿಗಳು ಡಿಸೆಂಬರ್ 26, 2016 ರಂದು (ಪ್ರಕರಣ ಸಂಖ್ಯೆ 121/2017) ಬರ್ಬರವಾಗಿ ಹತ್ಯೆಗೈದರು. ” I WANT JUSTICE ” ಎಂಬ ಪ್ಲೆಕಾರ್ಡ್ ಹಿಡಿದು ವಿಡಿಯೊದಲ್ಲಿ ಬಾಲಕನೊಬ್ಬ ಮನವಿ ಮಾಡಿದ್ದಾನೆ. ಡಿಸೆಂಬರ್ 26, 2016 ರಂದು ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ಸೋನೈ ರೋಡ್ ಪ್ರದೇಶದಲ್ಲಿ ತನ್ನ ತಂದೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ ನಂತರ ಅಸ್ಸಾಂನ ಸಿಲ್ಚಾರ್ ನ 4 ವರ್ಷದ ಬಾಲಕ ‘ನಮಗೆ ನ್ಯಾಯಬೇಕು’ ಎಂದು ಕೇಳುತ್ತಿದ್ದಾನೆ.

ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೊದಲ್ಲಿ 4 ವರ್ಷದ ಬಾಲಕ ರಿಜ್ವಾನ್ ಸಾಹಿದ್ ಲಸ್ಕರ್ “ನನಗೆ ನ್ಯಾಯ ಬೇಕು” ಎಂಬ ಪ್ಲೆಕಾರ್ಡ್ ಹಿಡಿದು ತನ್ನ ತಂದೆ ಸಾಹಿದುಲ್ ಅಲೋಮ್ ಲಸ್ಕರ್ ಅವರನ್ನು ಸಿಲ್ಚಾರ್‌ನಲ್ಲಿ ಕ್ರೂರವಾಗಿ ಕೊಲೆ ಮಾಡಿದ 11 ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಒತ್ತಾಯಿಸಿದ್ದಾರೆ.


ನಮ್ಮ ಪ್ರಧಾನಿ, ಗೃಹ ಸಚಿವ ಮತ್ತು ಅಸ್ಸಾಂನ ಮುಖ್ಯಮಂತ್ರಿಗಳಿಗೆ ಶುಭೋದಯ. ನನ್ನ ಹೆಸರು ರಿಜ್ವಾನ್ ಸಾಹಿದ್ ಲಸ್ಕರ್. ಸರ್, ನಾನು 3 ತಿಂಗಳ ವಯಸ್ಸಿನವನಾಗಿದ್ದಾಗ, ನನ್ನ ತಂದೆಯನ್ನು 11 ದುಷ್ಕರ್ಮಿಗಳು ಡಿಸೆಂಬರ್ 26, 2016 ರಂದು ಕ್ರೂರವಾಗಿ ಹತ್ಯೆ ಮಾಡಿದರು (ಪ್ರಕರಣ ಸಂಖ್ಯೆ 121/2017). ಈಗ ನಾನು ನಮ್ಮ ಪ್ರಧಾನ ಮಂತ್ರಿ, ಗೃಹ ಮಂತ್ರಿ ಮತ್ತು ಅಸ್ಸಾಂನ ಮುಖ್ಯಮಂತ್ರಿಯವರಿಗೆ ಈ ವಿಷಯದ ಬಗ್ಗೆ ಗಮನ ಹರಿಸಿ ನಮಗೆ ನ್ಯಾಯ ಒದಗಿಸಬೇಕೆಂದು ವಿನಂತಿಸುತ್ತೇನೆ. ತುಂಬಾ ಧನ್ಯವಾದಗಳು, ”ಎಂದು ವಿಡಿಯೊದಲ್ಲಿ ಬಾಲಕ ಮನವಿ ಮಾಡಿದ್ದಾನೆ.

ಏತನ್ಮಧ್ಯೆ, ಸಾಹಿದುಲ್ ನಿಗೂಢ ಹತ್ಯೆ ನಡೆದು ನಾಲ್ಕು ವರ್ಷಗಳು ಕಳೆದಿದ್ದು ಕ್ಯಾಚಾರ್ ಪೋಲಿಸರು ಉದ್ದೇಶಪೂರ್ವಕವಾಗಿ ಅಪರಾಧಿಗಳನ್ನು ಇಲ್ಲಿಯವರೆಗೆ ಹಿಡಿಯಲು ವಿಫಲರಾಗಿದ್ದಾರೆ ಎಂದು ಮೃತರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಈ ಹಿಂದೆ ಮೃತನ ಪತ್ನಿ ಮತ್ತು 4 ವರ್ಷದ ಬಾಲಕನ ತಾಯಿ 11 ಜನರ ವಿರುದ್ಧ ಸಿಲ್ಚಾರ್‌ನ ತಾರಾಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಆದರೆ ಈ ಪ್ರಕರಣದಲ್ಲಿ ಯಾವುದೇ ಮಹತ್ವದ ಬೆಳವಣಿಗೆಗಳು ಕಂಡುಬಂದಿಲ್ಲ ಎಂದು ಪತ್ನಿ ಹೇಳಿದ್ದಾರೆ.

ಸಹಿದುಲ್ ಅಲೋಮ್ ಲಸ್ಕರ್ ಅವರನ್ನು ಗುತ್ತಿಗೆದಾರನಾಗಿದ್ದರಿಂದ ಮತ್ತು ಹಲವು ರಹಸ್ಯಗಳ ಬಗ್ಗೆ ತಿಳಿದುಕೊಂಡಿದ್ದರಿಂದ ಮರಳು ಮಾಫಿಯಾದವರು ಕ್ರೂರವಾಗಿ ಕೊಲೆ ಮಾಡಿದ್ದರು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: Coronavirus cases in India: ಭಾರತದಲ್ಲಿ 30,570 ಹೊಸ ಕೊವಿಡ್ ಪ್ರಕರಣ ಪತ್ತೆ, 431 ಮಂದಿ ಸಾವು

(4-year-old boy in grief from Silchar Assam pleading for justice after his father was murdered by miscreants)

Published On - 11:32 am, Thu, 16 September 21