ಸೌರ ಶಕ್ತಿಯ ಕುಕ್ಕರ್ ಮಹಿಳೆಯರ ಮೇಲಾಗುವ ಅತ್ಯಾಚಾರವನ್ನು ತಡೆದಿದೆ: ಪದ್ಮಶ್ರೀ ಪುರಸ್ಕೃತೆ ಪಾಲ್ಟಾ

ಸೌರ ಕುಕ್ಕರ್​ಗಳ ಬಳಕೆಯನ್ನು ಪ್ರಾರಂಭಿಸಿದ ಪಾಲ್ಟಾ, ಮರಗಳನ್ನು ಉಳಿಸಿದ ಜೊತೆಗೆ ಮಹಿಳೆಯರ ಮೇಲಾಗುವ ಹಲ್ಲೆಗಳಿಂದ ರಕ್ಷಿಸಿದ್ದಾರೆಂದು ಚರ್ಚೆಯ ನಡುವೆ ಮಹಿಳೆಯರು ಅಭಿಪ್ರಾಯಪಟ್ಟರು.

ಸೌರ ಶಕ್ತಿಯ ಕುಕ್ಕರ್ ಮಹಿಳೆಯರ ಮೇಲಾಗುವ ಅತ್ಯಾಚಾರವನ್ನು ತಡೆದಿದೆ: ಪದ್ಮಶ್ರೀ ಪುರಸ್ಕೃತೆ ಪಾಲ್ಟಾ
ಜನಕ್ ಪಾಲ್ಟಾ
Follow us
sandhya thejappa
|

Updated on:Dec 05, 2020 | 3:06 PM

ಮಹಿಳೆಯರ ಮೇಲಾಗುವ ಅತ್ಯಾಚಾರ, ಶೋಷಣೆ ಹಾಗೂ ಹಿಂಸಾಚಾರದಿಂದ ಸೌರ ಶಕ್ತಿ ಕುಕ್ಕರ್ ರಕ್ಷಿಸಿದೆ ಎಂದು ಪದ್ಮಶ್ರೀ ಪುರಸ್ಕೃತೆ ಜನಕ್ ಪಾಲ್ಟಾ ಹೇಳಿದ್ದಾರೆ. ಆನ್​ಲೈನ್​ನಲ್ಲಿ ನಡೆದ 2020ರ ವಿಶ್ವಸಂಸ್ಥೆಯ ಹವಾಮಾನ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸೌರ ಶಕ್ತಿ ಕುಕ್ಕರ್​ಗಳ ಸಕಾರಾತ್ಮಕ ಪರಿಣಾಮದ ಬಗ್ಗೆ ಮಹಿಳೆಯರೊಂದಿಗೆ ಚರ್ಚೆ ನಡೆಸುತ್ತಾ ಮಾತನಾಡಿದ ಅವರು , ಮೊದಲು ಗ್ರಾಮೀಣ ಭಾಗದ ಮಹಿಳೆಯರು ಅಡುಗೆಗಾಗಿ ಕಟ್ಟಿಗೆಗಳನ್ನು ಸಂಗ್ರಹಿಸುತ್ತಿದ್ದರು. ಒಣ ಕಟ್ಟಿಗೆಗಳನ್ನು ಹುಡುಕಲು ಕಾಡಿನಲ್ಲಿ ಇಡೀ ಹಗಲು ರಾತ್ರಿ ಕಳೆಯುತ್ತಿದ್ದರು. ಆ ವೇಳೆ ಅನೇಕ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಹಲ್ಲೆಗಳು ನಡೆಯುತ್ತಿತ್ತು. ಭಾರವಾದ ಮರವನ್ನು ತಲೆಯ ಮೇಲೆ ಹೊತ್ತು ತಂದಾಗ ಅದೆಷ್ಟೋ ಹೆಣ್ಣು ಮಕ್ಕಳ ಗರ್ಭಪಾತವಾಗಿರುವ ಸಂಗತಿಗಳೂ ಇವೆ ಎಂದು ಅವರು ಚಿತ್ರಿಸಿದರು.

 ಮರಗಳನ್ನು ಉಳಿಸುವುದರ ಜೊತೆಗೆ ಮಹಿಳೆಯರ ಮಾನವನ್ನು ರಕ್ಷಿಸಿದೆ ಸೌರಶಕ್ತಿ ಕುಕ್ಕರ್​ಗಳ ಬಳಕೆ ಬಗ್ಗೆ ಚರ್ಚೆಯಲ್ಲಿ ಮಾತು ಪ್ರಾರಂಭಿಸಿದ ಪಾಲ್ಟಾ, ಮರಗಳನ್ನು ಉಳಿಸುವುದರ ಜೊತೆಗೆ ಮಹಿಳೆಯರ ಮೇಲಾಗುವ ಹಲ್ಲೆಗಳಿಂದ ಅವರನ್ನು ರಕ್ಷಿಸಿದ್ದಾರೆಂದು ಚರ್ಚೆಯಲ್ಲಿ ಅಭಿಪ್ರಾಯಪಟ್ಟರು.

ಜಿಮ್ಮಿ ಮೆಕ್​ಗಿಲ್ಲಿಗನ್ ಸೆಂಟರ್ ಫಾರ್ ಸಸ್ಟೈನಬಲ್ ಡೆವೆಲಪ್​ಮೆಂಟ್​ನಲ್ಲಿ 86,000 ಕ್ಕೂ ಹೆಚ್ಚು ಸೌರ ಕುಕ್ಕರ್​ಗಳು ಮತ್ತು ಸೌರ ಅಡುಗೆಗೆ ಸಂಬಂಧಿಸಿದ ತರಬೇತಿಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ತಿಳಿಸಿದರು.

ಸೌರ ಶಕ್ತಿ ಬಳಕೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ತನ್ನ ಪ್ರಯಾಣದ ಬಗ್ಗೆ ಹಂಚಿಕೊಂಡ ಪಾಲ್ಟಾ, ಮಧ್ಯ ಭಾರತದ ಗ್ರಾಮೀಣ ಸಮುದಾಯಗಳೊಂದಿಗೆ ನನ್ನ ಜೀವನ 35 ವರ್ಷಗಳ ಹಿಂದೆಯೇ ಪ್ರಾರಂಭವಾಗಿ ಗ್ರಾಮೀಣ ಮತ್ತು ಬುಡಕಟ್ಟು ಮಹಿಳೆಯರಿಗೆ ತರಬೇತಿ ನೀಡುತ್ತಿದ್ದೆ ಎಂದರು.

ಐಟಿ ಉಪಕರಣಗಳ ಶಬ್ದ ಬಾಧಿಸುತ್ತಿದೆಯಾ? ಅದರ ತಡೆಗೆ ಇಲ್ಲಿದೆ ಸರಳ ಮಾರ್ಗ! Acoustic Rack Cabinet

Published On - 2:59 pm, Sat, 5 December 20

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್