ತಮಿಳುನಾಡಿನಲ್ಲಿ ಪ್ರವಾಸಿ ಬಸ್ ಪ್ರಪಾತಕ್ಕೆ ಬಿದ್ದು 8 ಜನ ಸಾವು

| Updated By: ವಿವೇಕ ಬಿರಾದಾರ

Updated on: Oct 01, 2023 | 7:22 AM

ತಮಿಳುನಾಡಿನ ನೀಲಗಿರಿ ಜಿಲ್ಲೆ ಕೂನೂರು ಬಳಿ ಪ್ರಪಾತಕ್ಕೆ ಪ್ರವಾಸಿ ಬಸ್​ ಬಿದ್ದು 8 ಜನ ಮೃತಪಟ್ಟಿದ್ದಾರೆ. 35 ಜನರಿಗೆ ಗಾಯಗಳಾಗಿದ್ದು, ಕೂನೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮಿಳುನಾಡಿನಲ್ಲಿ ಪ್ರವಾಸಿ ಬಸ್ ಪ್ರಪಾತಕ್ಕೆ ಬಿದ್ದು 8 ಜನ ಸಾವು
ಪ್ರಪಾತಕ್ಕೆ ಬಿದ್ದ ಬಸ್​
Follow us on

ಚೆನ್ನೈ ಅ.01: ತಮಿಳುನಾಡಿನ (Tamilanadu) ನೀಲಗಿರಿ ಜಿಲ್ಲೆಯ ಕೂನೂರು ಬಳಿಯ ಮರಪಾಲಂನಲ್ಲಿ ಪ್ರಪಾತಕ್ಕೆ ಪ್ರವಾಸಿ ಬಸ್​ (Tourist Bus) ಬಿದ್ದು 8 ಜನ ಮೃತಪಟ್ಟಿದ್ದಾರೆ. 35 ಜನರಿಗೆ ಗಾಯಗಳಾಗಿದ್ದು, ಕೂನೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರವಾಸಿ ಬಸ್​ನಲ್ಲಿ ಒಟ್ಟು 55 ಜನ ಪ್ರಯಾಣಿಸುತ್ತಿದ್ದ ಮಾಹಿತಿ ದೊರೆತಿದೆ. ಮೃತರಿಗೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳ ಚಿಕಿತ್ಸೆಗೆ ತಲಾ 50 ಸಾವಿರ ರೂ. ನೆರವು ನೀಡುವುದಾಗಿ ಘೋಷಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿ ಸೂಚಿಸಿದ್ದಾರೆ.

ಪೊಲೀಸರ ಪ್ರಕಾರ, ಪ್ರವಾಸಿ ಬಸ್ ಕೊಯಮತ್ತೂರು ಜಿಲ್ಲೆಯ ಊಟಿಯಿಂದ ಮೆಟ್ಟುಪಾಳ್ಯಂಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಕುನ್ನೂರು ಬಳಿಯ ಮರಪಾಲಂ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ 100 ಅಡಿ ಆಳದ ಕಂದಕಕ್ಕೆ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಮತ್ತೊಂದು ಭೀಕರ ಅಪಘಾತ, ಕಾರಿನಲ್ಲಿದ್ದ ನಾಲ್ವರು ದುರ್ಮರಣ

ಪೊಲೀಸರಿಂದ ಬಂದಿರುವ ಮಾಹಿತಿ ಪ್ರಕಾರ ನಾಲ್ವರು ಮಹಿಳೆಯರು ಹಾಗೂ ಓರ್ವ ಅಪ್ರಾಪ್ತ ಮೃತಪಟ್ಟಿದ್ದಾನೆ. ನಿಧನರಾದವರು ತೆಂಕಶಿ ಜಿಲ್ಲೆಯ ಕಡಯಂ ನಿವಾಸಿಯವರು ಎಂಬುವುದು ತಿಳಿದುಬಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:07 am, Sun, 1 October 23