ಮಳೆ ಪ್ರವಾಹಕ್ಕೆ ಸಿಲುಕಿ ಆನೆ ಮರಿ ಸಾವು, ವ್ಯರ್ಥವಾದ NDRF ತಂಡದ ರಕ್ಷಣಾಕಾರ್ಯ

ಕೇರಳ: ಸುರಿಯುತ್ತಿರುವ ಧಾರಾಕಾರ ಮಳೆಗೆ ಸಿಲುಕಿ ಆನೆ ಮರಿಯೊಂದು ಸಾವನ್ನಪ್ಪಿರುವ ದುರಾದೃಷ್ಟಕರ ಘಟನೆ ಕೇರಳದಲ್ಲಿ ಸಂಭವಿಸಿದೆ. ಕೇರಳದ ಪಥಾನಮ್‌ತಿತ್ತ ಜಿಲ್ಲೆಯ ಪಂಡಾಲಮ್‌ ಬಳಿಯಯಲ್ಲಿ ಆನೆಯ ಮರಿಯೊಂದು ಸೇತುವೆಯ ಕೆಳಗೆ ಮಳೆಯಿಂದಾದ ಭೂಕುಸಿತ ಮತ್ತು ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದೆ. ಎನ್‌ಡಿಆರ್‌ಎಫ್‌ ತಂಡ ಆನೆ ಮರಿಯನ್ನು ರಕ್ಷಿಸಲು ಪ್ರಯತ್ನಪಟ್ಟರಾದ್ರೂ ಅವರು ಸ್ಥಳಕ್ಕೆ ತಲುಪುವಷ್ಟರಲ್ಲಿ ಆನೆ ಮರಿ ಸಾವನ್ನಪ್ಪಿದೆ. ನಂತರ ಎನ್‌ಡಿಆರ್‌ಎಫ್‌ನ ರಕ್ಷಣಾ ತಂಡ ಆನೆಮರಿಯ ದೇಹವನ್ನು ಅಲ್ಲಿಂದ ಸಾಗಿಸಲು ಪ್ರಯತ್ನ ಪಡುತ್ತಿದ್ದಾರೆ. ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿರೋದ್ರಿಂದ ಅಲ್ಲಿನ ಜನಜೀವನ […]

ಮಳೆ ಪ್ರವಾಹಕ್ಕೆ ಸಿಲುಕಿ ಆನೆ ಮರಿ ಸಾವು, ವ್ಯರ್ಥವಾದ NDRF ತಂಡದ ರಕ್ಷಣಾಕಾರ್ಯ

Updated on: Aug 07, 2020 | 9:36 PM

ಕೇರಳ: ಸುರಿಯುತ್ತಿರುವ ಧಾರಾಕಾರ ಮಳೆಗೆ ಸಿಲುಕಿ ಆನೆ ಮರಿಯೊಂದು ಸಾವನ್ನಪ್ಪಿರುವ ದುರಾದೃಷ್ಟಕರ ಘಟನೆ ಕೇರಳದಲ್ಲಿ ಸಂಭವಿಸಿದೆ.

ಕೇರಳದ ಪಥಾನಮ್‌ತಿತ್ತ ಜಿಲ್ಲೆಯ ಪಂಡಾಲಮ್‌ ಬಳಿಯಯಲ್ಲಿ ಆನೆಯ ಮರಿಯೊಂದು ಸೇತುವೆಯ ಕೆಳಗೆ ಮಳೆಯಿಂದಾದ ಭೂಕುಸಿತ ಮತ್ತು ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದೆ. ಎನ್‌ಡಿಆರ್‌ಎಫ್‌ ತಂಡ ಆನೆ ಮರಿಯನ್ನು ರಕ್ಷಿಸಲು ಪ್ರಯತ್ನಪಟ್ಟರಾದ್ರೂ ಅವರು ಸ್ಥಳಕ್ಕೆ ತಲುಪುವಷ್ಟರಲ್ಲಿ ಆನೆ ಮರಿ ಸಾವನ್ನಪ್ಪಿದೆ.

ನಂತರ ಎನ್‌ಡಿಆರ್‌ಎಫ್‌ನ ರಕ್ಷಣಾ ತಂಡ ಆನೆಮರಿಯ ದೇಹವನ್ನು ಅಲ್ಲಿಂದ ಸಾಗಿಸಲು ಪ್ರಯತ್ನ ಪಡುತ್ತಿದ್ದಾರೆ. ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿರೋದ್ರಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ.