ಭಾರತದಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು 40 ಯೋಜನೆಗಳಿಗೆ ಅನುಮೋದನೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 30, 2024 | 6:32 PM

ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸಲು ಸರಕಾರ ನಾನಾ ರೀತಿಯ ಯೋಜನೆಗಳನ್ನು ರೂಪಿಸಿಕೊಂಡು ಬಂದಿದೆ. ಇದಕ್ಕೆ ಪೂರಕವೆಂಬಂತೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ, ಈಗ ಕಡಿಮೆ ಪರಿಚಿತ ತಾಣಗಳನ್ನು ಅಂದರೆ ಜನರಿಗೆ ಅಷ್ಟಾಗಿ ತಿಳಿಯದ ಕೆಲವು ಜಾಗಗಳನ್ನು ಅಪ್ರತಿಮ ತಾಣಗಳಾಗಿ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಸೆಳೆಯಲು, 23 ರಾಜ್ಯಗಳನ್ನು ವ್ಯಾಪಿಸಿರುವ 3,295 ಕೋಟಿ ರೂ.ಗಳ ನಲವತ್ತು ಯೋಜನೆಗಳಿಗೆ ಕೇಂದ್ರದಿಂದ ಅನುಮೋದನೆ ದೊರೆತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲೇಖನದಲ್ಲಿದೆ.

ಭಾರತದಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು 40 ಯೋಜನೆಗಳಿಗೆ ಅನುಮೋದನೆ
ಸಾಂದರ್ಭಿಕ ಚಿತ್ರ
Follow us on

ದೇಶಾದ್ಯಂತ ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸಲು ಸರಕಾರ ನಾನಾ ರೀತಿಯ ಯೋಜನೆಗಳನ್ನು ರೂಪಿಸಿಕೊಂಡು ಬಂದಿದೆ. ಇದಕ್ಕೆ ಪೂರಕವೆಂಬಂತೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ, ಈಗ ಕಡಿಮೆ ಪರಿಚಿತ ತಾಣಗಳನ್ನು ಅಂದರೆ ಜನರಿಗೆ ಅಷ್ಟಾಗಿ ತಿಳಿಯದ ಕೆಲವು ಜಾಗಗಳನ್ನು ಅಪ್ರತಿಮ ತಾಣಗಳಾಗಿ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಸೆಳೆಯಲು, 23 ರಾಜ್ಯಗಳನ್ನು ವ್ಯಾಪಿಸಿರುವ 3,295 ಕೋಟಿ ರೂ.ಗಳ ನಲವತ್ತು ಯೋಜನೆಗಳಿಗೆ ಕೇಂದ್ರದಿಂದ ಅನುಮೋದನೆ ದೊರೆತಿದೆ. ಇಲಾಖೆಯ ನಿರ್ದೇಶನಗಳ ಪ್ರಕಾರ, ಪ್ರವಾಸೋದ್ಯಮ ಸಚಿವಾಲಯವು ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ, ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ಬಂಡವಾಳ ಹೂಡಿಕೆಗಾಗಿ (ಎಸ್ಎಎಸ್ಸಿಐ) ಕಾರ್ಯಾಚರಣಾ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಯ್ದ ತಾಣಗಳಿವು;

ಪ್ರವಾಸೋದ್ಯಮ ಸಚಿವಾಲಯವು ಎಸ್ಎಎಸ್ಸಿಐ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರಗಳಿಗೆ ವಿತರಿಸಿದ್ದು, ಯೋಜನಾ ಪ್ರಸ್ತಾಪಗಳನ್ನು ರೂಪಿಸಿದೆ. ಮಾರ್ಗಸೂಚಿಗಳಿಗೆ ಅನುಗುಣವಾಗಿ ಮತ್ತು ಮಾನದಂಡಗಳ ಪ್ರಕಾರ, 23 ರಾಜ್ಯಗಳಲ್ಲಿ 40 ಯೋಜನೆಗಳನ್ನು 3295.76 ಕೋಟಿ ರೂ.ಗಳಲ್ಲಿ ಮಾಡುವ ನಿರ್ಧಾರ ಮಾಡಿದ್ದು ಇದನ್ನು ಇಲಾಖೆ ಮಂಜೂರು ಮಾಡಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ರಂಗ್ ಘರ್, ಶಿವಸಾಗರ್ (ಅಸ್ಸಾಂ), ಮತ್ಸ್ಯಗಂಧ ಸರೋವರ, ಸಹರ್ಸಾ (ಬಿಹಾರ), ಪ್ರಸ್ತಾವಿತ ಟೌನ್ ಸ್ಕ್ವೇರ್, ಪೊರ್ವೊರಿಮ್ (ಗೋವಾ) ಮತ್ತು ಒರ್ಚಾ (ಮಧ್ಯಪ್ರದೇಶ) ಕೆಲವು ಆಯ್ದ ತಾಣಗಳಾಗಿವೆ.

ದೇಶದ ಪ್ರವಾಸಿ ಕೇಂದ್ರಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡಿಂಗ್ ಮಾಡಲು ರಾಜ್ಯಗಳಿಗೆ 50 ವರ್ಷಗಳವರೆಗೆ ದೀರ್ಘಾವಧಿ ಬಡ್ಡಿರಹಿತ ಸಾಲವನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಸಚಿವಾಲಯ ತಿಳಿಸಿದೆ. ಯೋಜನೆಗಳ ರೂಪದಲ್ಲಿ ಬಂಡವಾಳ ಹೂಡಿಕೆ ಮಾಡುವ ಮೂಲಕ, ಈ ಯೋಜನೆಯು ಸ್ಥಳೀಯ ಆರ್ಥಿಕತೆಯ ಬೆಳವಣಿಗೆಯನ್ನು ಮತ್ತು ಸುಸ್ಥಿರ ಪ್ರವಾಸೋದ್ಯಮ ಯೋಜನೆಗಳ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಈ ಉಪಕ್ರಮವು ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ದೇಶಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ಕಡಿಮೆ ಪರಿಚಿತವಾಗಿರುವ ಅಥವಾ ಜನರಿಗೆ ಸರಿಯಾಗಿ ತಿಳಿದಿಲ್ಲದ ತಾಣಗಳ ಮೇಲೆ ಕೇಂದ್ರೀಕರಿಸುವ ಮೂಲಕ, ಒಟ್ಟಾರೆ ಪ್ರವಾಸೋದ್ಯಮ ಅನುಭವವನ್ನು ಹೆಚ್ಚಿಸಲು, ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸಲು ಹೊಸ ಯೋಜನೆಯನ್ನು ರೂಪಿಸಿದೆ. ಅದಲ್ಲದೆ ಈ ಯೋಜನೆಗಳನ್ನು ಪೂರ್ಣಗೊಳಿಸಲು ರಾಜ್ಯಗಳಿಗೆ ಎರಡು ವರ್ಷಗಳ ಕಾಲಮಿತಿಯನ್ನು ನೀಡಲಾಗಿದೆ, ಮಾರ್ಚ್ 2026 ರೊಳಗೆ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ