ಸೇಲಂನಲ್ಲಿ ಗ್ಯಾಸ್​ ಸಿಲಿಂಡರ್​ ಸ್ಫೋಟ: 3 ಕಟ್ಟಡಗಳು ಕುಸಿದು 5 ಮಂದಿ ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ

Salem Gas Cylinder Blast: ಸ್ಫೋಟದ ರಭಸಕ್ಕೆ ಸುತ್ತಲಿನ ಮೂರು ಮನೆಗಳು ಕುಸಿದುಬಿದ್ದಿದ್ದವು. ಹೀಗೆ ಕುಸಿದ ಮನೆಯ ಅವಶೇಷಗಳಡಿ ಸಿಲುಕಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ಪ್ರಯೋಜನ ಆಗಲಿಲ್ಲ.

ಸೇಲಂನಲ್ಲಿ ಗ್ಯಾಸ್​ ಸಿಲಿಂಡರ್​ ಸ್ಫೋಟ: 3 ಕಟ್ಟಡಗಳು ಕುಸಿದು 5 ಮಂದಿ ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ
ಸ್ಫೋಟದ ರಭಸಕ್ಕೆ ಕುಸಿದ ಮೂರು ಮನೆಗಳು
Updated By: Lakshmi Hegde

Updated on: Nov 24, 2021 | 9:20 AM

ತಮಿಳುನಾಡಿನ ಸೇಲಂ  ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಸಿಲಿಂಡರ್ ಗ್ಯಾಸ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ನಿನ್ನೆ ಸೇಲಂನ ಕರುಂಗಳಪಟ್ಟಿ ಎಂಬಲ್ಲಿ ರಾಜಲಕ್ಷ್ಮೀ (80) ಎಂಬುವರು ಮನೆಯಲ್ಲಿ ಚಹಾ ಮಾಡಲೆಂದು  ಸ್ಟವ್​ ಆನ್​ ಮಾಡುತ್ತಿದ್ದಂತೆ ಅಡುಗೆ ಅನಿಲದ ಗ್ಯಾಸ್ ಸ್ಫೋಟವಾಗಿತ್ತು. ರಾಜಲಕ್ಷ್ಮೀ ಸ್ಥಳದಲ್ಲೇ ಮೃತಪಟ್ಟಿದ್ದರು. 10 ಮಂದಿ ಗಂಭೀರ ಗಾಯಗೊಂಡಿದ್ದರು.  ಆದರೆ ಸ್ಫೋಟದ ರಭಸಕ್ಕೆ ಮನೆ ಕುಸಿದು 5 ಮಂದಿ ಮೃತಪಟ್ಟಿದ್ದಾರೆ.

ಸ್ಫೋಟದ ರಭಸಕ್ಕೆ ಸುತ್ತಲಿನ ಮೂರು ಮನೆಗಳು ಕುಸಿದುಬಿದ್ದಿದ್ದವು. ಹೀಗೆ ಕುಸಿದ ಮನೆಯ ಅವಶೇಷಗಳಡಿ ಸಿಲುಕಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ಪ್ರಯೋಜನ ಆಗಲಿಲ್ಲ. ಸ್ಫೋಟದ ಸ್ಥಳಕ್ಕೆ ಜಿಲ್ಲಾಧಿಕಾರಿ ಕರ್ಮೇಘಂ ಮತ್ತು ಪೊಲೀಸ್ ಉನ್ನತ ಅಧಿಕಾರಿ ಭೇಟಿ ಕೊಟ್ಟಿದ್ದರು. ಅಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಖುದ್ದಾಗಿ ಮೇಲ್ವಿಚಾರಣೆ ಮಾಡಿದ್ದಾರೆ.  ಕುಸಿದು ಬಿದ್ದ ಮನೆಯ ಅವಶೇಷಗಳಡಿ 5 ವರ್ಷದ ಬಾಲಕಿ ಸೇರಿ 12 ಮಂದಿ ಸಿಲುಕಿದ್ದರು. ಇನ್ನೂ ಒಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಹಾಗೇ, ಸ್ಥಳದಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಇನ್ನೂ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Tamil Nadu: ಸೇಲಂನಲ್ಲಿ ಗ್ಯಾಸ್​ ಸಿಲಿಂಡರ್​ ಸ್ಫೋಟ​; ದುರಂತದಲ್ಲಿ ವೃದ್ಧೆ ಸಾವು, 10 ಮಂದಿಗೆ ಗಾಯ

 

Published On - 9:19 am, Wed, 24 November 21