ವಾಯುಪಡೆಯ ಮಡಿಲಿಗೆ ಸೇರಲಿದೆ 6 ಹೊಸ ನೇತ್ರಾ-I ಕಣ್ಗಾವಲು ವಿಮಾನ

|

Updated on: Sep 22, 2023 | 11:23 AM

Netra-I: ಸೇನೆಯಲ್ಲಿ ಮೇಕ್​​​​​ ಇನ್​​ ಇಂಡಿಯಾ ಯೋಜನೆ ಮೂಲಕವೇ ಹೊಸ ಹೊಸ ಸೇನಾ ತಂತ್ರಜ್ಞಾನಗಳನ್ನು ಬಳಸುತ್ತಿದೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಭಾರತೀಯ ವಾಯುಸೇನೆಯು 6 ಸ್ವದೇಶಿ ನೇತ್ರಾ-I ಕಣ್ಗಾವಲು ವಿಮಾನಗಳನ್ನು ಖರೀದಿಸಲು ಸಿದ್ಧವಾಗಿದೆ.

ವಾಯುಪಡೆಯ ಮಡಿಲಿಗೆ ಸೇರಲಿದೆ 6 ಹೊಸ ನೇತ್ರಾ-I ಕಣ್ಗಾವಲು ವಿಮಾನ
ಸಾಂದರ್ಭಿಕ ಚಿತ್ರ
Follow us on

ದೆಹಲಿ, ಸೆ.22: ಭಾರತದ ಆರ್ಥಿಕವಾಗಿ, ಸಾಮಾಜಿಕವಾಗಿ ಜಗತ್ತಿನ ಮುಂದೆ ಎತ್ತರಕ್ಕೆ ಬೆಳೆಯುತ್ತಿದೆ. ಇದೀಗ ತಂತ್ರಜ್ಞಾನದಲ್ಲೂ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ. ಇನ್ನು ಸೇನೆಯಲ್ಲಿ ಮೇಕ್​​​​​ ಇನ್​​ ಇಂಡಿಯಾ ಯೋಜನೆ ಮೂಲಕವೇ ಹೊಸ ಹೊಸ ಸೇನಾ ತಂತ್ರಜ್ಞಾನಗಳನ್ನು ಬಳಸುತ್ತಿದೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಭಾರತೀಯ ವಾಯುಸೇನೆಯು 6 ಸ್ವದೇಶಿ ನೇತ್ರಾ-I (Netra-I) ಕಣ್ಗಾವಲು ವಿಮಾನಗಳನ್ನು ಖರೀದಿಸಲು ಸಿದ್ಧವಾಗಿದೆ. Netra-I, ಏರ್‌ಬೋರ್ನ್ ಅರ್ಲಿ ವಾರ್ನಿಂಗ್ ಮತ್ತು ಕಂಟ್ರೋಲ್ ಏರ್‌ಕ್ರಾಫ್ಟ್ ಪ್ರೋಗ್ರಾಂ ಬ್ರೆಜಿಲಿಯನ್ ಎಂಬ್ರೇರ್ ವಿಮಾನವನ್ನು ಆಧರಿಸಿದೆ ಎಂದು ಸೇನೆ ಹೇಳಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿದ ಎರಡು ನೇತ್ರಾ-I ವಿಮಾನಗಳನ್ನು ಈಗಾಗಲೇ ಭಾರತೀಯ ವಾಯುಪಡೆ ಹೊಂದಿದೆ. ಇನ್ನು 6 ಹೊಸ ನೇತ್ರಾ-I ವಿಮಾನಗಳನ್ನು ತನ್ನ ಮಡಿಲಿಗೆ ಸೇರಿಸಿಕೊಳ್ಳಲಿದೆ. ಯೋಜನೆ ಪ್ರಕಾರ ಈ ವಿಮಾನವನ್ನು DRDO ಅಭಿವೃದ್ಧಿಪಡಿಸಲಿದೆ. ಈ ಯೋಜನೆಗಾಗಿ ವಾಯುಪಡೆಗೆ 8,000 ಕೋಟಿ ರೂಪಾಯಿಗಳ ಯೋಜನೆ ಒದಗಿಸಲಾಗಿದೆ.

ಇದನ್ನೂ ಓದಿ:ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ಹೆರಾನ್ ಮಾರ್ಕ್​ 2 ಡ್ರೋನ್​ನ ವೈಶಿಷ್ಟ್ಯವೇನು? 

ಇನ್ನು ಎಂಬ್ರೇರ್ ಇಆರ್‌ಜೆ-145 ವಿಮಾನವನ್ನು ಮಾರ್ಪಡಿಸಿ ಈ ಕಣ್ಗಾವಲು ವಿಮಾನಗಳನ್ನು ತಯಾರಿಸಲಾಗುವುದು. ಡಿಆರ್‌ಡಿಒ ಈ ಹಿಂದೆ 330 ವಿಮಾನಗಳಲ್ಲಿ ಆರು ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಗಳಿಗೆ (AWACS) ನಿಯೋಜಿಸಿತ್ತು. ಇದರ ತಯಾರಿಗಾಗಿ ಬೆಂಗಳೂರಿನ ವಾಯು ನೆಲೆಯಲ್ಲಿ ಸೌಲಭ್ಯವನ್ನು ಮಾಡಲಾಗಿದೆ. ನೇತ್ರಾ-2 ಯೋಜನೆಗಾಗಿ A-321 ವಿಮಾನವನ್ನು ಮಾರ್ಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ವರದಿ ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ