ದೆಹಲಿ: ಕೊವಿಡ್ ಸೋಂಕಿನಿಂದ ಅದೆಷ್ಟೋ ಪೋಷಕರು ಬಲಿಯಾಗಿದ್ದಾರೆ. ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ದೇಶದಲ್ಲಿ ಸರಿಸುಮಾರು ಏಪ್ರಿಲ್ 1ರಿಂದ ಇಲ್ಲಿಯವರೆಗೆ 577 ಮಕ್ಕಳು ಅನಾಥರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಸಮೀಕ್ಷೆಯ ಬಳಿಕ ವರದಿ ಉಲ್ಲೇಖಿಸಿ ಮಾತನಾಡಿದರು.
ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ. 2021 ಏಪ್ರಿಲ್ 1ರಿಂದ ನಿನ್ನೆ( ಮಂಗಳವಾರ) ಮಧ್ಯಾಹ್ನ 2 ಗಂಟೆಯವರೆಗೆ ಪೋಷಕರನ್ನು ಕಳೆದುಕೊಂಡ 577 ಮಕ್ಕಳನ್ನು ವರದಿ ಮಾಡಲಾಗಿದೆ. ಅವರ ಪೋಷಕರು ಕೊವಿಡ್ಗೆ ಬಲಿಯಾಗಿದ್ದಾರೆ ಎಂದು ಸಚಿವೆ ಸ್ಮೃತಿ ಇರಾನಿ ಟ್ವೀಟ್ ಮೂಲಕ ತಿಳಿಸಿದರು.
GOI is committed to support and protect every vulnerable child due to loss of both parents to Covid-19. From 1st April 2021 till 2:00 PM today, the State Governments & UTs across the country have reported 577 children whose parents succumbed to Covid-19.
— Smriti Z Irani (@smritiirani) May 25, 2021
ಈ ಮಕ್ಕಳನ್ನು ಎಂದಿಗೂ ಕೈಬಿಡಲಾಗಿಲ್ಲ. ಜಿಲ್ಲೆಯ ಅಧಿಕಾರಿಗಳು ಅವರ ರಕ್ಷಣೆ ಮಾಡುತ್ತಿದ್ದಾರೆ. ಮಕ್ಕಳಿಗೆ ಕೌನ್ಸಲಿಂಗ್ ಅಗತ್ಯವಿದ್ದರೆ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ನೀಡಲು ತಂಡ ಸಿದ್ಧವಾಗಿದೆ. ಈ ಮಕ್ಕಳ ಕಲ್ಯಾಣಕ್ಕಾಗಿ ಹಣದ ಕೊರತೆ ಆಗುವುದಿಲ್ಲ ಎಂದು ಅವರು ಹೇಳಿದರು.
ಕೇಂದ್ರವು, ರಾಜ್ಯ ಮತ್ತು ಜಿಲ್ಲೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಈ ಮೂಲಕ ಮಕ್ಕಳನ್ನು ರಕ್ಷಿಸುತ್ತಿದೆ. ಈ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸಭೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅನಾಥ ಮಕ್ಕಳ ಪಾಲನೆ- ಪೋಷಣೆಗೆ ಪ್ರತಿ ಜಿಲ್ಲೆಗೆ 10 ಲಕ್ಷ ರೂಪಾಯಿ ತೆಗೆದಿರಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಕೊವಿಡ್ನಿಂದ ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳ ಕುರಿತಾಗಿ ಸಂಬಂಧಿಸಿದ ಕಾರ್ಯಕರ್ತರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ(ಡಬ್ಲ್ಯುಸಿಡಿ) ಸಚಿವಾಲಯವು ಸಂಪರ್ಕಿಸಿದಾಗ, ಯಾವುದೇ ವಿವರಣೆಯನ್ನು ನೀಡಿಲ್ಲ ಎಂಬುದು ನೋವಿನ ಸಂಗತಿ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:
Published On - 10:53 am, Wed, 26 May 21