2014ಕ್ಕಿಂತ ಮೊದಲು ಕೊರೊನಾ ಭಾರತಕ್ಕೆ ಬಂದಿದ್ದರೆ ನಾವೆಲ್ಲ ಹೆಣಗಾಡಬೇಕಾಗುತಿತ್ತು: ಪ್ರಧಾನಿ ಮೋದಿ
ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರಿಂದು ದೆಹಲಿಯ ರಾಜ್‌ಘಾಟ್‌ನಲ್ಲಿರುವ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು ಉದ್ಘಾಟಿಸಿದ ನಂತರ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ಎಲ್ಲ ರಾಜ್ಯ, ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಿದ ಪ್ರಧಾನಿ ಮೋದಿ, “2014ಕ್ಕೂ ಮೊದಲೇ ಕೊರೊನಾ ಸೋಂಕು ಬಂದಿದ್ದರೆ, ನಮ್ಮ ದೇಶ ಹೇಗಿರುತ್ತಿತ್ತು ಎಂದು ಊಹಿಸಿಕೊಳ್ಳಿ. ನಮ್ಮ ಜನಸಂಖ್ಯೆಯ ಶೇಕಡಾ 60ಕ್ಕಿಂತ ಜನ ಬಹಿರ್ದೆಷೆಗೆ ಹೊರಗ ಡೆ ಹೋಗುತ್ತಿದ್ದ ಕಾಲದಲ್ಲಿ ಲಾಕ್ಡೌನ್ ಜಾರಿಗೊಳಿಸುವುದು ಸಾಧ್ಯವಿತ್ತೇ? ‘ಸ್ವಚ್ಛಾಗ್ರಹ‘ ಯೋಜನೆಯು, ನಮ್ಮನ್ನು […]
ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರಿಂದು ದೆಹಲಿಯ ರಾಜ್‌ಘಾಟ್‌ನಲ್ಲಿರುವ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು ಉದ್ಘಾಟಿಸಿದ ನಂತರ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ಎಲ್ಲ ರಾಜ್ಯ, ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಿದ ಪ್ರಧಾನಿ ಮೋದಿ, “2014ಕ್ಕೂ ಮೊದಲೇ ಕೊರೊನಾ ಸೋಂಕು ಬಂದಿದ್ದರೆ, ನಮ್ಮ ದೇಶ ಹೇಗಿರುತ್ತಿತ್ತು ಎಂದು ಊಹಿಸಿಕೊಳ್ಳಿ. ನಮ್ಮ ಜನಸಂಖ್ಯೆಯ ಶೇಕಡಾ 60ಕ್ಕಿಂತ ಜನ ಬಹಿರ್ದೆಷೆಗೆ ಹೊರಗ
ಡೆ ಹೋಗುತ್ತಿದ್ದ ಕಾಲದಲ್ಲಿ ಲಾಕ್ಡೌನ್ ಜಾರಿಗೊಳಿಸುವುದು ಸಾಧ್ಯವಿತ್ತೇ? ‘ಸ್ವಚ್ಛಾಗ್ರಹ‘ ಯೋಜನೆಯು, ನಮ್ಮನ್ನು ಕೊವಿಡ್ ವಿರುದ್ಧ ಹೋರಾಡುವಷ್ಟು ಸಶಕ್ತರನ್ನಾಗಿ ಮಾಡಿದೆ,” ಎಂದು ಮೋದಿ ಹೇಳಿದರು.
“60 ತಿಂಗಳ ಸಮಯದಲ್ಲಿ 60 ಕೋಟಿ ಶೌಚಾಲಯಗಳನ್ನು ನಿರ್ಮಿಸಿದ್ದರಿಂದಲೇ ಕೊರೊನಾವನ್ನು ತಡೆಗಟ್ಟುವುದು ಸ್ವಚ್ಛಭಾರತ ಅಭಿಯಾನ ಸಾಧ್ಯವಾಗಿಸಿದೆ. ಗಾಂಧೀಜಿಯವರನ್ನು ಆದರ್ಶವಾಗಿಟ್ಟುಕೊಂಡಿರುವ ಲಕ್ಷಾಂತರ ಜನ ಕಳೆದ ಕೆಲವು ವರ್ಷಗಳಿಂದ ಸ್ವಚ್ಛ ಭಾರತ ಅಭಿಯಾನವನ್ನು ತಮ್ಮ ಜೀವನದ ದ್ಯೇಯವನ್ನಾಗಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ನಾವು 60 ತಿಂಗಳಲ್ಲಿ 60 ಕೋಟಿ ಜನಕ್ಕೆ ಶೌಚಾಲಯಗಳನ್ನು ಕಟ್ಟುವುದು ಸಾಧ್ಯವಾಗಿದೆ” ಎಂದು ಮೋದಿ ಮಕ್ಕಳಿಗೆ ಹೇಳಿದರು.
“ಇವತ್ತು ಇಡೀ ಪ್ರಪಂಚ ಗಾಂಧೀಜಿಯವರ ಮೌಲ್ಯ ಮತ್ತು ತತ್ವಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಕಳೆದ ವರ್ಷ ನಾವು ಆಚರಿಸಿದ ಗಾಂಧೀಜಿಯವರ 150ನೇ ವಾರ್ಷಿಕೋತ್ಸವ ಅಭೂತಪೂರ್ವವಾಗಿತ್ತು. ಅವರ ‘ವೈಷ್ಣವ ಜನ ತೊ‘ ಹಾಡನ್ನು ಬೇರೆ ಬೇರೆ ದೇಶದ ಹಾಡುಗಾರರು ಕಲಿತಿದ್ದೂ ಅಲ್ಲದೆ ಹಾಡಿಯೂ ತೋರಿಸಿದರು,” ಎಂದು ಮೋದಿ ಹೇಳಿದರು.
“ನಾವೆಲ್ಲ, ‘ಗಂದಗಿ, ಭಾರತ್ ಛೋಡೊ‘ ಅಭಿಯಾನದ ಭಾಗವಾಗಿದ್ದೇವೆ. ಇಲ್ಲಿ ನೆರೆದಿರುವ ಮಕ್ಕಳೂ ಸೇರಿದಂತೆ ಉಳದವರೆಲ್ಲ, ಕೊವಿಡ್-19 ನಿಯಂತ್ರಿಸಲು ಮಾಸ್ಕ್ ಧರಿಸಿರುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡಿರವುದು ನನಗೆ ಸಂತೋಷವನ್ನುಂಟು ಮಾಡಿದೆ,” ಎಂದು ಮಕ್ಕಳನ್ನು ಮೋದಿ ಕೊಂಡಾಡಿದರು.