Wrestlers Protest: ನಿಮಗೆ ಹಾನಿಯಾಗುವ ಕ್ರಮಗಳನ್ನು ತೆಗೆದುಕೊಳ್ಳಬೇಡಿ: ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್
ಮೋದಿ ಸರ್ಕಾರದ ಅಡಿಯಲ್ಲಿ ಕ್ರೀಡಾ ಬಜೆಟ್ ಅನ್ನು ₹ 874 ಕೋಟಿಯಿಂದ ₹ 2782 ಕೋಟಿಗೆ ಹೆಚ್ಚಿಸಲಾಗಿದೆ. ಖೇಲೋ ಇಂಡಿಯಾ ಮತ್ತು ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಮ್ (TOPS) ನಂತಹ ಯೋಜನೆಗಳನ್ನು ಪರಿಚಯಿಸಿ ಅದನ್ನು ತಲುಪುವ ಅವಕಾಶವನ್ನು ಒದಗಿಸಲಾಯಿತು. ಕ್ರೀಡಾಪಟುಗಳಿಗೆ ತರಬೇತಿ ನೀಡಲು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಲಾಗಿದೆ
ದೆಹಲಿ ಪೊಲೀಸರು ತನಿಖೆಯನ್ನು ಮುಗಿಸುವವರೆಗೆ ಕುಸ್ತಿಪಟುಗಳು (Wrestlers Protest)ಕಾಯಬೇಕು. ಅದೇ ವೇಳೆ ಅವರಿಗೇ ಹಾನಿಯುಂಟು ಮಾಡುವ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್(Anurag Thakur) ಬುಧವಾರ ಹೇಳಿದ್ದಾರೆ. ಕುಸ್ತಿಪಟುಗಳು ದೆಹಲಿ ಪೊಲೀಸರು (Delhi Police) ತಮ್ಮ ತನಿಖೆಯನ್ನು ಮುಗಿಸುವವರೆಗೆ ಕಾಯಬೇಕು. ಕ್ರೀಡೆ ಅಥವಾ ಮಹತ್ವಾಕಾಂಕ್ಷಿ ಕುಸ್ತಿಪಟುಗಳಿಗೆ ಹಾನಿಯನ್ನುಂಟುಮಾಡುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು. ನಾವೆಲ್ಲರೂ ಕ್ರೀಡೆ ಮತ್ತು ಕ್ರೀಡಾಪಟುಗಳ ಪರವಾಗಿದ್ದೇವೆ ಎಂದು ಸಚಿವರು ಹೇಳಿದ್ದಾರೆ.
ಮೋದಿ ಸರ್ಕಾರದ ಅಡಿಯಲ್ಲಿ ಕ್ರೀಡಾ ಬಜೆಟ್ ಅನ್ನು ₹ 874 ಕೋಟಿಯಿಂದ ₹ 2782 ಕೋಟಿಗೆ ಹೆಚ್ಚಿಸಲಾಗಿದೆ. ಖೇಲೋ ಇಂಡಿಯಾ ಮತ್ತು ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಮ್ (TOPS) ನಂತಹ ಯೋಜನೆಗಳನ್ನು ಪರಿಚಯಿಸಿ ಅದನ್ನು ತಲುಪುವ ಅವಕಾಶವನ್ನು ಒದಗಿಸಲಾಯಿತು. ಕ್ರೀಡಾಪಟುಗಳಿಗೆ ತರಬೇತಿ ನೀಡಲು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಲಾಗಿದೆ. ರಾಷ್ಟ್ರದಲ್ಲಿ ಸುಮಾರು ₹ 2700 ಕೋಟಿ ವೆಚ್ಚದಲ್ಲಿ 300 ಮಹತ್ವದ ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ಠಾಕೂರ್ ಹೇಳಿದ್ದಾರೆ.
ನಾವು ಕ್ರೀಡಾಪಟುಗಳ ನಿರೀಕ್ಷೆಗಿಂತ ಹೆಚ್ಚಿನದನ್ನು ಮಾಡಲು ಪ್ರಯತ್ನಿಸಿದ್ದೇವೆ, ನಾವು ಹೆಚ್ಚಿನದನ್ನು ಮಾಡಲು ಬಯಸುತ್ತೇವೆ. ಪ್ರತಿಯೊಂದು ಕ್ರೀಡೆಯಲ್ಲೂ ಭಾರತ ಬಲಿಷ್ಠವಾಗಲಿ ಎಂದು ಹಾರೈಸುತ್ತೇವೆ. ಕುಸ್ತಿಪಟುಗಳ ಬೇಡಿಕೆಗಳ ಮೇಲೆ, ಅವರು ತಮಗೆ ಅನ್ಯಾಯವಾಗಿದೆ ಎಂದು ಹೇಳಿಕೊಂಡ ನಂತರ ನಾವು ಸಮಿತಿಯನ್ನು ರಚಿಸಿದ್ದೇವೆ.ಅವರು ಕೆಲವೊಂದನ್ನು ಸೇರಿಸಲು ಹೇಳಿದರು, ನಾವು ಸೇರಿಸಿದ್ದೇವೆ. ಸಮಿತಿಯು ತಮ್ಮ ವರದಿಯನ್ನು ಸಲ್ಲಿಸಿತು, ನಂತರ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದರು. ಅವರು ಒತ್ತಾಯಿಸಿದ್ದಕ್ಕೆಲ್ಲ ನಾವು ಒಪ್ಪಿದ್ದೇವೆ .
#WATCH | The wrestlers should wait for Delhi Police to conclude their investigation and not take any steps that may cause harm to the sport or aspiring wrestlers. We all are in favour of the sport and sportspersons: Union Youth Affairs & Sports Minister Anurag Thakur on… pic.twitter.com/gIbSnLeeTR
— ANI (@ANI) May 31, 2023
ನಾವು ಕುಸ್ತಿಪಟುಗಳನ್ನು ಮುಕ್ತ ಹೃದಯ ಮತ್ತು ಮನಸ್ಸಿನಿಂದ ಕೇಳಿದ್ದೇವೆ. ಪೊಲೀಸರು ಈ ವಿಷಯವನ್ನು ತನಿಖೆ ಮಾಡುತ್ತಿದ್ದಾರೆ. ನೀವು ಕಳೆದ 75 ವರ್ಷಗಳ ದಾಖಲೆಗಳನ್ನು ನೋಡಬಹುದು, ಆರೋಪಗಳಿದ್ದರೆ, ಅವುಗಳನ್ನು ತನಿಖೆ ಮಾಡಲಾಗಿದೆ. ತನಿಖೆಯ ಫಲಿತಾಂಶದಿಂದ ಕುಸ್ತಿಪಟುಗಳು ತೃಪ್ತರಾಗದಿದ್ದರೆ ಪ್ರತಿಭಟಿಸಬಹುದು. ನೀವು ಸುಪ್ರೀಂ ಕೋರ್ಟ್, ಕುಸ್ತಿ ಸಂಘ, ಪೊಲೀಸರನ್ನು ನಂಬಬೇಕು. ನಾವು ಈ ವಿಷಯದ ಬಗ್ಗೆ ನ್ಯಾಯಯುತ ತನಿಖೆಯನ್ನು ಬಯಸುತ್ತೇವೆ ಎಂದು ಠಾಕೂರ್ ಹೇಳಿದರು.
ಶೀಘ್ರದಲ್ಲೇ ಡಬ್ಲ್ಯುಎಫ್‌ಐ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಬ್ರಿಜ್ ಭೂಷಣ್ ಅವರು ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದಿದ್ದಾರೆ. ಎಲ್ಲವೂ ನಡೆಯುತ್ತಿದೆ ಆದರೆ ದೇಶದ ಕಾನೂನು ಮತ್ತು ನಿಯಮಗಳ ಪ್ರಕಾರ ತನಿಖೆ ನಡೆಯುತ್ತದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ