ಭಾರತದಲ್ಲಿ 80 ಕೋಟಿ ಉಚಿತ ಪಡಿತರ, ಆದರೆ ಪಾಕ್ ಆಹಾರಕ್ಕಾಗಿ ಪರದಾಡುತ್ತಿದೆ: ಯೋಗಿ ಆದಿತ್ಯನಾಥ್

|

Updated on: Apr 08, 2023 | 10:58 AM

ಭಾರತ ಸರ್ಕಾರವು ಕಳೆದ ಮೂರು ವರ್ಷಗಳಿಂದ 80 ಕೋಟಿ ಜನರಿಗೆ ಉಚಿತ ಪಡಿತರವನ್ನು ನೀಡುತ್ತಿದೆ, ಆದರೆ ಪಾಕಿಸ್ತಾನದಲ್ಲಿ ಜನರು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಇಂದು ಜಗತ್ತು ಭಾರತದ ಎದುರು ನೋಡುತ್ತಿದೆ ಎಂದು ಯೋಗಿ ಹೇಳಿದರು.

ಭಾರತದಲ್ಲಿ 80 ಕೋಟಿ ಉಚಿತ ಪಡಿತರ, ಆದರೆ ಪಾಕ್ ಆಹಾರಕ್ಕಾಗಿ ಪರದಾಡುತ್ತಿದೆ: ಯೋಗಿ ಆದಿತ್ಯನಾಥ್
ಸಾಂದರ್ಭಿಕ ಚಿತ್ರ
Follow us on

ಕೌಶಂಬಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಅಭಿವೃದ್ಧಿಯ ಹೊಸ ಶಿಖರದಲ್ಲಿ ಸಾಗುತ್ತಿದೆ ಮತ್ತು ಇಡಿ ಜಗತ್ತು ನಮ್ಮ ದೇಶದತ್ತ ನೋಡುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)  ಹೇಳಿದ್ದಾರೆ. ಏ.7ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೌಷ್ಮಾಬಿ ಮಹೋತ್ಸವವನ್ನು ಉದ್ಘಾಟಿಸಿದರು ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಈ ಸಂದರ್ಭದಲ್ಲಿ ಕೌಶಂಬಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ, ಭಾರತ ಸರ್ಕಾರವು ಕಳೆದ ಮೂರು ವರ್ಷಗಳಿಂದ 80 ಕೋಟಿ ಜನರಿಗೆ ಉಚಿತ ಪಡಿತರವನ್ನು ನೀಡುತ್ತಿದೆ, ಆದರೆ ಪಾಕಿಸ್ತಾನದಲ್ಲಿ ಜನರು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಇಂದು ಜಗತ್ತು ಭಾರತದ ಎದುರು ನೋಡುತ್ತಿದೆ.

ಕೌಶಂಬಿ ಮಹೋತ್ಸವದ ಮೂಲಕ ಈ ಭಾಗದ ಸಾಂಪ್ರದಾಯಿಕ ಮೌಲ್ಯಗಳಿಗೆ ಅಂತಾರಾಷ್ಟ್ರೀಯ ವೇದಿಕೆ ಕಲ್ಪಿಸಿದ್ದಕ್ಕಾಗಿ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಮುಖ್ಯಮಂತ್ರಿ ಧನ್ಯವಾದ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಆರೋಗ್ಯವಂತರಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಪ್ರೇರಣೆ ಪಡೆಯುತ್ತಿದ್ದಾರೆ ಎಂದರು.

612 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಗೃಹ ಸಚಿವರು ಉದ್ಘಾಟಿಸಿದ್ದಾರೆ. ಕೌಶಂಬಿಯ ಜನರು ಅತ್ಯಂತ ದೊಡ್ಡ ಇತಿಹಾಸವನ್ನು ಹೊಂದಿದ್ದಾರೆ. ಅಂದಿನ ಕಾಲದ 16 ಮಹಾಜನಪದಗಳಲ್ಲಿ ಕೌಶಂಬಿ ಒಂದಾಗಿತ್ತು. ಶ್ರೀ ರಾಮಚಂದ್ರನು ಕೂಡ ಈ ಕೌಶಂಬಿಗೆ ಅಗಾಧ ಕೊಡುಗೆಯನ್ನು ನೀಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Yogi Adityanath Oath Taking ಉತ್ತರಪ್ರದೇಶದ ಸಿಎಂ ಆಗಿ ಯೋಗಿ ಆದಿತ್ಯನಾಥ ; ಉಪ ಮುಖ್ಯಮಂತ್ರಿಯಾಗಿ ಕೇಶವ್ ಮೌರ್ಯ ಮತ್ತು ಬ್ರಿಜೇಶ್ ಪಾಠಕ್ ಪ್ರಮಾಣ ವಚನ

ನಂತರ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ಅಮಿತ್​ ಶಾ, ರಾಜ್ಯದ ಅಭಿವೃದ್ಧಿ ಯೋಜನೆಗಳು ಯಾವುದೇ ತಾರತಮ್ಯವಿಲ್ಲದೆ ಪ್ರತಿ ಹಳ್ಳಿ, ಪ್ರತಿ ಬಡವರು, ರೈತರು ಮತ್ತು ಯುವಕರನ್ನು ತಲುಪುತ್ತಿವೆ. ನಮ್ಮ ಸರ್ಕಾರವು ಕ್ರೀಡಾ ಕ್ಷೇತ್ರಕ್ಕೂ ವಿಶೇಷ ಗಮನ ಹರಿಸುತ್ತಿದೆ. ನಾವು ಪ್ರತಿ ಹಳ್ಳಿಯಲ್ಲಿ ಆಟದ ಮೈದಾನ ಮತ್ತು ಪ್ರತಿ ಜಿಲ್ಲೆಯಲ್ಲೂ ಒಂದು ಕ್ರೀಡಾಂಗಣವನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ. ಪ್ರಧಾನಿ ಮೋದಿ ಅವರು ತಿಳಿಸಿರುವಂತೆ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಎಂದು ತಿಳಿಸಿದ್ದಾರೆ. ಪ್ರತಿ ಪಂಚಾಯತ್, ನಗರ ನಿಕಾಯ್ ಮತ್ತು ಜನಪದ ಅದರ ಸಂಸ್ಥಾಪನಾ ದಿನವನ್ನು ಆಚರಿಸಬೇಕು. 2018ರಲ್ಲಿ ಕೌಶಂಬಿ ಮಹೋತ್ಸವದಲ್ಲಿ ನಾನು ಭಾಗವಹಿಸಿದ್ದೆ, ಆದರೆ ಇಂದು ಅದೇ ಮಟ್ಟದ ವೈಭವಿಕತೆ ಇದೆ ಎಂದು ಹೇಳಿದ್ದಾರೆ.

 

Published On - 10:52 am, Sat, 8 April 23