ಭಾರತ-ಚೀನಾ ಗಡಿ ಸಂಘರ್ಷ, ಭೂ ಸೇನೆಗೆ ಭಾರತೀಯ ನೌಕಾ ಪಡೆ ಸಾಥ್
ನವದೆಹಲಿ: ಚೀನಾದೊಂದಿಗಿನ ಗಡಿ ಸಂಘರ್ಷ ಉಲ್ಫಣಗೊಂಡಿರುವ ಹಿನ್ನೆಲೆಯಲ್ಲಿ ಭಾರತ ತನ್ನ ಗಡಿಯಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದೆ. ಈ ಸಂಬಂಧ ಹಿಂದೂ ಮಹಾಸಾಗರದಲ್ಲಿ ಯುದ್ಧ ನೌಕೆಗಳ ಸಂಖ್ಯೆಯನ್ನು ಭಾರತ ಹೆಚ್ಚಿಸಿದೆ. ಭಾರತದ ವ್ಯಾಪ್ತಿಯೊಳಗೆ ನೌಕಾಪಡೆಯ ಯುದ್ಧ ನೌಕೆಗಳನ್ನು ನಿಯೋಜನೆ ಮಾಡಿದ್ದು, ಈ ನೌಕೆಗಳ ಮೂಲಕ ಚೀನಾ ಮೇಲೆ ಭಾರತೀಯ ವಾಯಪಡೆ ಕೂಡಾ ಹದ್ದಿನ ಕಣ್ಣು ಇರಿಸಿದೆ. ಭೂಸೇನೆಗೆ ನೆರವಾಗುವ ರೀತಿಯಲ್ಲಿ ವ್ಯೂಹಾತ್ಮಕ ನಿಲುವು ತೆಗೆದುಕೊಳ್ಳುತ್ತಿರುವ ನೌಕಾಪಡೆ ಮತ್ತು ವಾಯುಪಡೆಗಳು ಹಿಂದೂ ಮಹಾಸಾಗರದಲ್ಲಿ ಭಾರತೀಯ ನೌಕಾಪಡೆಯ ಗಸ್ತು ಪ್ರಮಾಣ ಹೆಚ್ಚಸಿದೆ. […]
ನವದೆಹಲಿ: ಚೀನಾದೊಂದಿಗಿನ ಗಡಿ ಸಂಘರ್ಷ ಉಲ್ಫಣಗೊಂಡಿರುವ ಹಿನ್ನೆಲೆಯಲ್ಲಿ ಭಾರತ ತನ್ನ ಗಡಿಯಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದೆ.
ಈ ಸಂಬಂಧ ಹಿಂದೂ ಮಹಾಸಾಗರದಲ್ಲಿ ಯುದ್ಧ ನೌಕೆಗಳ ಸಂಖ್ಯೆಯನ್ನು ಭಾರತ ಹೆಚ್ಚಿಸಿದೆ. ಭಾರತದ ವ್ಯಾಪ್ತಿಯೊಳಗೆ ನೌಕಾಪಡೆಯ ಯುದ್ಧ ನೌಕೆಗಳನ್ನು ನಿಯೋಜನೆ ಮಾಡಿದ್ದು, ಈ ನೌಕೆಗಳ ಮೂಲಕ ಚೀನಾ ಮೇಲೆ ಭಾರತೀಯ ವಾಯಪಡೆ ಕೂಡಾ ಹದ್ದಿನ ಕಣ್ಣು ಇರಿಸಿದೆ.
ಭೂಸೇನೆಗೆ ನೆರವಾಗುವ ರೀತಿಯಲ್ಲಿ ವ್ಯೂಹಾತ್ಮಕ ನಿಲುವು ತೆಗೆದುಕೊಳ್ಳುತ್ತಿರುವ ನೌಕಾಪಡೆ ಮತ್ತು ವಾಯುಪಡೆಗಳು ಹಿಂದೂ ಮಹಾಸಾಗರದಲ್ಲಿ ಭಾರತೀಯ ನೌಕಾಪಡೆಯ ಗಸ್ತು ಪ್ರಮಾಣ ಹೆಚ್ಚಸಿದೆ. ಇದು ಸಾಮಾನ್ಯ ಸಂದರ್ಭಕ್ಕಿಂತ ಶೇ.25ರಷ್ಟು ಹೆಚ್ಚಾಗಿದೆ.
Published On - 8:58 pm, Sat, 8 August 20