Vande Bharat Express: ಆಂಧ್ರಪ್ರದೇಶದಲ್ಲಿ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ
ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ. ಕಳೆದ ಮೂರು ತಿಂಗಳಲ್ಲಿ ವಿಶಾಖಪಟ್ಟಣಂ-ಸಿಕಂದರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್( Vande Bharat Express) ಮೇಲೆ ಕಲ್ಲು ತೂರಾಟ ನಡೆದ ಮೂರನೇ ಘಟನೆ ಇದಾಗಿದೆ.
ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ. ಕಳೆದ ಮೂರು ತಿಂಗಳಲ್ಲಿ ವಿಶಾಖಪಟ್ಟಣಂ-ಸಿಕಂದರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್( Vande Bharat Express) ಮೇಲೆ ಕಲ್ಲು ತೂರಾಟ ನಡೆದ ಮೂರನೇ ಘಟನೆ ಇದಾಗಿದೆ. ಬುಧವಾರ ವಿಶಾಖಪಟ್ಟಣದಿಂದ ಹೊರಡಬೇಕಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು 05:45 ಗಂಟೆಗೆ ನಿಗದಿತ ನಿರ್ಗಮನದ ಬದಲು 09:45 ಗಂಟೆಗೆ ಮರು ನಿಗದಿಪಡಿಸಲಾಗಿದೆ ಏಕೆಂದರೆ ದುಷ್ಕರ್ಮಿಗಳು ಕಲ್ಲು ತೂರಾಟದಿಂದಾಗಿ ಸಿ -8 ಕೋಚ್‌ನ ಕಿಟಕಿ ಗಾಜು ಒಡೆದಿದ್ದವು.
ಜನವರಿಯಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರದಲ್ಲಿ ವಂದೇ ಭಾರತ್ ರೈಲಿನಲ್ಲಿ ನಿರ್ವಹಣೆ ವೇಳೆ ಕಲ್ಲು ತೂರಾಟ ನಡೆದಿತ್ತು. ವಿಶಾಖಪಟ್ಟಣಂನ ಕಂಚರಪಾಲೆಂ ಬಳಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕೋಚ್‌ನ ವಿಂಡ್ಶೀಲ್ಡ್ಗೆ ಹಾನಿಯಾಗಿತ್ತು. ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಅನೂಪ್ ಕುಮಾರ್ ಸೇತುಪತಿ ಪ್ರಕಾರ, ವಂದೇ ಭಾರತ್ ರೈಲು ನಿರ್ವಹಣೆ ಮತ್ತು ರೈಲಿನ ಓಡಾಟಕ್ಕಾಗಿ ವಿಶಾಖಪಟ್ಟಣವನ್ನು ತಲುಪಿದಾಗ, ಕೆಲವು ಅಪರಿಚಿತರು ಕಲ್ಲು ತೂರಿದ್ದರು.
ಮತ್ತಷ್ಟು ಓದಿ: Vande Bharat Express: ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಆರೋಪಿಗಳ ಪತ್ತೆಗೆ ಮುಂದಾಗಿದೆ ಎಂದು ಅವರು ಹೇಳಿದರು. ಅದೊಂದು ಅತ್ಯಂತ ದುರದೃಷ್ಟಕರ ಘಟನೆ. ಕಂಚುರಪಾಲೆಂ ಬಳಿ ಅಪರಿಚಿತರು ಕೋಚ್‌ಗೆ ಕಲ್ಲು ತೂರಾಟ ನಡೆಸಿದ್ದರಿಂದ ನೂತನ ವಂದೇ ಭಾರತ್ ರೈಲಿನ ಕೋಚ್‌ನ ಗಾಜುಗಳು ಒಡೆದಿವೆ.
ಕಿಟಕಿಯ ಗಾಜಿನ ಬೆಲೆ ಸುಮಾರು 1 ಲಕ್ಷ ರೂ ಆಗಿದೆ, ಇದೆಲ್ಲವೂ ಸಾರ್ವಜನಿಕರ ಹಣ, ದಯವಿಟ್ಟು ಇಂತಹ ಕೆಲಸ ಮಾಡಬೇಡಿ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:37 am, Thu, 6 April 23