5 Years of Demonetisation ನೋಟು ಅಮಾನ್ಯೀಕರಣಕ್ಕೆ 5 ವರ್ಷ: ನಗದು ವಹಿವಾಟಿಗೆ ಕಡಿಮೆ ಆಗಿಲ್ಲ ಆದ್ಯತೆ, ಆನ್‌ಲೈನ್ ಪಾವತಿಯೂ ಹೆಚ್ಚಳ

| Updated By: ರಶ್ಮಿ ಕಲ್ಲಕಟ್ಟ

Updated on: Nov 08, 2021 | 1:53 PM

Currency Note Ban ಕೊವಿಡ್-19 ಸಾಂಕ್ರಾಮಿಕವು ಸಾಮಾನ್ಯ ಜೀವನ ಮತ್ತು ಆರ್ಥಿಕ ಚಟುವಟಿಕೆಗಳನ್ನು ವಿವಿಧ ಹಂತಗಳಲ್ಲಿ ಅಡ್ಡಿಪಡಿಸುವ ನಡುವೆ ಮುನ್ನೆಚ್ಚರಿಕೆಯಾಗಿ ನಗದು ಕೂಡಿರಿಸುವುದನ್ನು ಅನೇಕ ಜನರು ಆರಿಸಿಕೊಂಡರು.

5 Years of Demonetisation ನೋಟು ಅಮಾನ್ಯೀಕರಣಕ್ಕೆ 5 ವರ್ಷ: ನಗದು ವಹಿವಾಟಿಗೆ ಕಡಿಮೆ ಆಗಿಲ್ಲ ಆದ್ಯತೆ, ಆನ್‌ಲೈನ್ ಪಾವತಿಯೂ ಹೆಚ್ಚಳ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ನೋಟು ಅಮಾನ್ಯೀಕರಣದ ಐದು ವರ್ಷಗಳ ನಂತರ, ಹೆಚ್ಚು ಹೆಚ್ಚು ಜನರು ನಗದು ರಹಿತ ಪಾವತಿ ವಿಧಾನಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಡಿಜಿಟಲ್ ಪಾವತಿಗಳು ಹೆಚ್ಚುತ್ತಿದೆ. ಅದೇ ವೇಳೆ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳು ನಿಧಾನಗತಿಯಲ್ಲಿ ಏರಿಕೆಯಾಗುತ್ತಲೇ ಇವೆ. ಪ್ರಾಥಮಿಕವಾಗಿ, ಕಳೆದ ಹಣಕಾಸು ವರ್ಷದಲ್ಲಿ ಚಲಾವಣೆಯಲ್ಲಿರುವ ನೋಟುಗಳು ಹೆಚ್ಚಾದವು, ಏಕೆಂದರೆ ಕೊವಿಡ್-19 ಸಾಂಕ್ರಾಮಿಕವು ಸಾಮಾನ್ಯ ಜೀವನ ಮತ್ತು ಆರ್ಥಿಕ ಚಟುವಟಿಕೆಗಳನ್ನು ವಿವಿಧ ಹಂತಗಳಲ್ಲಿ ಅಡ್ಡಿಪಡಿಸುವ ನಡುವೆ ಮುನ್ನೆಚ್ಚರಿಕೆಯಾಗಿ ನಗದು ಕೂಡಿರಿಸುವುದನ್ನು ಅನೇಕ ಜನರು ಆರಿಸಿಕೊಂಡರು.  ಪ್ಲಾಸ್ಟಿಕ್ ಕಾರ್ಡ್‌ಗಳು, ನೆಟ್ ಬ್ಯಾಂಕಿಂಗ್ ಮತ್ತು ಏಕೀಕೃತ ಪಾವತಿಗಳ ಇಂಟರ್‌ಫೇಸ್ ಸೇರಿದಂತೆ ವಿವಿಧ ವಿಧಾನಗಳ ಮೂಲಕ ಡಿಜಿಟಲ್ ಪಾವತಿಗಳಲ್ಲಿ ಹೆಚ್ಚಳವುಂಟಾಗಿದೆ ಎಂದು ಅಧಿಕೃತ ಡೇಟಾ ತೋರಿಸುತ್ತದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯುಪಿಐ ದೇಶದಲ್ಲಿ ಪಾವತಿಯ ಪ್ರಮುಖ ಮಾಧ್ಯಮವಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ಅದೇ ಹೊತ್ತಲ್ಲಿ ಕರೆನ್ಸಿ ನೋಟುಗಳು ಹೆಚ್ಚು ಚಲಾವಣೆಯಲ್ಲಿದೆ.

ಐದು ವರ್ಷಗಳ ಹಿಂದೆ ನವೆಂಬರ್ 8 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ 1,000 ಮತ್ತು 500 ರೂಪಾಯಿಗಳ ನೋಟುಗಳ ಅಮಾನ್ಯೀಕರಣವನ್ನು ಘೋಷಿಸಿದರು. ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವುದು ಮತ್ತು ಕಪ್ಪು ಹಣದ ಹರಿವನ್ನು ತಡೆಯಲಿರುವ ಅಭೂತಪೂರ್ವ ನಿರ್ಧಾರದ ಪ್ರಮುಖ ಉದ್ದೇಶಗಳಲ್ಲಿ ನೋಟುಗಳ ಅಮಾನ್ಯೀಕರಣವೂ ಒಂದಾಗಿದೆ.

ಡಿಜಿಟಲ್ ಪಾವತಿ ವಿಧಾನಗಳ ಹೆಚ್ಚುತ್ತಿದ್ದರೂ ನಗದು ಬಳಕೆ ವೇಗವಾಗಿ ಇಲ್ಲದೇ ಇದ್ದರೂ ಅದು ಇನ್ನೂ ಹೆಚ್ಚುತ್ತಿದೆ ಎಂದು ಇಂಡಿಯಾ ಡಾಟ್ ಕಾಮ್ ವರದಿ ಮಾಡಿದೆ. ಸ್ಥಳೀಯವಲದ ಸಮೀಕ್ಷೆ ಆದರಿಸಿ ಇಂಡಿಯಾ ಡಾಟ್ ಕಾಮ್ ಪ್ರಕಟಿಸಿದ ವರದಿಯಲ್ಲಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಲಾಗಿದೆ.

ನೋಟು ರದ್ದತಿ ನಂತರ ನಗದು ಬಳಕೆ ಕಡಿಮೆಯಾಗಿದೆ, ಆಸ್ತಿ ವಹಿವಾಟುಗಳಲ್ಲಿ ಇದರ ಬಳಕೆ ಇನ್ನೂ ಪ್ರಚಲಿತವಾಗಿದೆ:
ಕಳೆದ 7 ವರ್ಷಗಳಲ್ಲಿ ಆಸ್ತಿಯನ್ನು ಖರೀದಿಸಿದವರಲ್ಲಿ ಶೇ 70 ಜನರು ಬೆಲೆಗಳ ಒಂದು ಭಾಗವನ್ನು ನಗದು ರೂಪದಲ್ಲಿ ಪಾವತಿಸಬೇಕಾಗಿತ್ತು. ಶೇ 16ರಷ್ಟು ಜನರು ಮೊತ್ತದ ಅರ್ಧದಷ್ಟು ಹಣವನ್ನು ನಗದು ರೂಪದಲ್ಲಿ ಪಾವತಿಸಿದ್ದಾರೆ.

ಶೇ 95 ಜನರು ದಿನಸಿ, ಆಹಾರ ಸೇವನೆ ಮತ್ತು ಆಹಾರ ವಿತರಣೆಗಾಗಿ ಹಣವನ್ನು ಬಳಸಿದ್ದಾರೆ. ಶೇ13 ಜನರು ಗ್ಯಾಜೆಟ್‌ಗಳನ್ನು ಖರೀದಿಸಲು ಇದನ್ನು ಬಳಸಿದ್ದಾರೆ. ಶೇ12 ಜನರು ಆಸ್ತಿ, ವಾಹನ ಅಥವಾ ಆಭರಣಗಳಂತಹ ಬೆಲೆಬಾಳುವ ವಸ್ತುಗಳನ್ನು ಖರೀದಿಸಲು ಬಳಸಿದ್ದಾರೆ.

ಕಳೆದ 12 ತಿಂಗಳುಗಳಲ್ಲಿ ಸೇವೆಗಳಿಗೆ ಪಾವತಿಸಲು ಹಣವನ್ನು ಬಳಸಿದವರಲ್ಲಿ, 4 ರಲ್ಲಿ 3 ಜನರು ಮನೆ-ಸಹಾಯ, ಮನೆ ರಿಪೇರಿ ಅಥವಾ ಸೌಂದರ್ಯ/ಕ್ಷೌರ ಇತ್ಯಾದಿ ಸೇವೆಗಳಿಗೆ ಪಾವತಿಸಲು ಬಳಸಿದ್ದಾರೆ.  3 ಭಾರತೀಯರ ಪೈಕಿ ಇಬ್ಬರಲ್ಲಿ ನಗದು ವಹಿವಾಟುಗಳು ಈಗ ಅವರ ಒಟ್ಟು ವಹಿವಾಟಿನ ಶೇ 25 ಕ್ಕಿಂತ ಕಡಿಮೆ.  ಕಳೆದ 12 ತಿಂಗಳುಗಳಲ್ಲಿ ಶೇ 20 ಭಾರತೀಯರು ತಮ್ಮ ನಗದು ವಹಿವಾಟುಗಳನ್ನು ಕಡಿಮೆ ಮಾಡಿದ್ದಾರೆ.

ಆರ್​​ಬಿಐ ಹೇಳುವುದೇನು?
ಆರ್‌ಬಿಐ ಪ್ರಕಾರ ಅಕ್ಟೋಬರ್ 8, 2021 ರಂದು ಕೊನೆಗೊಂಡ ಹದಿನೈದು ದಿನಗಳಲ್ಲಿ ಸಾರ್ವಜನಿಕರ ಬಳಿ 28.30 ಲಕ್ಷ ಕೋಟಿ ರೂಪಾಯಿ ಇತ್ತು. ನೋಟು ರದ್ದತಿ ಮಾಡುವ ಮುನ್ನ ಅಂದರೆ 2016 ನವೆಂಬರ್ 4ರಂದು ಜನರ ಬಳಿ ಇದ್ದದ್ದು ₹17.97ಲಕ್ಷ ಕೋಟಿ. ಈ ಎರಡೂ ದಿನಾಂಕಗಳ ನಡುವೆ ಹೋಲಿಕೆ ನೋಡಿದರೆ ಪ್ರಸ್ತುತ ಜನರ ಬಳಿ ಶೇ 57.48 ಅಂದರೆ ₹10.33 ಲಕ್ಷಕೋಟಿ ಹೆಚ್ಚು ಹಣ ಜನರ ಬಳಿಯಲ್ಲಿ ಇದೆ ಎಂಬುದು ತಿಳಿಯುತ್ತದೆ.
ನವೆಂಬರ್ 25, 2016ರಲ್ಲಿನ ಮಾಹಿತಿ ಪ್ರಕಾರ ಸಾರ್ವಜನಿಕರಲ್ಲಿನ ನಗದು ₹9.11 ಲಕ್ಷ ಕೋಟಿಯಿಂದ ಶೇ 211 ಹೆಚ್ಚಾಗಿದೆ.   ಇದು ವರ್ಷದಿಂದ ವರ್ಷಕ್ಕೆ ಶೇ8.5 ಅಥವಾ 2.21 ಲಕ್ಷ ಕೋಟಿಗಳಷ್ಟು ಏರಿಕೆಯಾಗಿದೆ.

ಕೊವಿಡ್ ಸಾಂಕ್ರಾಮಿಕದ ಹರಡುವಿಕೆಯನ್ನು ನಿಭಾಯಿಸಲು ಸರ್ಕಾರವು ಕಟ್ಟುನಿಟ್ಟಾದ ಲಾಕ್‌ಡೌನ್ ಅನ್ನು ಘೋಷಿಸಿದ್ದರಿಂದ 2020 ರಲ್ಲಿ ಸಾರ್ವಜನಿಕರಿಂದ ಹಣಕ್ಕಾಗಿ ಧಾವಿಸಿದ್ದು ಈ ಏರಿಕೆಗೆ ಕಾರಣವಾಯಿತು.
ಆದಾಗ್ಯೂ, ಸಾಂಕ್ರಾಮಿಕವು ನಗದು ಬಳಕೆಯಲ್ಲಿ ವರ್ತನೆಯ ಬದಲಾವಣೆಯನ್ನು ತಂದಿದೆ ಎಂದು ಡಿಜಿಟಲ್ ತಜ್ಞರು ಹೇಳುತ್ತಾರೆ. ನಾಗರಿಕರು ಎಟಿಎಂಗಳಿಂದ ಹೆಚ್ಚಿನ ಮೊತ್ತವನ್ನು ಹಿಂತೆಗೆದುಕೊಳ್ಳುತ್ತಾರೆ ಆದರೆ ಡಿಜಿಟಲ್ ಮೋಡ್‌ಗಳ ಮೂಲಕ ಪಾವತಿಗಳನ್ನು ಮಾಡಲು ಆದ್ಯತೆ ನೀಡುತ್ತಾರೆ.

ನಗರ ಮತ್ತು ಗ್ರಾಮೀಣ ಭಾರತದಲ್ಲಿ ವಿತ್ ಡ್ರಾ ಮಾಡುವುದರ ಸರಾಸರಿ ಗಾತ್ರವು ಶೇ 20ಹೆಚ್ಚಾಗಿದೆ. 2019-20ರ ಭಾರತೀಯ ರಿಸರ್ವ್ ಬ್ಯಾಂಕ್‌ನ ವಾರ್ಷಿಕ ವರದಿಯು ಸಾಂಕ್ರಾಮಿಕ ಸಮಯದಲ್ಲಿ ನಾಗರಿಕರು ಹಣವನ್ನು ಸಂಗ್ರಹಿಸಲು ಪ್ರಾರಂಭಿಸಿದ್ದರಿಂದ ಅನೇಕ ಆರ್ಥಿಕತೆಗಳು ಚಲಾವಣೆಯಲ್ಲಿ ನಗದು ಹೆಚ್ಚಳವನ್ನು ಕಂಡಿವೆ ಎಂದು ಬಹಿರಂಗಪಡಿಸಿದೆ. ಆದಾಗ್ಯೂ, ಭಾರತದಲ್ಲಿ ಕರೆನ್ಸಿ ಚಲಾವಣೆಯು ವಿಶೇಷವಾಗಿ ತೀಕ್ಷ್ಣವಾಗಿತ್ತು, ಆರ್ ಬಿಐ ವರದಿಗಳ ಪ್ರಕಾರ 2020 ರಿಂದ ಚಲಾವಣೆ ₹26.9 ಲಕ್ಷ ಕೋಟಿಗೆ ಏರಿದೆ.

ಡಿಜಿಟಲ್ ಪಾವತಿಗಳ ಏರಿಕೆ: ಕಳೆದ 12 ತಿಂಗಳುಗಳಲ್ಲಿ ಸರಿಸುಮಾರು ಶೇ 20 ಭಾರತೀಯರು ತಮ್ಮ ನಗದು ವಹಿವಾಟುಗಳನ್ನು ಕಡಿಮೆ ಮಾಡಿದ್ದಾರೆ
2019 ಮತ್ತು 2020 ರ ಇದೇ ರೀತಿಯ ಸಮೀಕ್ಷೆಯ ಫಲಿತಾಂಶಗಳೊಂದಿಗೆ ಸಂಶೋಧನೆಯನ್ನು ಹೋಲಿಸಿದ ನಂತರ, 2019 ರಲ್ಲಿ ಶೇ27 ಮತ್ತು 2020 ರಲ್ಲಿ ಶೇ14 ನಾಗರಿಕರು ತಮ್ಮ ಮಾಸಿಕ ಖರೀದಿಗಳಲ್ಲಿ “50-100 ಪ್ರತಿಶತ” ರಶೀದಿ ರಹಿತವಾಗಿದ್ದು ಇದು ಪ್ರಸ್ತುತ ಈ ವರ್ಷ ಶೇ 15 ಆಗಿದೆ. ಕಳೆದ 12 ತಿಂಗಳುಗಳಲ್ಲಿ ರಶೀದಿಯಿಲ್ಲದೆ ತಮ್ಮ ಮಾಸಿಕ ಖರೀದಿಗಳಲ್ಲಿ ಹೆಚ್ಚಿನದನ್ನು ಮಾಡಿದ ನಾಗರಿಕರ ಸಂಖ್ಯೆಯಲ್ಲಿ ಸರಿಸುಮಾರು ಶೇ 20 ಕಡಿತವಾಗಿದೆ ಎಂದು ಇದು ತೋರಿಸುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಭಾರತವು ಡಿಜಿಟಲ್ ಪಾವತಿಗಳ ಬಳಕೆಯಲ್ಲಿ ಭಾರಿ ಏರಿಕೆಯನ್ನು ಕಂಡಿದೆ. ಇದು ಅಂತಿಮವಾಗಿ ಗ್ರಾಹಕರು ತಮ್ಮ ಖರೀದಿಗೆ ಡಿಜಿಟಲ್ ರಸೀದಿಯನ್ನು ಪಡೆಯುವಲ್ಲಿ ಹೆಚ್ಚಳಕ್ಕೆ ಕಾರಣವಾಯಿತು. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಭಾರತವು ಡಿಜಿಟಲ್ ಪಾವತಿಗಳ ಬಳಕೆಯಲ್ಲಿ ತ್ವರಿತ ಏರಿಕೆಯನ್ನು ಕಾಣುತ್ತಿದೆ.

ಉದಾಹರಣೆಗೆ ಯುಪಿಐ ಪಾವತಿಗಳು ಕಳೆದ 12 ತಿಂಗಳುಗಳಲ್ಲಿ ಶೇ 109 ಬೆಳವಣಿಗೆಯನ್ನು ಕಂಡಿವೆ.  ಜುಲೈ 2021 ರಲ್ಲಿ ₹ 6.06 ಲಕ್ಷ ಕೋಟಿ ಮೌಲ್ಯದ ವಹಿವಾಟುಗಳು ನಡೆದಿವೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಂತಹ ಇತರ ಡಿಜಿಟಲ್ ಪಾವತಿಗಳು ಸಹ ಇದೇ ರೀತಿಯ ಬೆಳವಣಿಗೆಯನ್ನು ಕಂಡಿವೆ. ಆದಾಗ್ಯೂ, ಆರ್ಥಿಕತೆಯನ್ನು ಡಿಜಿಟಲೀಕರಣಗೊಳಿಸುವ ಸರ್ಕಾರದ ಪ್ರಯತ್ನಗಳ ಹೊರತಾಗಿಯೂ, ಆರ್ಥಿಕತೆಯಲ್ಲಿನ ನಗದು ವಹಿವಾಟಿಗೆ  ಆದ್ಯತೆ ಇದೆ. 2020-21 ರಲ್ಲಿ ಇದು ಜಿಡಿಪಿ ಶೇ14.7 ಕ್ಕೆ ಏರಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: 5 Years Of Demonetisation: ನೋಟು ನಿಷೇಧದ 5 ವರ್ಷಗಳ ನಂತರವೂ ಸಾರ್ವಜನಿಕರ ಮಧ್ಯೆ ನಗದು ವಹಿವಾಟಿಗೇ ಆದ್ಯತೆ