ಯುವಕರೇ ನಾಚುವಂತೆ ಈಜುವ ವೃದ್ಧೆ: 85ರ ಹರೆಯದಲ್ಲೂ ಈ ಊರಿನ ಮಕ್ಕಳಿಗೆ ಇವರೇ ಸ್ವಿಮ್ಮಿಂಗ್​ ಟೀಚರ್​

ವಯಸ್ಸು 85 ಆಗಿದ್ದರೂ ಈಜಿನಲ್ಲಿ ನಿಪುಣರು ಈ ವೃದ್ಧೆ. ಅದೇ ಉತ್ಸಾಹ, ಅದೇ ಹುರುಪಿನಿಂದ ತನ್ನೂರಿನ ಯುವ ಜನತೆಗೆ ಈಜು ಕಲಿಸುತ್ತಾರೆ. ಇವರ ಹೆಸರ ಪಾಪಾ ಎಂದಾಗಿದೆ.

ಯುವಕರೇ ನಾಚುವಂತೆ ಈಜುವ ವೃದ್ಧೆ: 85ರ ಹರೆಯದಲ್ಲೂ ಈ ಊರಿನ ಮಕ್ಕಳಿಗೆ ಇವರೇ ಸ್ವಿಮ್ಮಿಂಗ್​ ಟೀಚರ್​
85ರ ವೃದ್ಧೆ ಪಾಪಾ
Edited By:

Updated on: Dec 26, 2021 | 10:45 AM

ವಯಸ್ಸು ಕೇವಲ ಸಂಖ್ಯೆಯಷ್ಟೇ. ಇಚ್ಛಾ ಶಕ್ತಿ, ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಯಾವುದೇ ಕೆಲಸಕ್ಕೂ ವಯಸ್ಸು ಅಡ್ಡ ಬರುವುದಿಲ್ಲ ಎನ್ನುವುದಕ್ಕೆ ಈ ವೃದ್ಧೆ ಉದಾಹರಣೆಯಾಗಿದ್ದಾರೆ. ಹೌದು ವಯಸ್ಸು 85 ಆಗಿದ್ದರೂ ಈಜಿನಲ್ಲಿ ನಿಪುಣರು ಈ ವೃದ್ಧೆ. ಅದೇ ಉತ್ಸಾಹ, ಅದೇ ಹುರುಪಿನಿಂದ ತನ್ನೂರಿನ ಯುವ ಜನತೆಗೆ ಈಜು ಕಲಿಸುತ್ತಾರೆ. ಇವರ ಹೆಸರ ಪಾಪಾ ಎಂದಾಗಿದೆ. ತಮಿಳುನಾಡಿನ ನಾಮಕ್ಕಲ್​ ಜಿಲ್ಲೆಯ ರಾಶಿಪುರಂನ ವೆನಂದೂರುನಲ್ಲಿ ವಾಸಿಸುತ್ತಾರೆ. ಪಾಪಾ ನದಿ, ಕೆರೆ, ಬಾವಿಗಳಲ್ಲಿ ಸಲೀಸಾಗಿ ಈಜಬಲ್ಲರು. ಎಲ್ಲಾ ವಯಸ್ಸಿನವರಿಗೆ ಈಜನ್ನು ಕಲಿಸುವ ಇವರು ತಮಿಳುನಾಡಿನಾದ್ಯಂತ ಹೆಸರುವಾಸಿಯಾಗಿದ್ದಾರೆ. ಐದು ವರ್ಷದವರಿದ್ದಾಗ ಪಾಪಾ ತಮ್ಮ ತಂದೆಯಿಂದ ಈಜನ್ನು ಕಲಿತಿದ್ದರು. ಇದೀಗ ಅದನ್ನೇ ಹವ್ಯಾಸವಾಗಿ ಮುಂದುವರೆಸಿಕೊಂಡು ಬಂದ ಪಾಪಾ ನೂರಾರು ಜನರಿಗೆ ಈಜು ತರಬೇತಿದಾರರಾಗಿದ್ದಾರೆ.

ಈ ಬಗ್ಗೆ ಪಾಪಾ, ನಾನು ಐದು ವರ್ಷದವಳಿದ್ದಾಗ ನನ್ನ ತಂದೆಯಿಂದ ವಿವಿಧ ರೀತಿಯ ಈಜನ್ನು ಕಲಿತಿದ್ದೇನೆ. ಅವರು ಹೊಳೆಯ ಬಳಿ ಬಟ್ಟೆ ಒಗೆಯಲು ಹೋದಾಗ  ಈಜಲು ತೆರಳುತ್ತಿದ್ದೆ. ಅವರ ಒಂದು ಬಟ್ಟೆಯನ್ನು ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಈಜುತ್ತಿದ್ದೆ. ಹವ್ಯಾಸವಾಗಿ ಆರಂಭಿಸಿದ್ದು ನನ್ನ ಅಭ್ಯಾಸವಾಗಿ ಮಾರ್ಪಟ್ಟಿತು. ನನ್ನ ಮಗ, ಮಗಳು, ಮೊಮ್ಮಕ್ಕಳಿಗೂ ಈಜು ಕಲಿಸಿದ್ದೇನೆ. ನನ್ನ ಬಳಿ ಐದರಿಂದ 40 ವರ್ಷ ವಯಸ್ಸಿನವರೂ ಈಜು ಕಲಿಯಲು ಬರುತ್ತಾರೆ. ವಯಸ್ಸು 80 ದಾಟಿದರೂ ಇತರರಿಗೆ ಕಲಿಸಬೇಕೆಂಬ ಹಂಬಲ ನನ್ನಲ್ಲಿ ಹಾಗೆಯೇ ಇದೆ ಎನ್ನುತ್ತಾರೆ. ತಮಿಳುನಾಡಿನಾದ್ಯಂತ ಜನ ಇವರನ್ನು ಗುರುತಿಸುತ್ತಾರೆ.

ಪಾಪಾ ಬಗ್ಗೆ ಅವರ ಮಗ ಮಾತನಾಡುತ್ತಾ, ಹವಾಮಾನ ಹೇಗೇ ಇರಲಿ ಬಾವಿ, ಕೆರೆಗಳಿಗೆ ಇಳಿದು ಈಜು ತನ್ನ ತಾಯಿ ಉತ್ಸುಕಳಾಗಿರುತ್ತಾಳೆ. ಫ್ರಿಸ್ಟೈಲ್​, ಸೈಡ್​ಸ್ಟ್ರೋಕ್​, ಬ್ಯಾಕ್​ ಸ್ಟ್ರೋಕ್​ ಸೇರಿದಂತೆ ಹಲವು ವಿಧದ ಈಜು ಆಕೆಗೆ ಕರತಲಾಮಲಕವಾಗಿದೆ.  ನಿಜವಾಗಿಯೂ ಇಂದಿನ ಜನತೆಗೆ ನಮ್ಮ ಹಳ್ಳಿಯ ಜನರಿಗೆ ಸ್ಪೂರ್ತಿಯಾಗಿದ್ದಾಳೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

Omicron ಭಾರತದಲ್ಲಿ ಒಂದೇ ದಿನ 6987 ಕೊವಿಡ್ ಪ್ರಕರಣ ಪತ್ತೆ; ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 422ಕ್ಕೆ ಏರಿಕೆ