ಜೈಲಿನ ಸಿಬ್ಬಂದಿ ಸೇರಿ ಕೈದಿಗಳಿಗೂ ವಕ್ಕರಿಸಿದ ಕೊರೊನಾ ಕ್ರಿಮಿ, ಏಲ್ಲಿ?

ಮುಂಬೈ: ಇಡೀ ದೇಶಾದ್ಯಂತ ಹೆಜ್ಜೆ ಹೆಜ್ಜೆಗೂ ಕೊರೊನಾ ಕ್ರೂರಿಯದ್ದೇ ಆತಂಕವಾಗಿದೆ. ಇದೀಗ ಮಹಾರಾಷ್ಟ್ರದ ಅರ್ಥರ್ ರೋಡ್ ಜೈಲಿಗೂ ಕೊರೊನಾ ಕ್ರಿಮಿ ವಕ್ಕರಿಸಿದ್ದು, ಜೈಲಿನ 77 ಕೈದಿಗಳು, 26 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅರ್ಥರ್ ರೋಡ್ ಜೈಲು ಸೇರಿ 8 ಜೈಲುಗಳು ಸೀಲ್​ಡೌನ್ ಮಾಡಲಾಗಿದ್ದು, ಹೊರಗೆ ಹೋಗಲು ಹಾಗೂ ಒಳಗೆ ಪ್ರವೇಶಿಸಲು ಯಾರಿಗೂ ಅನುಮತಿ ಇಲ್ಲ. ತರಕಾರಿ, ಹಾಲು ಸರಬರಾಜು ಮಾಡುವ ವ್ಯಕ್ತಿಗೆ ಮಾತ್ರ ಜೈಲು ಪ್ರವೇಶಿಸಲು ಅನುಮತಿ ಇದೆ. ಹೀಗಾಗಿ ಇವರಿಂದಲೇ ಕೈದಿಗಳು […]

ಜೈಲಿನ ಸಿಬ್ಬಂದಿ ಸೇರಿ ಕೈದಿಗಳಿಗೂ ವಕ್ಕರಿಸಿದ ಕೊರೊನಾ ಕ್ರಿಮಿ, ಏಲ್ಲಿ?
ಸಾಧು ಶ್ರೀನಾಥ್​

Updated on: May 08, 2020 | 4:43 PM

ಮುಂಬೈ: ಇಡೀ ದೇಶಾದ್ಯಂತ ಹೆಜ್ಜೆ ಹೆಜ್ಜೆಗೂ ಕೊರೊನಾ ಕ್ರೂರಿಯದ್ದೇ ಆತಂಕವಾಗಿದೆ. ಇದೀಗ ಮಹಾರಾಷ್ಟ್ರದ ಅರ್ಥರ್ ರೋಡ್ ಜೈಲಿಗೂ ಕೊರೊನಾ ಕ್ರಿಮಿ ವಕ್ಕರಿಸಿದ್ದು, ಜೈಲಿನ 77 ಕೈದಿಗಳು, 26 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಅರ್ಥರ್ ರೋಡ್ ಜೈಲು ಸೇರಿ 8 ಜೈಲುಗಳು ಸೀಲ್​ಡೌನ್ ಮಾಡಲಾಗಿದ್ದು, ಹೊರಗೆ ಹೋಗಲು ಹಾಗೂ ಒಳಗೆ ಪ್ರವೇಶಿಸಲು ಯಾರಿಗೂ ಅನುಮತಿ ಇಲ್ಲ. ತರಕಾರಿ, ಹಾಲು ಸರಬರಾಜು ಮಾಡುವ ವ್ಯಕ್ತಿಗೆ ಮಾತ್ರ ಜೈಲು ಪ್ರವೇಶಿಸಲು ಅನುಮತಿ ಇದೆ. ಹೀಗಾಗಿ ಇವರಿಂದಲೇ ಕೈದಿಗಳು ಮತ್ತು ಪೊಲೀಸರಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us