ಮುಂಬೈಯ ಕಟ್ಟಡವೊಂದರ 13ನೇ ಮಹಡಿಯಲ್ಲಿತ್ತು 4 ಅಡಿ ಉದ್ದದ ಹೆಬ್ಬಾವು: ಹೇಗೆ ಬಂತು? ನಿವಾಸಿಗಳಿಗೆ ಅಚ್ಚರಿ

|

Updated on: Jul 27, 2023 | 7:04 PM

ಮುಂಬೈನ ಘಾಟ್‌ಕೋಪರ್‌ನಲ್ಲಿ 13 ಮಹಡಿಗಳ ಕಟ್ಟಡದ ಟೆರೇಸ್‌ಗೆ 4 ಅಡಿ ಉದ್ದದ ಹೆಬ್ಬಾವು ಬಂದಿದ್ದು, ಇದೀಗ ಹೆಬ್ಬಾವುವನ್ನು ರಕ್ಷಿಸಲಾಗಿದೆ.

ಮುಂಬೈಯ ಕಟ್ಟಡವೊಂದರ 13ನೇ ಮಹಡಿಯಲ್ಲಿತ್ತು 4 ಅಡಿ ಉದ್ದದ ಹೆಬ್ಬಾವು: ಹೇಗೆ ಬಂತು? ನಿವಾಸಿಗಳಿಗೆ ಅಚ್ಚರಿ
ಸಾಂದರ್ಭಿಕ ಚಿತ್ರ
Follow us on

ಪುಣೆ,ಜು.27: ಮುಂಬೈನ ಘಾಟ್‌ಕೋಪರ್‌ನಲ್ಲಿ 13 ಮಹಡಿಗಳ ಕಟ್ಟಡದ ಟೆರೇಸ್‌ಗೆ 4 ಅಡಿ ಉದ್ದದ ಹೆಬ್ಬಾವು ಬಂದಿದ್ದು, ಇದೀಗ ಹೆಬ್ಬಾವುವನ್ನು ರಕ್ಷಿಸಲಾಗಿದೆ. ವ್ರಾಜ್ ಪ್ಯಾರಡೈಸ್ ರೆಸಿಡೆಂಟ್​ನಲ್ಲಿರುವ ನಿವಾಸಿಗಳು ಇಷ್ಟು ಎತ್ತರದಲ್ಲಿ ಹೆಬ್ಬಾವುವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ನಂತರ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಹೆಬ್ಬಾವುವನ್ನು ರಕ್ಷಿಸಿದ್ದಾರೆ.

ಈ ಕಟ್ಟಡದ ಕೆಲವು ನಿರ್ಮಾಣ ಕಾರ್ಯಗಳು ನಡೆಸುತ್ತಿದ್ದು, ಸಿಮೆಂಟ್ ಮಿಶ್ರಿತ ದಪ್ಪ ಪೇಸ್ಟ್‌ನಲ್ಲಿ ಈ ಹೆಬ್ಬಾವು ಸಿಲುಕಿಕೊಂಡಿತ್ತು ಎಂದು ಪ್ರಾಣಿ ರಕ್ಷಣಾ ವೇದಿಕೆಯ ಸದಸ್ಯ ಸೂರಜ್ ಸಹಾ ಟೈಮ್ಸ್​​ ಆಫ್ ಇಂಡಿಯಾ (TOI)ಕ್ಕೆ ತಿಳಿಸಿದ್ದಾರೆ. ಮಂಗಳವಾರ ಘಾಟ್‌ಕೋಪರ್ (ಪಶ್ಚಿಮ) ಎಲ್‌ಬಿಎಸ್ ರಸ್ತೆಯಲ್ಲಿರುವ ವ್ರಾಜ್ ಪ್ಯಾರಡೈಸ್ ಕಟ್ಟಡದ ಟೆರೇಸ್‌ನಲ್ಲಿ ಹೆಬ್ಬಾವು ಕಂಡುಬಂದಿದೆ. ಈ ಟೆರೇಸ್‌ನಲ್ಲಿ ನಿರ್ಮಾಣ ಕಾರ್ಯಗಳು ನಡೆಯುತ್ತಿರುವುದರಿಂದ ಹೆಬ್ಬಾವು ಸಿಮೆಂಟ್ ಮಿಶ್ರಿತ ದಪ್ಪ ಪೇಸ್ಟ್‌ಗೆ ಹೋಗಿ ಅಂಟಿಕೊಂಡಿದೆ. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಲ್ಲಿರುವ ನಿವಾಸಿಗಳು ಈ ಬಗ್ಗೆ ತಿಳಿಸಿದ್ದಾರೆ, ನಂತರ ಅವರು ಬಂದು ಅದನ್ನು ರಕ್ಷಿಸಿದ್ದಾರೆ ಎಂದು ಸೂರಜ್ ಸಹಾ ಹೇಳಿದ್ದಾರೆ.

ಇದನ್ನೂ ಓದಿ: ನಾಯಿ ನುಂಗಿ ನರಳುತ್ತಿದ್ದ 15 ಅಡಿ ಉದ್ದದ ಬೃಹತ್ ಹೆಬ್ಬಾವು ರಕ್ಷಣೆ; ವಿಡಿಯೋ ವೈರಲ್

ಇನ್ನೂ ಈ ಹೆಬ್ಬಾವು ಇಷ್ಟು ಎತ್ತರದ ಕಟ್ಟಡ ಮೇಲೆ ಹೇಗೆ ಬಂತು ಎಂದು ಅಲ್ಲಿನ ನಿವಾಸಿಗಳು ಆಶ್ಚರ್ಯಪಟ್ಟಿದ್ದಾರೆ. ಇನ್ನೂ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು. ಇದು ಲಿಫ್ಟ್​​ನಲ್ಲಿ ಬಂದಿರಬಹುದು ಎಂದು ನೆಟ್ಟಿಗರು ತಮಾಷೆಯಾಗಿ ಹೇಳಿದ್ದಾರೆ. ಮಳೆಗಾಲದಲ್ಲಿ ಹಾವುಗಳ ನೈಸರ್ಗಿಕ ಆವಾಸಸ್ಥಾನಗಳು ನಾಶವಾಗಿರುತ್ತದೆ. ಈ ಸಮಯದಲ್ಲಿ ಎತ್ತರ ಸ್ಥಳಗಳನ್ನು ಅವುಗಳು ಹುಡುಕಿಕೊಂಡು ಬರುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Thu, 27 July 23