ಕೊರೊನಾ ಆತಂಕ ಆಗಿಲ್ಲ ದೂರ, ಪಾಲಿಸಲೇ ಬೇಕು ಇನ್ನೂ ಈ 3 ಮಂತ್ರ!
ದೆಹಲಿ: ಭಾರತದಲ್ಲಿ ಈಗ 20 ಲಕ್ಷ ಕೋವಿಡ್ -19 ಪ್ರಕರಣಗಳಿದ್ದು ಅಮೆರಿಕ ಮತ್ತು ಬ್ರೆಜಿಲ್ ನಂತರ ಮೂರನೇ ಸ್ಥಾನದಲ್ಲಿದೆ. ಕೋವಿಡ್ ಪೀಡಿತರ ಸಂಖ್ಯೆ ಭಾರತದಲ್ಲಿ ಕಡಿಮೆಯಾಗಬೇಕಾದ್ರೆ ಭಾರತೀಯರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಸ್ವಚ್ಛತೆ ಪಾಲಿಸುವುದು ಅವಶ್ಯ ಎಂದು ತಜ್ಞರು ಅಬಿಪ್ರಾಯ ಪಟ್ಟಿದ್ದಾರೆ. ಮೊದಲೆರಡು ಸ್ಥಾನಗಳಲ್ಲಿರುವ ಅಮೆರಿಕ ಮತ್ತು ಬ್ರೆಜಿಲ್‌ಗೆ ಹೋಲಿಸಿದರೆ ಭಾರತ ಪ್ರಸ್ತುತ ಕಡಿಮೆ ಸಾವಿನ ಪ್ರಮಾಣ ಮತ್ತು ಹೆಚ್ಚಿನ ಚೇತರಿಕೆ ಪ್ರಮಾಣ ಹೊಂದಿದೆ. ಹೀಗಾಗಿ ದೇಶದ ಜನತೆ ಕೊರೊನಾ ಹತ್ತಿಕ್ಕಲು ಕನಿಷ್ಟ […]
ದೆಹಲಿ: ಭಾರತದಲ್ಲಿ ಈಗ 20 ಲಕ್ಷ ಕೋವಿಡ್ -19 ಪ್ರಕರಣಗಳಿದ್ದು ಅಮೆರಿಕ ಮತ್ತು ಬ್ರೆಜಿಲ್ ನಂತರ ಮೂರನೇ ಸ್ಥಾನದಲ್ಲಿದೆ. ಕೋವಿಡ್ ಪೀಡಿತರ ಸಂಖ್ಯೆ ಭಾರತದಲ್ಲಿ ಕಡಿಮೆಯಾಗಬೇಕಾದ್ರೆ ಭಾರತೀಯರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಸ್ವಚ್ಛತೆ ಪಾಲಿಸುವುದು ಅವಶ್ಯ ಎಂದು ತಜ್ಞರು ಅಬಿಪ್ರಾಯ ಪಟ್ಟಿದ್ದಾರೆ.
ಮೊದಲೆರಡು ಸ್ಥಾನಗಳಲ್ಲಿರುವ ಅಮೆರಿಕ ಮತ್ತು ಬ್ರೆಜಿಲ್‌ಗೆ ಹೋಲಿಸಿದರೆ ಭಾರತ ಪ್ರಸ್ತುತ ಕಡಿಮೆ ಸಾವಿನ ಪ್ರಮಾಣ ಮತ್ತು ಹೆಚ್ಚಿನ ಚೇತರಿಕೆ ಪ್ರಮಾಣ ಹೊಂದಿದೆ. ಹೀಗಾಗಿ ದೇಶದ ಜನತೆ ಕೊರೊನಾ ಹತ್ತಿಕ್ಕಲು ಕನಿಷ್ಟ ಮೂಲಭೂತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ವೆಬಿನಾರ್‌ನಲ್ಲಿ ತಜ್ಞರು ಸಲಹೆ ಮಾಡಿದ್ದಾರೆ.
ಭಾರತದಲ್ಲಿ ಕೊರೊನಾ ಸೋಂಕಿನಿಂದ ಸಾಯುವವರ ಸಂಖ್ಯೆ ಪ್ರತಿ ಮಿಲಿಯನ್‌ಗೆ 30ರಷ್ಟಿದೆ. ಆದ್ರೆ ಬ್ರೆಜಿಲ್‌ನಲ್ಲಿ 464 ಮತ್ತು ಅಮೆರಿಕದಲ್ಲಿ 492 ರಷ್ಟಿದೆ. ಭಾರತದ ಚೇತರಿಕೆ ಪ್ರಮಾಣ ಶೇಕಡಾ 65 ಕ್ಕೆ ಏರಿದೆ. ಹಾಗೇನೆ ಸಾವಿನ ಪ್ರಮಾಣ ಶೇಕಡಾ 3.6 ರಿಂದ ಶೇಕಡಾ 2ಕ್ಕೆ ಇಳಿದಿದ್ದು ಆಶಾದಾಯಕ ಬೆಳವಣಿಗೆ ಎಂದು ಡಾ ಗಯಾನಿ ತಿಳಿಸಿದ್ದಾರೆ.