AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ಮೀಸಲಾತಿ ಬಿಲ್ ಅಂಗೀಕಾರ: ದೇಶ ನಿರ್ಮಿಸಿದ ಅಸಂಖ್ಯಾತ ಮಹಿಳೆಯರಿಗೆ ಅರ್ಪಣೆ ಎಂದ ಮೋದಿ

27 ವರ್ಷಗಳ ಬಳಿಕ ಮಹಿಳಾ ಮೀಸಲಾತಿ ಮಸೂದೆ ಸಂಸತ್ ನ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ದೇಶಾದ್ಯಂತ ಮಹಿಳೆಯರಲ್ಲಿ ಸಂಭ್ರಮ ಮನೆ ಮಾಡಿದೆ. ಇನ್ನು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, ದೇಶ ನಿರ್ಮಿಸಿದ ಅಸಂಖ್ಯಾತ ಮಹಿಳೆಯರಿಗೆ ಅರ್ಪಣೆ ಎಂದಿದ್ದಾರೆ.

ಮಹಿಳಾ ಮೀಸಲಾತಿ ಬಿಲ್ ಅಂಗೀಕಾರ: ದೇಶ ನಿರ್ಮಿಸಿದ ಅಸಂಖ್ಯಾತ ಮಹಿಳೆಯರಿಗೆ ಅರ್ಪಣೆ ಎಂದ ಮೋದಿ
ನರೇಂದ್ರ ಮೋದಿ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Sep 22, 2023 | 12:05 PM

Share

ನವದೆಹಲಿ, (ಸೆಪ್ಟೆಂಬರ್ 22): ಮಹಿಳಾ ಮೀಸಲಾತಿ ಕನಸು ಕೊನೆಗೂ ನನಸಾಗಿದೆ. 27 ವರ್ಷಗಳ ಕಾಯುವಿಕೆ ಅಂತ್ಯವಾಗಿದೆ. ಲೋಕಸಭೆ ಬಳಿಕ ನಿನ್ನೆ(ಸೆ.21) ರಾಜ್ಯಸಭೆಯಲ್ಲಿಯೂ ಮಹಿಳಾ ಮೀಸಲಾತಿ ಮಸೂದೆ(women reservation bill) ಅಂಗೀಕಾರವಾಗಿದೆ. ಐತಿಹಾಸಿಕ ಮಸೂದೆ ಅಂಗೀಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹರ್ಷ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿರೋ ಮೋದಿ, ಮಾಡಿರುವ ಅವರು, ದೇಶದ ಮಹಿಳೆಯರ ಅದಮ್ಯ ಚೇತನ, ಶಕ್ತಿ, ಧೈರ್ಯವನ್ನು ಸ್ಮರಿಸುತ್ತೇವೆ. ಈ ಐತಿಹಾಸಿಕ ಹೆಜ್ಜೆಯು ಅವರ ಧ್ವನಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೇಳಲು ಸಹಕಾರಿಯಾಗಲಿದೆ ಎಂದು ಬಣ್ಣಿಸಿದ್ದಾರೆ.

ದೇಶ ನಿರ್ಮಿಸಿದ ಅಸಂಖ್ಯಾತ ಮಹಿಳೆಯರಿಗೆ ಅರ್ಪಣೆ

ನಮ್ಮ ರಾಷ್ಟ್ರದ ಪ್ರಜಾಸತಾತ್ಮಕ ಪಯಣದಲ್ಲಿ ನಿರ್ಣಾಯಕ ಕ್ಷಣ. 140 ಕೋಟಿ ಭಾರತೀಯರಿಗೆ ಅಭಿನಂದನೆಗಳು. ನಾರಿ ಶಕ್ತಿ ವಂದನ್ ಅಧಿನಿಯಮ ಮಸೂದೆಗೆ ಮತ ನೀಡಿದ ರಾಜ್ಯ ಸಭಾ ಸದಸ್ಯರಿಗೆ ಧನ್ಯವಾದ. ಭಾರತದಲ್ಲಿ ಮಹಿಳೆ ಸಬಲೀಕರಣ ಮತ್ತು ಪ್ರಾತಿನಿಧ್ಯ ಒದಗಿಸುವ ಕಾಲವನ್ನು ಬರಮಾಡಿಕೊಂಡಿದ್ದೇವೆ. ಇದು ಕೇವಲ ಶಾಸನ ಅಲ್ಲ. ನಮ್ಮ ದೇಶ ನಿರ್ಮಿಸಿರುವ ಅಸಂಖ್ಯಾತ ಮಹಿಳೆಯರಿಗೆ ಅರ್ಪಣೆಯಾಗಿದೆ. ಮಹಿಳೆಯರ ಕೊಡುಗೆಯಿಂದಾಗಿ ಭಾರತ ಸುಧಾರಣೆ ಕಂಡಿದೆ. ನಮ್ಮ ದೇಶದ ಮಹಿಳೆಯರ ಅದಮ್ಯ ಚೇತನ, ಶಕ್ತಿ, ಧೈರ್ಯವನ್ನು ಸ್ಮರಿಸುತ್ತೇವೆ. ಈ ಐತಿಹಾಸಿಕ ಹೆಜ್ಜೆಯು ಅವರ ಧ್ವನಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೇಳಲು ಸಹಕಾರಿಯಾಗಲಿದೆ ಎಂದರು.

ಇದನ್ನೂ ಓದಿ: Womens Reservation Bill; ಐತಿಹಾಸಿಕ ಮಹಿಳಾ ಮೀಸಲಾತಿ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಸರ್ವಾನುಮತದ ಅನುಮೋದನೆ

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕೂಡ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಆಗಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ಮೋದಿ ಅವರ ಉದಾತ್ತ ಚಿಂತನೆಯಲ್ಲಿ ಮೂಡಿ ಬಂದ ಕಲ್ಪನೆಯಾಗಿದೆ ಎಂದಿದ್ದಾರೆ.

1980 -90 ರ ದಶಕದಿಂದಲೂ ಮಹಿಳಾ ಮೀಸಲಾತಿ ಕೂಗು ಕೇಳಿ ಬಂದಿತ್ತು. ಹಲವು ಸರ್ಕಾರಗಳು ಬಂದು ಹೋದವು,ಅಟಲ್ ಬಿಹಾರಿ ವಾಜಪೇಯಿ ಬಹಳ ಪ್ರಯತ್ನಿಸಿದ್ದರು. ಆದ್ರೆ, ಸಂಪೂರ್ಣ ಬಹುಮತ ಇರದ ಕಾರಣ ಅವರ ಪ್ರಯತ್ನ ಆಗಲಿಲ್ಲ. ಮುಂದೆ ಬಂದ UPA ಸರ್ಕಾರ ವೋಟ್ ಬ್ಯಾಂಕ್ ರೀತಿ ನೋಡಿ,ಪ್ರಮಾಣಿಕ‌ ಪ್ರಯತ್ನ ಮಾಡಲಿಲ್ಲ.ಆದ್ರೆ ಮೋದಿ ಅವರ ಧೃಡ ನಿಶ್ಚಯ,ರಾಜಕೀಯ ಇಚ್ಛಾ ಶಕ್ತಿ ಕಾರಣದಿಂದ ಸಂಸತ್ ನಲ್ಲಿ ಮಹಿಳಾ ಮೀಸಲಾತಿ ಅಂಗೀಕಾರ ಆಗಿದೆ. ದೇಶದ ಎಲ್ಲಾ ಮಹಿಳೆಯರ ಪರವಾಗಿ ಮೋದಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

ಒಟ್ಟಿನಲ್ಲಿ 27 ವರ್ಷಗಳ ಬಳಿಕ ಮಹಿಳಾ ಮೀಸಲಾತಿ ಮಸೂದೆ ಸಂಸತ್ ನ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ದೇಶಾದ್ಯಂತ ಮಹಿಳೆಯರಲ್ಲಿ ಸಂಭ್ರಮ ಮನೆ ಮಾಡಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್