9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಯೋಗಾಭ್ಯಾಸಕ್ಕೆ ಸಜ್ಜಾಗೋಣ ಎಂದ ಪ್ರಧಾನಿ ಮೋದಿ

|

Updated on: May 31, 2023 | 10:03 PM

9th International Yoga Day: 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಇನ್ನು ಮೂರು ವಾರಗಳಷ್ಟೇ ಬಾಕಿ ಇವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಯೋಗಾಭ್ಯಾಸಕ್ಕೆ ಸಜ್ಜಾಗೋಣ ಎಂದ ಪ್ರಧಾನಿ ಮೋದಿ
9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್
Follow us on

9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ (9th International Yoga Day) ಇನ್ನು ಮೂರು ವಾರಗಳಷ್ಟೇ ಬಾಕಿ ಇವೆ. ಭಾರತ ಮಾತ್ರವಲ್ಲದೆ ವಿಶ್ವದ ಅನೇಕ ದೇಶಗಳು ಕೂಡ ಯೋಗ ಆಚರಣೆಗೆ ಕಾಯುತ್ತಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಪ್ರಾಚೀನ ಅಭ್ಯಾಸಕ್ಕೆ ಸಜ್ಜುಗೊಳಿಸೋಣ ಎಂದು ಹೇಳೀದ್ದಾರೆ. ಆಯುಷ್ ಇಲಾಖೆ ಕೂಡ ಯೋದ ದಿನದ ಬಗ್ಗೆ ಟ್ವೀಟ್ ಮಾಡಿದೆ.

“ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಇನ್ನು ಕೇವಲ ಮೂರು ವಾರಗಳು ಮಾತ್ರ ಉಳಿದಿವೆ. ನಮ್ಮ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಹೆಚ್ಚಿಸುವ ಈ ಪ್ರಾಚೀನ ಅಭ್ಯಾಸಕ್ಕೆ ಸಜ್ಜುಗೊಳಿಸೋಣ ಮತ್ತು ಆಚರಿಸೋಣ. ನಾವು ಆರೋಗ್ಯಕರ ಮತ್ತು ಸಂತೋಷದ ಸಮಾಜವನ್ನು ರಚಿಸೋಣ” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Maha Jansampark: ಇಂದಿನಿಂದ 1 ತಿಂಗಳ ಕಾಲ ಬಿಜೆಪಿಯಿಂದ ‘ಮಹಾ ಜನಸಂಪರ್ಕ’ ಅಭಿಯಾನ, ರಾಜಸ್ಥಾನದಲ್ಲಿ ಪ್ರಧಾನಿ ಮೋದಿ ಚಾಲನೆ

ಯೋಗ ದಿನದ ಬಗ್ಗೆ ಆಯುಷ್ ಇಲಾಖೆ ಕೂಡ ಟ್ವೀಟ್ ಮಾಡಿದ್ದು, “ದೊಡ್ಡ ಆಚರಣೆಗೆ 21 ದಿನಗಳು ಬಾಕಿ ಇವೆ. ಬನ್ನಿ ನಮ್ಮೊಂದಿಗೆ ಸೇರಿಕೊಳ್ಳಿ ಮತ್ತು 9 ನೇ ಯೋಗದಿನಾಚರಣೆ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಮ್ಮೊಂದಿಗೆ ಸಂಪರ್ಕದಲ್ಲಿರಿ” ಎಂದು ಹೇಳಿದೆ.

ಯೋಗ (Yoga) ದ ಮಹತ್ವವನ್ನು ತಿಳಿಸಲು ಮತ್ತು ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿವರ್ಷ ಥೀಮ್ ಒಂದನ್ನು ಇಟ್ಟು ಯೋಗ ದಿನವನ್ನು ಆಚರಿಸಲು ಆಚರಿಸಲಾಗುತ್ತದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:31 pm, Wed, 31 May 23