GDP Growth: ಜಿಡಿಪಿ ಬೆಳವಣಿಗೆ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ; ಜಾಗತಿಕ ಸವಾಲುಗಳ ನಡುವೆ ಭಾರತದ ಆರ್ಥಿಕತೆ ಸ್ಥಿರ
ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕ ಅವಧಿಯ ಜಿಡಿಪಿ ದತ್ತಾಂಶ ಬಿಡುಗಡೆ ಆಗಿದ್ದು, ಈ ಸಮಯದಲ್ಲಿ ಶೇ. 6.1ರಷ್ಟು ಬೆಳವಣಿಗೆ ಸಾಧಿಸಿರುವುದು ತಿಳಿದುಬಂದಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, 2022-23 ಜಿಡಿಪಿ ಬೆಳವಣಿಗೆಯ ಅಂಕಿಅಂಶಗಳು ದೇಶದ ಆರ್ಥಿಕತೆಯ ಸ್ಥಿರತೆಯನ್ನು ತೋರಿಸುತ್ತದೆ ಎಂದು ಬಣ್ಣಿಸಿದ್ದಾರೆ.
ನವದೆಹಲಿ: ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕ ಅವಧಿಯ ಜಿಡಿಪಿ ದತ್ತಾಂಶ (GDP Data) ಬಿಡುಗಡೆ ಆಗಿದ್ದು, ಈ ಸಮಯದಲ್ಲಿ ಶೇ. 6.1ರಷ್ಟು ಬೆಳವಣಿಗೆ ಸಾಧಿಸಿರುವುದು ತಿಳಿದುಬಂದಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, 2022-23 ಜಿಡಿಪಿ ಬೆಳವಣಿಗೆಯ ಅಂಕಿಅಂಶಗಳು ದೇಶದ ಆರ್ಥಿಕತೆಯ ಸ್ಥಿರತೆಯನ್ನು ತೋರಿಸುತ್ತದೆ ಎಂದು ಬಣ್ಣಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 2022-23 ಜಿಡಿಪಿ ಬೆಳವಣಿಗೆಯ ಅಂಕಿಅಂಶಗಳು ಜಾಗತಿಕ ಸವಾಲುಗಳ ನಡುವೆ ಭಾರತೀಯ ಆರ್ಥಿಕತೆಯ ಸ್ಥಿತಿಸ್ಥಾಪಕತ್ವವನ್ನು ಒತ್ತಿ ಹೇಳಿದೆ. ಒಟ್ಟಾರೆ ಆಶಾವಾದ, ಬಲವಾದ ಸ್ಥೂಲ-ಆರ್ಥಿಕ ಸೂಚಕಗಳ ಜೊತೆಗೆ ಈ ದೃಢವಾದ ಕಾರ್ಯಕ್ಷಮತೆಯು ನಮ್ಮ ಆರ್ಥಿಕತೆಯ ಭರವಸೆಯ ಪಥಕ್ಕೆ ಮತ್ತು ನಮ್ಮ ಜನರ ಸ್ಥಿರತೆಗೆ ಉದಾಹರಣೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಮೇ 31ರಂದು ಜಿಡಿಪಿ ದತ್ತಾಂಶದ ವರದಿ ಬಿಡುಗಡೆ ಮಾಡಿದೆ. ಇದರ ಪ್ರಕಾರ, 2023ರ ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ 43.62 ಲಕ್ಷ ಕೋಟಿ ಆಗಿದೆ. ಹಿಂದಿನ ವರ್ಷದ ಈ ಅವಧಿಗೆ ಹೋಲಿಸಿದರೆ ಶೇ. 6.1ರಷ್ಟು ಹೆಚ್ಚಾಗಿದೆ. 2022-23ರ ಹಣಕಾಸು ವರ್ಷದಲ್ಲಿ ಜಿಡಿಪಿ ವೃದ್ಧಿ ಶೇ. 7.2ರಷ್ಟಿದೆ.
The 2022-23 GDP growth figures underscore the resilience of the Indian economy amidst global challenges. This robust performance along with overall optimism and compelling macro-economic indicators, exemplify the promising trajectory of our economy and the tenacity of our people.
— Narendra Modi (@narendramodi) May 31, 2023
ಈ ಮಧ್ಯೆ, ನಗರ ಪ್ರದೇಶಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಒತ್ತು ನೀಡುವ ‘ಸಿಟಿ ಇನ್ವೆಸ್ಟ್‌ಮೆಂಟ್ಸ್ ಟು ಇನ್ನೋವೇಟ್, ಇಂಟಿಗ್ರೇಟ್ ಅಂಡ್ ಸಸ್ಟೇನ್ (ಸಿಐಟಿಐಐಎಸ್) 2.0’ ಎಂಬ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಕುರಿತು ಮೋದಿ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: GDP Data: ಇಗೋ ನೋಡಿ ಭಾರತದ ಆರ್ಥಿಕ ಬೆಳವಣಿಗೆ; ಕೊನೆಯ ಕ್ವಾರ್ಟರ್ನಲ್ಲಿ ಶೇ 6.1, ಇಡೀ ವರ್ಷದಲ್ಲಿ ಶೇ. 7.2 ಜಿಡಿಪಿ ವೃದ್ಧಿ
ಸಿಐಟಿಐಐಎಸ್ 2.0 ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದರಿಂದ ನಮ್ಮ ನಗರಗಳಾದ್ಯಂತ ಆರ್ಥಿಕತೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವ ಹೆಚ್ಚಾಗಲಿದೆ ಎಂದು ಮೋದಿ ಅವರು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
The Union Cabinet’s approval for the innovative CITIIS 2.0 programme will foster a circular economy and enhance climate resilience across our cities. This step aligns with India’s commitments towards a better and more sustainable planet. https://t.co/klbfqG2Jev
— Narendra Modi (@narendramodi) May 31, 2023
ಪ್ರಸಕ್ತ ಹಣಕಾಸು ವರ್ಷದಿಂದ ನಾಲ್ಕು ವರ್ಷಗಳ ವರೆಗೆ ಈ ಯೋಜನೆ ಜಾರಿಯಲ್ಲಿರಲಿದ್ದು, ಫ್ರೆಂಚ್ ಅಭಿವೃದ್ಧಿ ಸಂಸ್ಥೆ (ಎಎಫ್‌ಡಿ), ಕೆಎಫ್‌ಡಬ್ಲ್ಯು, ಐರೋಪ್ಯ ಒಕ್ಕೂಟ ಹಾಗೂ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ (ಎನ್‌ಐಯುಎ) ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ