ಪಶ್ಚಿಮ ಬಂಗಾಳದ (West Bengal)ಮುರ್ಷಿದಾಬಾದ್ (Murshidabad) ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಸಂಸದ ಅಬು ತಾಹೆರ್ ಖಾನ್ ಅವರ ಕಾರಿಗೆ ಡಿಕ್ಕಿ ಹೊಡೆದು 4 ವರ್ಷದ ಮಗು ಬುಧವಾರ ಸಾವಿಗೀಡಾಗಿದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ಮಗು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಮೂಲಗಳು ವರದಿ ಮಾಡಿವೆ. ಪ್ರಾಥಮಿಕ ಮಾಹಿತಿ ಪ್ರಕಾರ ಅಪಘಾತ ನಡೆದಾಗ ಸಂಸದ ಅಬು ತಾಹೆರ್ ಖಾನ್ ಕಾರಿನೊಳಗೆ ಇದ್ದರು. ಮಗು ಕಾರಿನ ಮುಂದೆ ಬಂದಿತ್ತು ಎಂದು ಸಚಿವರು ಹೇಳಿದ್ದಾರೆ. ಖಾನ್ ಅವರೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.ಮಗು ಇದ್ದಕ್ಕಿದ್ದಂತೆ ನಮ್ಮ ವಾಹನದ ಮುಂದೆ ಬಂದಿತು. ಚಿಕ್ಕ ಮಗು, ಅವನಿಗೆ ಐದು ಅಥವಾ ಆರು ವರ್ಷ. ನಾವು ಅವನನ್ನು ಆಸ್ಪತ್ರೆಗೆ ಸೇರಿಸಿದ್ದೇವೆ. ಇದು ನನ್ನ ಮುಂದೆ ಸಂಭವಿಸಿತು. ಬಹುಶಃ ಅವರು ಮಿದುಳಿನ ಗಾಯವಾಗಿರಬೇಕು ಎಂದು ಖಾನ್ ಆಸ್ಪತ್ರೆಯ ಹೊರಗೆ ಸುದ್ದಿಗಾರರಿಗೆ ತಿಳಿಸಿದರು. ಆಸ್ಪತ್ರೆಯಲ್ಲಿ, ಮಗುವಿನ ಪೋಷಕರು ಅಳುತ್ತಿರುವ ದೃಶ್ಯ ಅಲ್ಲಿ ಕಂಡು ಬಂತು.
ಅಪಘಾತ ಸಂಭವಿಸಿದಾಗ ತೃಣಮೂಲ ಕಾಂಗ್ರೆಸ್ ನಾಯಕ ಮುರ್ಷಿದಾಬಾದ್‌ನ ಬೆಹ್ರಾಂಪೋರ್‌ಗೆ ತೆರಳುತ್ತಿದ್ದರು. ಮಗು ತನ್ನ ತಾಯಿಯೊಂದಿಗೆ ಬ್ಯಾಂಕ್ ಬಳಿಗೆ ಹೋಗುತ್ತಿದ್ದಾಗ ಟಿಎಂಸಿ ಸಂಸದರ ಕಾರುಡಿಕ್ಕಿ ಹೊಡೆದಿದೆ. ಕಾರು ಹಾದು ಹೋಗುತ್ತಿದ್ದಾಗ ಮಗು ರಸ್ತೆ ದಾಟಿದ್ದು, ಕಾರು ಗುದ್ದಿ ರಸ್ತೆಗೆ ಬಿದ್ದು ತಲೆಗೆ ಪೆಟ್ಟಾಗಿದೆ. ತಾಹೆರ್ ಮಗುವನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಮಗು ಕೊನೆಯುಸಿರೆಳಿದಿದೆ.
Published On - 7:14 pm, Wed, 16 November 22