ಕೇಂದ್ರ ಸಚಿವರ ಜೊತೆ ರೈತರ 5ನೇ ಸುತ್ತಿನ ಮಾತುಕತೆ ಆರಂಭ: ಬಸ್ನಲ್ಲೇ ಸಭೆಗೆ ಆಗಮಿಸಿದ ಕೃಷಿಕರು
ನಗರದ ವಿಜ್ಞಾನ ಭವನದಲ್ಲಿ ರೈತ ನಾಯಕರ ಜೊತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಮತ್ತು ಪಂಜಾಬ್ ಸಂಸದ ಸೋಮ್ ಶೇಖರ್ 5 ನೇ ಸುತ್ತಿನ ಮಾತುಕತೆ ನಡೆಸುತ್ತಿದ್ದಾರೆ.
ದೆಹಲಿ : ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ಪಂಜಾಬ್ ಸಂಸದ ಸೋಮ್ ಶೇಖರ್ ಅವರುಗಳು ರೈತ ನಾಯಕರ ಜೊತೆ ವಿಜ್ಞಾನ ಭವನದಲ್ಲಿ 5 ನೇ ಸುತ್ತಿನ ಮಾತುಕತೆ ನಡೆಸುತ್ತಿದ್ದಾರೆ. ಈ ವೇಳೆ, ಹಿಂದಿನ ಮಾತುಕತೆಯಲ್ಲಿ ಸರ್ಕಾರ ತನ್ನ ಒಪ್ಪಿಗೆ ಸೂಚಿಸಿದ್ದ ವಿಷಯಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ರೈತರು ಬೇಡಿಕೆಯಿಟ್ಟಿದ್ದಾರೆ.
ಸಭೆಗೆ ಆಗಮಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ದೋಭಾ ಕಿಸಾನ್ ಸಂಘರ್ಷ ಸಮಿತಿ ಸರ್ಕಾರ ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದರಷ್ಟೇ ಪ್ರತಿಭಟನೆ ನಿಲ್ಲಿಸುತ್ತೇವೆ ಎಂದು ಸ್ಪಷ್ಟವಾಗಿ ತಿಳಿಸಿದೆ. ಜೊತೆಗೆ, ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದ್ದಿದ್ದರೆ ಸಭೆಯಿಂದ ಹೊರನಡೆಯುವುದಾಗಿ ಹೇಳಿದೆ.
ಬಸ್ನಲ್ಲಿ ಸಭೆಗೆ ಆಗಮಿಸಿದ ರೈತರು ಅಂದ ಹಾಗೆ, ರೈತರು ಸಭೆ ನಡೆಯಲಿದ್ದ ವಿಜ್ಞಾನ ಭವನಕ್ಕೆ ಇಂಡಿಯನ್ ಟೂರಿಸ್ಟ್ ಟ್ರಾನ್ಸ್ಪೋರ್ಟ್ ಅಸೋಸಿಯೇಶನ್ (ITTA) ಆಯೋಜಿಸಿದ್ದ ಬಸ್ಗಳಲ್ಲಿ ಆಗಮಿಸಿದರು. ಬಸ್ಗಳ ಮೇಲೆ ನಾವು ರೈತರನ್ನು ಬೆಂಬಲಿಸುತ್ತೇವೆ ಎಂಬ ಬ್ಯಾನರ್ಗಳನ್ನು ಅಳವಡಿಸಲಾಗಿತ್ತು. ನಾನು ರೈತ ಕುಟುಂಬದಿಂದ ಬಂದವನು. ರೈತರ ಸಮಸ್ಯೆಗಳ ಸಂಪೂರ್ಣ ಅರಿವು ನನಗಿದೆ. ಹಾಗಾಗಿ, ಕೇಂದ್ರ ಸರ್ಕಾರದ ಜೊತೆ ರೈತರು ನಡೆಸುತ್ತಿರುವ ಎಲ್ಲಾ ಸುತ್ತಿನ ಮಾತುಕತೆಗೂ ಸ್ವತಃ ನಾವೇ ವಾಹನ ವ್ಯವಸ್ಥೆ ಮಾಡಿದ್ದೇವೆ ಎಂದು ITTA ಅಧ್ಯಕ್ಷ ಸತೀಶ್ ಸೆಹ್ರಾವತ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸರ್ಕಾರ ತನ್ನ ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ರೈತರು ಆಗ್ರಹಿಸಿದ್ದಾರೆ. ಹೀಗಾಗಿ, ಡಿಸೆಂಬರ್ 8ಕ್ಕೆ ಭಾರತ್ ಬಂದ್ಗೆ ಕರೆ ಕೊಟ್ಟಿದ್ದಾರೆ. ಈ ಬಂದ್ಗೆ ದೇಶದ ಹಲವು ಸಂಘಟನೆಗಳು ತಮ್ಮ ಬೆಂಬಲ ವ್ಯಕ್ತಪಡಿಸುತ್ತಿವೆ.
Delhi Chaloಗೆ ಸಿಗುತ್ತಿದೆ ರಾಷ್ಟ್ರವ್ಯಾಪಿ ಬೆಂಬಲ: ಪಂಜಾಬ್ ಕೃಷಿಕರಿಗೆ ದೊರೆಯಲಿದೆ ಕರುನಾಡ ರೈತರ ಬಲ
Published On - 4:29 pm, Sat, 5 December 20