Sindhu Sadhana Vessel: ಸಮುದ್ರ ಅಧ್ಯಯನಕ್ಕೆ ತೆರಳಿದ್ದ ಸಿಂಧು ಸಾಧನ ನೌಕೆ ಇಂಜಿನ್ ವೈಫಲ್ಯ; 36 ಜನರ ರಕ್ಷಣೆ

ನ್ಯಾಷನಲ್ ಓಷಿಯಾನೋಗ್ರಾಫಿಕ್ ಇನ್ಸ್​ಸ್ಟಿಟ್ಯೂಟ್​ನ​ ಸಿಂಧು ಸಾಧನ ನೌಕೆ ಗೋವಾದಿಂದ ಅರಬ್ಬಿ ಸಮುದ್ರದ ಅಧ್ಯಯನಕ್ಕೆ ತೆರಳಿತ್ತು. ಈ ನೌಕೆ ಪಣಜಿಯಿಂದ ಕಾರವಾರಕ್ಕೆ ಆಗಮಿಸುತ್ತಿದ್ದಾಗ ಇಂಜಿನ್ ವೈಫಲ್ಯ ಕಂಡಿದ್ದು, ನೌಕೆಯಲ್ಲಿದ್ದ 36 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

Sindhu Sadhana Vessel: ಸಮುದ್ರ ಅಧ್ಯಯನಕ್ಕೆ ತೆರಳಿದ್ದ ಸಿಂಧು ಸಾಧನ ನೌಕೆ ಇಂಜಿನ್ ವೈಫಲ್ಯ; 36 ಜನರ ರಕ್ಷಣೆ
ಸಮುದ್ರ ಅಧ್ಯಯನಕ್ಕೆ ತೆರಳಿದ್ದ ಸಿಂಧು ಸಾಧನ ನೌಕೆ ಇಂಜಿನ್ ವೈಫಲ್ಯImage Credit source: ANI
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: Rakesh Nayak Manchi

Updated on:Jul 27, 2023 | 10:39 PM

ಕಾರವಾರ, ಜುಲೈ 27: ಪಣಜಿಯಿಂದ ಕಾರವಾರಕ್ಕೆ ಬರುತ್ತಿದ್ದ ಸಮುದ್ರ ಅಧ್ಯಯನಕ್ಕೆ ತೆರಳಿದ್ದ ಸಿಂಧು ಸಾಧನ ನೌಕೆ (Sindhu Sadhana Vessel) ಇಂಜಿನ್ ವೈಫಲ್ಯಗೊಂಡ ಘಟನೆ ನಡೆದಿದೆ. ಕೂಡಲೇ ಎಚ್ಚೆತ್ತ ಭಾರತೀಯ ಕೋಸ್ಟ್ ಗಾರ್ಡ್​ (Indian Coast Guard) ಸಿಬ್ಬಂದಿ ನೌಕೆಯಲ್ಲಿದ್ದ ಎಂಟು ವಿಜ್ಞಾನಿಗಳು ಸೇರಿದಂತೆ 36 ಮಂದಿಯನ್ನು ರಕ್ಷಣೆ ಮಾಡಿದ್ದು, ಮುಳುಗುತ್ತಿದ್ದ ನೌಕೆಯನ್ನು ಸಿಐಆರ್, ಎನ್​ಐಒ ಹಡಗುಗಳ ಮೂಲಕ ಗೋವಾದ ವಾಸ್ಕೋ ಬಂದರಿಗೆ ಕೊಂಡೊಯ್ದಿದ್ದಾರೆ.

ನ್ಯಾಷನಲ್ ಓಷಿಯಾನೋಗ್ರಾಫಿಕ್ ಇನ್ಸ್​ಸ್ಟಿಟ್ಯೂಟ್​ನ ಸಿಂಧು ಸಾಧನ ನೌಕೆಯು ಅರಬ್ಬಿ ಸಮುದ್ರದಲ್ಲಿ ಸಂಶೋಧನೆಗಾಗಿ ಗೋವಾದಿಂದ ಹೊರಟಿತ್ತು. ಅದರಂತೆ ಪಣಜಿಯಿಂದ ಕಾರವಾರಕ್ಕೆ ಆಗಮಿಸುವಾಗ ನೌಕೆಯ ಇಂಜಿನ್ ವೈಫಲ್ಯಗೊಂಡಿದೆ. ಭೂ ಭಾಗದಿಂದ ಸುಮಾರು 20 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದಾಗ ನೌಕೆಯ ಇಂಜಿನ್ ವಿಫಲವಾಗಿದೆ.

ಇದನ್ನೂ ಓದಿ: Uttara Kannada:ಅಬ್ಬರದ ಮಳೆಗೆ ಸಂಪರ್ಕ ಕಡಿತ, ಹೃದಯಾಘಾತವಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸಪಟ್ಟ ಕುಟುಂಬಸ್ಥರು

“ಜುಲೈ 26 ರ ಬುಧವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಕೋಸ್ಟ್ ಗಾರ್ಡ್ ಜಿಲ್ಲಾ ಕೇಂದ್ರ ಗೋವಾದಲ್ಲಿ ನೌಕೆಯ ಇಂಜಿನ್ ವೈಫಲ್ಯದ ಸಂದೇಶವನ್ನು ಸ್ವೀಕರಿಸಿದಾಗ ನೌಕೆಯು ಭೂಮಿಯಿಂದ ಸರಿಸುಮಾರು 20 ನಾಟಿಕಲ್ ಮೈಲುಗಳಷ್ಟು ದೂರದಲ್ಲಿತ್ತು” ಎಂದು ಕೋಸ್ಟ್ ಗಾರ್ಡ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಸಂದೇಶ ಲಭ್ಯವಾಗುತ್ತಿದ್ದಂತೆ ಎಚ್ಚೆತ್ತ ಕೋಸ್ಟ್ ಗಾರ್ಡ್ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ನೌಕೆಯಲ್ಲಿದ್ದವರನ್ನು ರಕ್ಷಿಸಿ, ಮುಳುಗುತ್ತಿದ್ದ ಹಡಗನ್ನು ಮತ್ತೊಂದು ಹಡಗಿನ ಸಹಾಯದಿಂದ ವಾಸ್ಕೋ ಬಂದರಿಗೆ ಕೊಂಡೊಯ್ದಿದ್ದಾರೆ.

“ಹಡಗಿನಲ್ಲಿ 8 ವಿಜ್ಞಾನಿಗಳು ಮತ್ತು 28 ಸಿಬ್ಬಂದಿ ಇದ್ದರು. ಅವರನ್ನು ರಕ್ಷಿಸಿ ಗೋವಾಕ್ಕೆ ಕರೆತರಲಾಯಿತು. ಎಲ್ಲರೂ ಸುರಕ್ಷಿತವಾಗಿದ್ದಾರೆ” ಎಂದು ಕೋಸ್ಟ್ ಗಾರ್ಡ್ ಡಿಐಜಿ ಕೆಎಲ್ ಅರುಣ್ ಹೇಳಿದ್ದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:56 pm, Thu, 27 July 23