ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿಯನ್ನು ಅಸಂವಿಧಾನಿಕ ಎಂದು ಪರಿಗಣಿಸಿ -ಸುಪ್ರೀಂ ಮೊರೆಹೋದ 94 ವರ್ಷದ ವೃದ್ಧೆ

| Updated By: KUSHAL V

Updated on: Dec 05, 2020 | 4:17 PM

1975ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿಯನ್ನು ಅಸಂವಿಧಾನಿಕ ಎಂದು ಪರಿಗಣಿಸಿ ಅದನ್ನು ಜಾರಿಗೊಳಿಸಿದ ಅಧಿಕಾರಿಗಳಿಂದ ಪರಿಹಾರವಾಗಿ 25 ಕೋಟಿ ರೂ. ಕೇಳಿ 94 ವರ್ಷದ ವೃದ್ಧೆಯೊಬ್ಬರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿಯನ್ನು ಅಸಂವಿಧಾನಿಕ ಎಂದು ಪರಿಗಣಿಸಿ -ಸುಪ್ರೀಂ ಮೊರೆಹೋದ 94 ವರ್ಷದ ವೃದ್ಧೆ
ತುರ್ತು ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ
Follow us on

ದೆಹಲಿ: 1975ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿಯನ್ನು ಅಸಂವಿಧಾನಿಕ ಎಂದು ಪರಿಗಣಿಸಿ ಅದನ್ನು ಜಾರಿಗೊಳಿಸಿದ ಅಧಿಕಾರಿಗಳಿಂದ ಪರಿಹಾರವಾಗಿ 25 ಕೋಟಿ ರೂ. ಕೇಳಿ 94 ವರ್ಷದ ವೃದ್ಧೆಯೊಬ್ಬರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಸುಪ್ರೀಂ ಕೋರ್ಟ್​ಗೆ ಸಲ್ಲಿಸಿರುವ ತಮ್ಮ ಅರ್ಜಿಯಲ್ಲಿ ವೃದ್ಧೆ ಈ ಅಸಂವಿಧಾನಿಕ ಅನ್ಯಾಯವು ನಮ್ಮ ಕುಟುಂಬದ ಮೂರು ತಲೆಮಾರುಗಳ ಮೇಲೆ ಪರಿಣಾಮ ಬೀರಿದೆ ಎಂದು ಉಲ್ಲೇಖಿಸಿದ್ದಾರೆ. ಜೊತೆಗೆ, ಅಂದಿನ ತುರ್ತು ಪರಿಸ್ಥಿತಿಯ ಕೆಟ್ಟ ಪ್ರಭಾವ ಇನ್ನೂ ತಮ್ಮ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಿದೆ. ಹಾಗಾಗಿ, ತುರ್ತು ಪರಿಸ್ಥಿತಿಯನ್ನು ಕಾನೂನುಬಾಹಿರವೆಂದು ಘೋಷಿಸುವ ಮೂಲಕ ನಾನು ಕೊನೆಗೂ ನೆಮ್ಮದಿ ಕಾಣಬಹದುದು ಎಂದು ಹೇಳಿದ್ದಾರೆ.

ಅಧಿಕಾರಿಗಳ ಒತ್ತಡ ಸಹಿಸಲಾಗದೆ ದೇಶ ತೊರೆದ ಸಂತ್ರಸ್ತೆ, ಕುಟುಂಬಸ್ಥರು
ಇದಲ್ಲದೆ, ವೃದ್ಧೆ ತಮ್ಮ ಅರ್ಜಿಯಲ್ಲಿ  ಅಂದಿನ ಸರ್ಕಾರಿ ಅಧಿಕಾರಿಗಳು ತಮ್ಮನ್ನು ಹಾಗೂ ತಮ್ಮ ಪತಿಯನ್ನು ಆಧಾರಹಿತ ಬಂಧನಕ್ಕೆ ಒಳಪಡಿಸಲು ಮುಂದಾದರು. ಜೊತೆಗೆ, ಇದೇ ಅಧಿಕಾರಿಗಳು ವ್ಯವಸ್ಥಿತವಾಗಿ ತಮ್ಮ ಪತಿಯ ವ್ಯಾಪಾರ ಮತ್ತು ಮನೆಯನ್ನು ಲೂಟಿ ಮಾಡಿದ್ದರು. ಇವರ ದೌರ್ಜನ್ಯ ಸಹಿಸಲಾಗದೆ ನಾವು ದೇಶವನ್ನೇ ತೊರೆಯಬೇಕಾಯಿತು ಎಂದು ಸಹ ಉಲ್ಲೇಖಿಸಿದ್ದಾರೆ.

ಅಂದ ಹಾಗೆ, 2014ರಲ್ಲಿ ದೆಹಲಿ ಹೈಕೋರ್ಟ್​ ಸಂತ್ರಸ್ತೆಯ ಪತಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ವಜಾಗೊಳಿಸಿತ್ತು. ಜೊತೆಗೆ, ಹೈಕೋರ್ಟ್​ ನೀಡಿದ ತೀರ್ಪಿನಲ್ಲಿ ವೃದ್ಧೆಯ ಪತಿಯಿಂದ ಸರ್ಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಬೆಲೆಬಾಳುವ ಹಾಗೂ ಸ್ಥಿರಾಸ್ತಿಯನ್ನು ಇನ್ನೂ ಹಿಂದಿರುಗಿಸಿಲ್ಲ ಎಂದು ಉಲ್ಲೇಖಿಸಿತು. ಹಾಗಾಗಿ ಸಂತ್ರಸ್ತೆ ಇದೀಗ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಏನಿದು ಪ್ರಕರಣ?
ಸಂತ್ರಸ್ತೆಯ  ಪತಿ ಎಚ್.ಕೆ. ಸಾರಿನ್ ದೆಹಲಿಯ ಕರೋಲ್ ಬಾಗ್ ಮತ್ತು ಕನಾಟ್​ ಪ್ಲೇಸ್​ನಲ್ಲಿ ಪ್ರತಿಷ್ಠಿತ ರತ್ನಾಭರಣದ ವ್ಯಾಪಾರ ಮಳಿಗೆಗಳನ್ನು ಹೊಂದಿದ್ದರು. ಆದರೆ, 1975ರಲ್ಲಿ ತುರ್ತುಪರಿಸ್ಥಿತಿ ವೇಳೆ, ಸಾರಿನ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಅವರ ಮಳಿಗೆಗಳಲ್ಲಿದ್ದ  ಆಭರಣಗಳು ಮತ್ತು ಕಲಾಕೃತಿಗಳನ್ನು ವಶಪಡಿಸಿಕೊಂಡಿದ್ದರು. ಕಸ್ಟಮ್ಸ್​ ಕಾಯ್ದೆಯ ಉಲ್ಲಂಘನೆ ಎಂಬ ನೆಪವೊಡ್ಡಿ ಇವೆಲ್ಲವನ್ನು ಜಪ್ತಿ ಮಾಡಲಾಗಿತ್ತು. ಈ ನಡುವೆ, ಅಧಿಕಾರಿಗಳ ಒತ್ತಡದಿಂದ ಬೇಸತ್ತು ಸಾರಿನ್​ ಸಾವನ್ನಪ್ಪಿದ್ದರು.

ಅನರ್ಹ ಶಾಸಕರಿಗೆ ಸ್ವಲ್ಪ ಸಿಹಿ, ಸ್ಪಲ್ಪ ಕಹಿ: ಸುಪ್ರೀಂಕೋರ್ಟ್​ ಹೇಳಿದ್ದೇನು?

ಅಪರಾಧಿ ರಾಜಕಾರಣಿಗಳಿಗೆ.. ಜೀವನ ಪರ್ಯಂತ ಚುನಾವಣೆ ಸ್ಪರ್ಧೆಗೆ ನಿರ್ಬಂಧ ಬೇಡ -ಸುಪ್ರೀಂಗೆ ಕೇಂದ್ರ ಅಫಿಡವಿಟ್