ಉತ್ತರ ಪ್ರದೇಶ: ವಿದ್ಯಾರ್ಥಿಗಳ ಮುಂದೆ ಬೆತ್ತಲೆ ಮಲಗಿದ ಶಾಲಾ ಮುಖ್ಯ ಶಿಕ್ಷಕ ವಜಾ
ದುರ್ಗಾ ಪ್ರಸಾದ್ ಜೈಸ್ವಾಲ್ ಎಂಬವರ ವಿರುದ್ಧ ಆರೋಪ ಕೇಳಿ ಬಂದಿದ್ದು ಇವರು ಲಕ್ನೋದಿಂದ ಈಶಾನ್ಯಕ್ಕೆ 125 ಕಿಲೋಮೀಟರ್ ದೂರದಲ್ಲಿರುವ ಬಹ್ರೈಚ್‌ನಲ್ಲಿರುವ ಶಿವಪುರ ಬೈರಾಗಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದಾರೆ.
ಲಕ್ನೋ ಜುಲೈ 27: ಉತ್ತರ ಪ್ರದೇಶದ(Uttar Pradesh) ಬಹ್ರೈಚ್‌ನ ವಿಶೇಶ್ವರ್‌ಗಂಜ್ ಪ್ರದೇಶದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು (headmaster) ಕುಡಿದ ಅಮಲಿನಲ್ಲಿ ವಿದ್ಯಾರ್ಥಿಗಳ ಮುಂದೆ ಬೆತ್ತಲೆಯಾಗಿ ಮಲಗಿದ ಪ್ರಕರಣದಲ್ಲಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಮುಖ್ಯೋಪಾಧ್ಯಾಯ ದುರ್ಗಾ ಪ್ರಸಾದ್ ಜೈಸ್ವಾಲ್ ಎಂದು ಗುರುತಿಸಲಾಗಿದ್ದು, ಇವರು ಅಶ್ಲೀಲ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ.
ವೈರಲ್ ಆಗಿರುವ ವಿಡಿಯೋದ ಸತ್ಯಾಸತ್ಯತೆ ಇನ್ನಷ್ಟೇ ತಿಳಿದು ಬರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೈಸ್ವಾಲ್ ಅವರು ಲಕ್ನೋದಿಂದ ಈಶಾನ್ಯಕ್ಕೆ 125 ಕಿಲೋಮೀಟರ್ ದೂರದಲ್ಲಿರುವ ಬಹ್ರೈಚ್‌ನಲ್ಲಿರುವ ಶಿವಪುರ ಬೈರಾಗಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದಾರೆ.
ಜೈಸ್ವಾಲ್ ಈ ರೀತಿ ಮಾಡಿದ್ದು ಇದೇ ಮೊದಲಲ್ಲ ಎಂದು ಪೋಷಕರು ಹೇಳಿದ್ದಾರೆ. ಅವರು ಆಗಾಗ್ಗೆ ವಿದ್ಯಾರ್ಥಿಗಳ ಮುಂದೆ ಅಶ್ಲೀಲ ಕೃತ್ಯಗಳಲ್ಲಿ ತೊಡಗಿದ್ದರು. ತರಗತಿಯಲ್ಲಿ ಅವರು ವಿವಸ್ತ್ರರಾಗುತ್ತಿದ್ದರು ಎಂದ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
‘ಮೊದಲ ಬಾರಿ ಅಲ್ಲ’
ಜೈಸ್ವಾಲ್ ಅವರ ವರ್ತನೆಯಿಂದ ವಿದ್ಯಾರ್ಥಿನಿಯರು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ ಎಂದು ಕೆಲವು ಪೋಷಕರು ಹೇಳಿದ್ದಾರೆ. ವಿಷಯ ಬೆಳಕಿಗೆ ಬರುತ್ತಿದ್ದಂತೆ, ಶಿಕ್ಷಣಾ ಅಧಿಕಾರಿ (ಬಿಎಸ್‌ಎ) ತನಿಖೆಗೆ ಆದೇಶಿಸಿದ್ದು, ನಂತರ ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. “ದುರ್ಗಾ ಪ್ರಸಾದ್ ಜೈಸ್ವಾಲ್ ವಿರುದ್ಧ ನಮಗೆ ದೂರು ಸಿಕ್ಕಿದೆ. ಬ್ಲಾಕ್ ಶಿಕ್ಷಣ ಅಧಿಕಾರಿ ನಡೆಸಿದ ಪ್ರಾಥಮಿಕ ವಿಚಾರಣೆಯ ಆಧಾರದ ಮೇಲೆ ಜುಲೈ 24 ರಂದು ಅವರನ್ನು ಅಮಾನತುಗೊಳಿಸಲಾಗಿದೆ” ಎಂದು ಬಿಎಸ್ಎ ಅವ್ಯಕ್ತ್ ರಾಮ್ ತಿವಾರಿ ಹೇಳಿದ್ದಾರೆ.
ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ. ಅಗತ್ಯ ಬಿದ್ದರೆ ಮುಖ್ಯೋಪಾಧ್ಯಾಯರ ವಿರುದ್ಧವೂ ಪ್ರಥಮ ಮಾಹಿತಿ ವರದಿ ದಾಖಲಿಸಲಾಗುವುದು ಎಂದು ಬಿಎಸ್‌ಎ ತಿಳಿಸಿದೆ.
ಘಟನೆಯಲ್ಲಿ ಸದ್ಯಕ್ಕೆ ಯಾವುದೇ ಬಂಧನವಾಗಿಲ್ಲ, ಎಫ್‌ಐಆರ್ ದಾಖಲಾದ ನಂತರವಷ್ಟೇ ಮುಂದಿನ ಕೆಲಸ ನಡೆಯುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಲಾಖಾ ತನಿಖೆಯ ತೀರ್ಮಾನಗಳ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:07 pm, Thu, 27 July 23