ರಕ್ಷಣಾ ವಲಯದಲ್ಲಿ ‘ಆತ್ಮ ನಿರ್ಭರ ಭಾರತ’ಕ್ಕೆ ಆದ್ಯತೆ: 101 ಉಪಕರಣಗಳ ಆಮದು ನಿಷೇಧ
ದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಭಾರತ ಆತ್ಮ ನಿರ್ಭರವಾಗಲಿದೆ. ಈ ನಿಟ್ಟಿನಲ್ಲಿ ಸೇನಾಪಡೆಗಳು ಬಳಸುವ 101 ಉಪಕರಣಗಳ ಆಮದು ನಿಷೇಧ ಮಾಡಲಾಗಿದೆ ಎಂದು ಟ್ವಿಟರ್ ಮುಖಾಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ. 2020ರಿಂದ 2024ರವರೆಗೂ ಹಂತಹಂತವಾಗಿ ಆಮದು ನಿಷೇಧ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು. ರಕ್ಷಣಾ ವಲಯದಲ್ಲಿ ದೇಶೀಯ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಸಜ್ಜಾಗಿರುವ ಸಚಿವರು ಆಮದಿಗೆ ನಿಷೇಧವಾದ ಉಪಕರಣಗಳಲ್ಲಿ ಆರ್ಟಿಲರಿ ಗನ್, ರೈಫಲ್ಸ್, ಸರಕು ಸಾಗಾಣಿಕೆ ವಿಮಾನಗಳು, ಲಘು ಯುದ್ಧ […]
ದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಭಾರತ ಆತ್ಮ ನಿರ್ಭರವಾಗಲಿದೆ. ಈ ನಿಟ್ಟಿನಲ್ಲಿ ಸೇನಾಪಡೆಗಳು ಬಳಸುವ 101 ಉಪಕರಣಗಳ ಆಮದು ನಿಷೇಧ ಮಾಡಲಾಗಿದೆ ಎಂದು ಟ್ವಿಟರ್ ಮುಖಾಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ. 2020ರಿಂದ 2024ರವರೆಗೂ ಹಂತಹಂತವಾಗಿ ಆಮದು ನಿಷೇಧ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ರಕ್ಷಣಾ ವಲಯದಲ್ಲಿ ದೇಶೀಯ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಸಜ್ಜಾಗಿರುವ ಸಚಿವರು ಆಮದಿಗೆ ನಿಷೇಧವಾದ ಉಪಕರಣಗಳಲ್ಲಿ ಆರ್ಟಿಲರಿ ಗನ್, ರೈಫಲ್ಸ್, ಸರಕು ಸಾಗಾಣಿಕೆ ವಿಮಾನಗಳು, ಲಘು ಯುದ್ಧ ಹೆಲಿಕಾಪ್ಟರ್, ರೆಡಾರ್, ಸೋನಾರ್, ಶಸ್ತ್ರಸಜ್ಜಿತ ವಾಹನಗಳು ಸಹ ಸೇರಿವೆ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ 5 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಮೀಸಲಿಡಲಿದ್ದು ಅದರಲ್ಲಿ 1,30,000 ಕೋಟಿ ರೂಪಾಯಿ ಸೇನಾಪಡೆಗೆ ಶಸ್ತ್ರಾಸ್ತ್ರಗಳ ನಿರ್ಮಾಣಕ್ಕೆ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ನೌಕಾಸೇನೆಗಾಗಿ ಶಸ್ತ್ರಾಸ್ತ್ರ ಉತ್ಪಾದನೆ ಮಾಡಲು 1,40,000 ಕೋಟಿ ರೂಪಾಯಿ ಹಣ ಮೀಸಲಿಡಲಾಗಿದೆ.
Taking cue from that evocation, the Ministry of Defence has prepared a list of 101 items for which there would be an embargo on the import beyond the timeline indicated against them. This is a big step towards self-reliance in defence. #AtmanirbharBharat
— Rajnath Singh (@rajnathsingh) August 9, 2020