ಆಗಸ್ಟ್ 3ರಂದು ತೀರ್ಪು ನೀಡುವವರೆಗೆ ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ತಡೆಯಾಜ್ಞೆ ನೀಡಿದ ಅಲಹಾಬಾದ್ ಹೈಕೋರ್ಟ್

ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿಯ ಮನವಿಯ ಮೇಲೆ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರೀತಿಂಕರ್ ದಿವಾಕರ್ ಅವರು ಇಂದು(ಗುರುವಾರ) ವಿಚಾರಣೆಯನ್ನು ಪುನರಾರಂಭಿಸಿದರು

ಆಗಸ್ಟ್ 3ರಂದು ತೀರ್ಪು ನೀಡುವವರೆಗೆ ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ತಡೆಯಾಜ್ಞೆ ನೀಡಿದ ಅಲಹಾಬಾದ್ ಹೈಕೋರ್ಟ್
ಜ್ಞಾನವಾಪಿ ಮಸೀದಿ
Follow us
ರಶ್ಮಿ ಕಲ್ಲಕಟ್ಟ
|

Updated on: Jul 27, 2023 | 7:23 PM

ವಾರಣಾಸಿ ಜುಲೈ 27: ಜ್ಞಾನವಾಪಿ ಮಸೀದಿಯನ್ನು (Gyanvapi mosque) ದೇವಸ್ಥಾನದ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ನಿರ್ದೇಶಿಸಿದ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧದ ಅರ್ಜಿಯ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ (Allahabad high court) ಗುರುವಾರ ಕಾಯ್ದಿರಿಸಿದೆ. ಎಎಸ್‌ಐ ಸಮೀಕ್ಷೆಯ ಮೇಲಿನ ತಡೆಯಾಜ್ಞೆ ಆಗಸ್ಟ್ 3 ರವರೆಗೆ ಮುಂದುವರಿಯಲಿದ್ದು, ಜಿಲ್ಲಾ ನ್ಯಾಯಾಲಯದ ಆದೇಶದ ವಿವಾದಾತ್ಮಕ ಸಮೀಕ್ಷೆ ವಿರುದ್ಧದ ಮನವಿಯ ಕುರಿತು ನ್ಯಾಯಾಲಯವು ಅಂದುತೀರ್ಪು ನೀಡಲಿದೆ.

ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿಯ ಮನವಿಯ ಮೇಲೆ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರೀತಿಂಕರ್ ದಿವಾಕರ್ ಅವರು ಇಂದು(ಗುರುವಾರ) ವಿಚಾರಣೆಯನ್ನು ಪುನರಾರಂಭಿಸಿದರು.  ಮಸೀದಿ ಸಮಿತಿಯ ಪರ ವಕೀಲ ಎಸ್‌ಎಫ್‌ಎ ನಖ್ವಿ, ಐವರು ಫಿರ್ಯಾದಿದಾರರು ಸಲ್ಲಿಸಿರುವ ದಾವೆಯ ನಿರ್ವಹಣೆಗೆ ಸಂಬಂಧಿಸಿದ ವಿಷಯವು ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿದ. ದೇಶದ ವಿವಿಧ ಭಾಗಗಳ ಜನರು ಪ್ರತ್ಯೇಕ ಮೊಕದ್ದಮೆಗಳನ್ನು ಹೂಡುವ ಬದಲು ದೇವಾಲಯದ ಟ್ರಸ್ಟ್ ಅಥವಾ ಉಸ್ತುವಾರಿ ಈ ಸಮಸ್ಯೆಯನ್ನು ಎತ್ತುತ್ತಿಲ್ಲ ಎಂದು ಹೇಳಿದ್ದಾರೆ.

ಮಸೀದಿ ಆವರಣವನ್ನು ತಲುಪಿದಾಗ ASI  ಅಗೆಯುವ ಸಲಕರಣೆಗಳನ್ನು ತಂದಿದ್ದರು ಎಂಬುದಕ್ಕೆ ಛಾಯಾಚಿತ್ರಗಳನ್ನು ಇರಿಸಿದ್ದೇವೆ. ಅವರು ಸ್ಥಳವನ್ನು ಅಗೆಯುವ ಉದ್ದೇಶವನ್ನು ಹೊಂದಿದ್ದರು ಎಂಬುದನ್ನು ಇದು ತೋರಿಸುತ್ತದ ಎಂದು ನಖ್ವಿ ನ್ಯಾಯಾಲಯಕ್ಕೆ ತಿಳಿಸಿದರು.

ಬುಧವಾರ ನಡೆದ ವಿಚಾರಣೆ ವೇಳೆ ಹಿರಿಯ ಎಎಸ್‌ಐ ಅಧಿಕಾರಿಯೊಬ್ಬರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಎಎಸ್ಐ ತಂಡವು ಯಾವುದೇ ರೀತಿಯಲ್ಲಿ “ರಚನೆಯನ್ನು (ಮಸೀದಿ) ನಾಶಮಾಡಲು” ಹೋಗುವುದಿಲ್ಲ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಇಡಿ ನಿರ್ದೇಶಕ ಸಂಜಯ್ ಮಿಶ್ರಾ ಅಧಿಕಾರಾವಧಿ ಸೆಪ್ಟೆಂಬರ್ 15ರ ವರೆಗೆ ವಿಸ್ತರಿಸಿದ ಸುಪ್ರೀಂಕೋರ್ಟ್

ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಮಸೀದಿಯ ಎಎಸ್‌ಐ ಸಮೀಕ್ಷೆಗೆ ಸಲ್ಲಿಸಿದ ಅರ್ಜಿಯನ್ನು ಓದಿದ್ದು, ಪ್ರಸ್ತುತ ಕಟ್ಟಡದ ಗೋಡೆಗಳ ಮೇಲೆ ಹಿಂದೂ ಧರ್ಮದ ವಿವಿಧ ಚಿಹ್ನೆಗಳು ಇವೆ. ಮಸೀದಿಯ ಒಳಗೆ ಮತ್ತು ಪಶ್ಚಿಮ ಗೋಡೆಯ ಮೇಲೆ ಹಲವಾರು ಹಿಂದೂ ಕಲಾಕೃತಿಗಳಿವೆ ಎಂದಿದ್ದಾರೆ.

ಮೊಘಲ್ ಚಕ್ರವರ್ತಿ ಔರಂಗಜೇಬ್ ದೇವಾಲಯವನ್ನು ಕೆಡವುವಾಗ ಹೊಸ ನಿರ್ಮಾಣಗಳನ್ನು ನಿರ್ಮಿಸಲಿಲ್ಲ. ಹಳೆಯ ದೇವಾಲಯದ ಅವಶೇಷಗಳ ಮೇಲೆ ಮುಸ್ಲಿಮರು ಮೇಲ್ವಿನ್ಯಾಸವನ್ನು ಬೆಳೆಸಿದರು ಎಂದು ಅವರು ಹೇಳಿದರು. ಬುಧವಾರ ಬೆಳಿಗ್ಗೆ ನಡೆದ ವಿಚಾರಣೆಯ ಸಂದರ್ಭದಲ್ಲಿ, ಮುಖ್ಯ ನ್ಯಾಯಮೂರ್ತಿ ದಿವಾಕರ್ ಅವರು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರನ್ನು ವಾರಣಾಸಿಯಿಂದ ಎಎಸ್‌ಐನ ಯಾವುದೇ ಪರಿಣಿತ ಸದಸ್ಯರನ್ನು ಕರೆಸಿ ಸಮೀಕ್ಷೆಯನ್ನು ಹೇಗೆ ನಡೆಸಲಾಗುವುದು ಎಂಬುದನ್ನು ನ್ಯಾಯಾಲಯಕ್ಕೆ ಪ್ರದರ್ಶಿಸುವಂತೆ ಕೇಳಿದರು.

ನ್ಯಾಯಾಲಯದ ಆದೇಶದ ಅನ್ವಯ, ಎಎಸ್‌ಐನ ಹೆಚ್ಚುವರಿ ನಿರ್ದೇಶಕ ಅಲೋಕ್ ತ್ರಿಪಾಠಿ ಅವರು ಸರ್ವೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ. ಜುಲೈ 21 ರಂದು ಆದೇಶವನ್ನು ಅಂಗೀಕರಿಸುವಾಗ, ವಾರಣಾಸಿ ಜಿಲ್ಲಾ ನ್ಯಾಯಾಲಯವು ಸಮೀಕ್ಷೆಯ ವರದಿಯ ಅನುಪಸ್ಥಿತಿಯಲ್ಲಿ ಸಮಸ್ಯೆಯನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿತು.ಆದರೆ ಅಂತಹ ತೀರ್ಮಾನಕ್ಕೆ ಬರುವ ಮೊದಲು ನ್ಯಾಯಾಲಯವು ವಸ್ತುಗಳನ್ನು ಚರ್ಚಿಸಲಿಲ್ಲ ಎಂದು ನಖ್ವಿ ವಾದಿಸಿದ್ದಾರೆ. ಎಎಸ್‌ಐ ಅನ್ನು ಮೊಕದ್ದಮೆಯಲ್ಲಿ ಭಾಗಿಯಾಗಿಲ್ಲ ಎಂದು ನಖ್ವಿ ಆಕ್ಷೇಪ ಎತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ