Air India ವಿಮಾನ ದುರಂತಕ್ಕೆ ಈಡಾಗಲು ಕಾರಣವೇನು?

ತಿರುವನಂತಪುರಂ: 2010ರಲ್ಲಿ ಮಂಗಳೂರಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿ ಮೂರ್ನಾಲ್ಕು ಮಂದಿಯನ್ನ ಬಿಟ್ಟರೆ ಉಳಿದೆಲ್ಲಾ ಪ್ರಯಾಣಿಕರು ಸಾವಿಗೀಡಾಗಿದ್ರು. ಈಗ ಇಂಥದ್ದೇ ಘಟನೆ ಕೇರಳದ ಕೋಯಿಕ್ಕೋಡ್‌ನ ಕರಿಪುರ ಏರ್​ಪೋರ್ಟ್​ನಲ್ಲಿ ನಡೆದಿದೆ. ಮಂಗಳೂರಿನಂತೆಯೇ ಕರಿಪುರ ಏರ್​ಪೋರ್ಟ್ ಕೂಡ ಟೇಬಲ್ ಟಾಪ್ ಏರ್​ಪೋರ್ಟ್ ಆಗಿದೆ. ಹೀಗಾಗಿ, ರನ್​ವೇ ಬರೋಬ್ಬರಿ 130 ಅಡಿ ಎತ್ತರದಲ್ಲಿದೆ. ನಿನ್ನೆ ಜೋರು ಮಳೆಯಿದ್ದಿದ್ದಕ್ಕೆ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದೆ. ಇದ್ರಿಂದ ವಿಮಾನ ರನ್​ವೇಯಿಂದ ಸ್ಕಿಡ್ ಆಗಿದೆ. ಮೊದಲೇ ಟೇಬಲ್ ಟಾಪ್ ರನ್​ವೇ ಆಗಿರೋದ್ರಿಂದ ವಿಮಾನ ಏರ್​ಪೋರ್ಟ್​ನ ಕಾಂಪೌಂಡ್​ನಿಂದ 35 […]

Air India ವಿಮಾನ ದುರಂತಕ್ಕೆ ಈಡಾಗಲು ಕಾರಣವೇನು?
Follow us
KUSHAL V
|

Updated on: Aug 08, 2020 | 7:40 AM

ತಿರುವನಂತಪುರಂ: 2010ರಲ್ಲಿ ಮಂಗಳೂರಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿ ಮೂರ್ನಾಲ್ಕು ಮಂದಿಯನ್ನ ಬಿಟ್ಟರೆ ಉಳಿದೆಲ್ಲಾ ಪ್ರಯಾಣಿಕರು ಸಾವಿಗೀಡಾಗಿದ್ರು. ಈಗ ಇಂಥದ್ದೇ ಘಟನೆ ಕೇರಳದ ಕೋಯಿಕ್ಕೋಡ್‌ನ ಕರಿಪುರ ಏರ್​ಪೋರ್ಟ್​ನಲ್ಲಿ ನಡೆದಿದೆ. ಮಂಗಳೂರಿನಂತೆಯೇ ಕರಿಪುರ ಏರ್​ಪೋರ್ಟ್ ಕೂಡ ಟೇಬಲ್ ಟಾಪ್ ಏರ್​ಪೋರ್ಟ್ ಆಗಿದೆ. ಹೀಗಾಗಿ, ರನ್​ವೇ ಬರೋಬ್ಬರಿ 130 ಅಡಿ ಎತ್ತರದಲ್ಲಿದೆ. ನಿನ್ನೆ ಜೋರು ಮಳೆಯಿದ್ದಿದ್ದಕ್ಕೆ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದೆ. ಇದ್ರಿಂದ ವಿಮಾನ ರನ್​ವೇಯಿಂದ ಸ್ಕಿಡ್ ಆಗಿದೆ. ಮೊದಲೇ ಟೇಬಲ್ ಟಾಪ್ ರನ್​ವೇ ಆಗಿರೋದ್ರಿಂದ ವಿಮಾನ ಏರ್​ಪೋರ್ಟ್​ನ ಕಾಂಪೌಂಡ್​ನಿಂದ 35 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ. ಈ ರಭಸಕ್ಕೆ ಏರ್ ಇಂಡಿಯಾ ವಿಮಾನ ಎರಡು ತುಂಡಾಗಿದೆ. ಇನ್ನು ಟೇಬಲ್ ಟಾಪ್ ರನ್​ವೇಗಳಲ್ಲಿ ವಿಮಾನ ಲ್ಯಾಂಡಿಂಗ್ ಮಾಡೋದು ಸಾಹಸವೇ ಸರಿ. ಅದ್ರಲ್ಲೂ ಹವಾಮಾನ ವೈಪರೀತ್ಯ ಇರುವಾಗ ಜೀವ ಕೈಯಲ್ಲಿ ಹಿಡಿದು ಲ್ಯಾಂಡಿಂಗ್ ಮಾಡೋ ಪರಿಸ್ಥಿತಿ ಇರುತ್ತೆ. ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ವಿಮಾನ ಪ್ರಪಾತಕ್ಕೆ ಜಾರಿ ಬೀಳುತ್ತೆ. ಹೀಗಾಗಿ ಅತ್ಯಂತ ಅನುಭವಿ ಹಾಗೂ ರಾಷ್ಟ್ರಪತಿಯಿಂದ ಗೋಲ್ಡ್ ಮೆಡಲ್ ಪಡೆದ ಹಿರಿಯ ಪೈಲಟ್ ಆದ ದೀಪಕ್ ವಸಂತ್ ಸಾತೆಯನ್ನ ನೇಮಿಸಲಾಗಿತ್ತು. ಇವರಿಗೆ ಅಖಿಲೇಶ್ ಕುಮಾರ್ ಕೋ -ಪೈಲಟ್​ ಆಗಿ ಸಾಥ್ ನೀಡ್ತಿದ್ರು. ಆದರೂ ದುರಾದೃಷ್ಟ ಬೆನ್ನೇರಿ ಹಲವರನ್ನ ಸಾವಿನ ಮನೆಗೆ ತಳ್ಳಿದೆ.

ವಿಮಾನಕ್ಕೆ ಬೆಂಕಿ ಹೊತ್ತಿಕೊಳ್ಳದಿರುವುದೇ ಅದೃಷ್ಟ ಕರಿಪುರ ಏರ್​ಪೋರ್ಟ್​ ದೇಶದ7ನೇ ಅತ್ಯಂತ ಕಾರ್ಯನಿರತ ಏರ್​ಪೋರ್ಟ್ ಅನ್ನೋ ಖ್ಯಾತಿ ಪಡೆದಿದೆ. ಇಲ್ಲಿ ವಿಮಾನಗಳ ಹಾರಾಟ ಹೆಚ್ಚಿರುತ್ತೆ. ಆದರೆ ನಿನ್ನೆ ಅದೃಷ್ಟವಶಾತ್ ಪತನಗೊಂಡ ಬಳಿಕ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿಲ್ಲ. ಇದರಿಂದ ಹೆಚ್ಚಿನ ಅನಾಹುತ ತಪ್ಪಿದ್ದು, ಅಧಿಕಾರಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ಒಟ್ನಲ್ಲಿ, ವಿಮಾದ ದುರಂತ ಹವಾಮಾನ ವೈಪರೀತ್ಯದಿಂದಲೋ ಅಥವಾ ಟೇಬಲ್ ಟಾಪ್ ರನ್​ವೇದಿಂದ ಆಗಿರೋದೋ ಎಂದು ಸದ್ಯಕ್ಕೆ ತಿಳಿದುಬಂದಿಲ್ಲ. ಇದೀಗ, ಘಟನಾ ಸ್ಥಳಕ್ಕೆ ಕೇಂದ್ರ ವಿಮಾನಯಾನ ತನಿಖಾ ತಂಡಗಳು ಭೇಟಿನೀಡಿದ್ದು ಪರಿಶೀಲನೆ ನಡೆಸುತ್ತಿದೆ.

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್