Hanuman Jayanti 2023: ಗುಜರಾತಿನ ಸಲಂಗ್​​ಪುರ್​​ನಲ್ಲಿ 54 ಅಡಿ ಎತ್ತರದ ಹನುಮಂತನ ಮೂರ್ತಿ ಅನಾವರಣಗೊಳಿಸಲಿದ್ದಾರೆ ಅಮಿತ್ ಶಾ

|

Updated on: Apr 06, 2023 | 7:00 AM

ಮೂರ್ತಿಯು ಮುಂಭಾಗದಲ್ಲಿ ಉದ್ಯಾನವನವನ್ನು ಹೊಂದಿದ್ದು, 1500 ಪ್ರೇಕ್ಷಕರಿಗೆ ಒಂದು ಆಂಫಿಥಿಯೇಟರ್ ಜೊತೆಗೆ ಬೆಳಕು ಮತ್ತು ಧ್ವನಿ ಪ್ರದರ್ಶನ, ಕಾರಂಜಿ ಇರುತ್ತದೆ

Hanuman Jayanti 2023: ಗುಜರಾತಿನ ಸಲಂಗ್​​ಪುರ್​​ನಲ್ಲಿ 54 ಅಡಿ ಎತ್ತರದ ಹನುಮಂತನ ಮೂರ್ತಿ ಅನಾವರಣಗೊಳಿಸಲಿದ್ದಾರೆ ಅಮಿತ್ ಶಾ
ಅಮಿತ್ ಶಾ
Follow us on

ಸಲಂಗ್​​ಪುರ್: ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಅಮಿತ್‌ ಶಾ(Amit Shah) ಇಂದು(ಏಪ್ರಿಲ್ 6 ರಂದು) ಗುಜರಾತಿನ ಬೊಟಾಡ್ ಜಿಲ್ಲೆಯ ಸಲಂಗ್‌ಪುರ (Salangpur) ಪಟ್ಟಣದಲ್ಲಿ ಭಗವಾನ್ ಹನುಮಾನ್ ಮೂರ್ತಿಯನ್ನು (Hanuman Statue ) ಅನಾವರಣಗೊಳಿಸಲಿದ್ದಾರೆ. 54 ಅಡಿ ಎತ್ತರದ 30,000 ಕೆಜಿ ಪಂಚಧಾತು ವಸ್ತು ನಿರ್ಮಿತ ಮೂರ್ತಿಯಾಗಿದೆ ಇದು.ಇಲ್ಲಿಯೇ ಶಾ ಅವರು ಈ ಯಾತ್ರಾ ಸ್ಥಳದ ಭೋಜನ ಶಾಲೆಯನ್ನು ಉದ್ಘಾಟಿಸಲಿದ್ದಾರೆ. ಮೂರ್ತಿಯು ಮುಂಭಾಗದಲ್ಲಿ ಉದ್ಯಾನವನವನ್ನು ಹೊಂದಿದ್ದು, 1500 ಪ್ರೇಕ್ಷಕರಿಗೆ ಒಂದು ಆಂಫಿಥಿಯೇಟರ್ ಜೊತೆಗೆ ಬೆಳಕು ಮತ್ತು ಧ್ವನಿ ಪ್ರದರ್ಶನ, ಕಾರಂಜಿ ಇರುತ್ತದೆ. ಮೂರ್ತಿಯನ್ನು ರಾಜಸ್ಥಾನ ಮೂಲದ ಕಲಾವಿದ ನರೇಶ್‌ಭಾಯ್ ಕುನಾವತ್ ರಚಿಸಿದ್ದಾರೆ. ಇದನ್ನು ಸಲಂಗ್‌ಪುರದ ರಾಜ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ.

40 ಕೋಟಿ ವೆಚ್ಚದಲ್ಲಿ ಮಂದಿರದಲ್ಲಿ 7 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಭೋಜನಾಲಯದಲ್ಲಿ ಏಕಕಾಲಕ್ಕೆ 5 ಸಾವಿರ ಮಂದಿ ಕೂತು ಉಣ್ಣಲು ಅವಕಾಶ ಕಲ್ಪಿಸಲಾಗಿದೆ.

ಭೋಜನಾಲಯದಲ್ಲಿ ಬೆಂಕಿ ಅಥವಾ ವಿದ್ಯುತ್ ಇಲ್ಲದೆ ಎಣ್ಣೆ ಆಧಾರಿತ ತಂತ್ರಜ್ಞಾನವನ್ನು ಬಳಸಿ ಅಡುಗೆ ಮಾಡಲಾಗುತ್ತದೆ. ಭೋಜನಾಲಯದ ಕಟ್ಟಡವು ಸುಮಾರು 2 ಲಕ್ಷ 30 ಸಾವಿರ ಚದರ ಅಡಿಯಷ್ಟಿದ್ದು, 250 ಅಂಕಣಗಳಲ್ಲಿ ನಿರ್ಮಿಸಲಾಗಿದೆ. ಇದು 75 ಅಡಿ ಅಗಲದ ಮೆಟ್ಟಿಲುಗಳನ್ನು ಹೊಂದಿದ್ದು, ಅವುಗಳ ನಡುವೆ ಹಿರಿಯ ನಾಗರಿಕರು ಮತ್ತು ವಿಶೇಷ ಸಾಮರ್ಥ್ಯವುಳ್ಳವರಿಗೆ ಎಸ್ಕಲೇಟರ್‌ಗಳಿವೆ. ಕಟ್ಟಡದ ಒಳಗೆ ತಾಪಮಾನವನ್ನು ನಿರ್ವಹಿಸಲು ವಿಶೇಷ ಕಗೋಡೆಯನ್ನು ಸ್ಥಾಪಿಸಲಾಗಿದೆ. ಇದು ಒಟ್ಟು 4 ಡೈನಿಂಗ್ ಹಾಲ್‌ಗಳನ್ನು ಹೊಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ