ವಿಮಾನ ದುರಂತ ಸ್ಥಳಕ್ಕೆ ವಿಮಾನಯಾನ ಸಚಿವ ಭೇಟಿ, ಸ್ಥಳ ಪರಿಶೀಲನೆ
ಕೇರಳದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ವಿಮಾನ ದುರಂತ ಸ್ಥಳಕ್ಕೆ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಇಂದು ದೆಹಲಿಯಿಂದ ಕೇರಳದ ಕೋಯಿಕ್ಕೋಡ್ ಏರ್‌ಪೋರ್ಟ್‌ಗೆ ಆಗಮಿಸಿದ ಹರದೀಪ್‌ಸಿಂಗ್ ಪುರಿ, ಸೀದಾ ವಿಮಾನ ಅಪಘಾತ ಸಂಭವಿಸಿದ ಸ್ಥಳಕ್ಕೆ ಆಗಮಿಸಿದರು. ಹಿರಿಯ ವಿಮಾನ ತಜ್ಞ ಅಧಿಕಾರಿಗಳೊಂದಿಗೆ ದುರಂತದ ಸ್ಥಳವನ್ನು ಪರಿಶೀಲಿಸಿದ ಸಚಿವ ಹರದೀಪ್‌ಸಿಂಗ್, ಅಪಘಾತಕ್ಕೆ ಕಾರಣಗಳೇನು ಎನ್ನುವುದರ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದರು. 10 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸಂಭವಿಸಿದ ವಿಮಾನ ಅಪಘಾತಕ್ಕೆ ಹೋಲಿಸಿದರೇ […]
ಕೇರಳದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ವಿಮಾನ ದುರಂತ ಸ್ಥಳಕ್ಕೆ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಇಂದು ದೆಹಲಿಯಿಂದ ಕೇರಳದ ಕೋಯಿಕ್ಕೋಡ್ ಏರ್‌ಪೋರ್ಟ್‌ಗೆ ಆಗಮಿಸಿದ ಹರದೀಪ್‌ಸಿಂಗ್ ಪುರಿ, ಸೀದಾ ವಿಮಾನ ಅಪಘಾತ ಸಂಭವಿಸಿದ ಸ್ಥಳಕ್ಕೆ ಆಗಮಿಸಿದರು. ಹಿರಿಯ ವಿಮಾನ ತಜ್ಞ ಅಧಿಕಾರಿಗಳೊಂದಿಗೆ ದುರಂತದ ಸ್ಥಳವನ್ನು ಪರಿಶೀಲಿಸಿದ ಸಚಿವ ಹರದೀಪ್‌ಸಿಂಗ್, ಅಪಘಾತಕ್ಕೆ ಕಾರಣಗಳೇನು ಎನ್ನುವುದರ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದರು. 10 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸಂಭವಿಸಿದ ವಿಮಾನ ಅಪಘಾತಕ್ಕೆ ಹೋಲಿಸಿದರೇ ನಾವು ಅದೃಷ್ಟವಂತರೆಂದೇ ಹೇಳಬೇಕು ಎಂದು ಸಚಿವರು, ಪೈಲಟ್ ಮತ್ತು ಸಹ ಪೈಲಟ್ ಅವರ ಸಮಯ ಪ್ರಜ್ಞೆಯಿಂದಾಗಿ ಹೆಚ್ಚಿನ ಜೀವಹಾನಿಯಾಗುವುದು ತಪ್ಪಿದೆ ಎಂದು ವಿವರಿಸಿದರು. ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಪ್ರತಿಯೊಬ್ಬರ ಕುಟುಂಬಕ್ಕೆ 10 ಲಕ್ಷ ರೂ. ಮತ್ತು ತೀವ್ರವಾಗಿ ಗಾಯಗೊಂಡವರಿಗೆ ಎರಡು ಲಕ್ಷ ರೂ. ಮತ್ತು ಸಾಮಾನ್ಯವಾಗಿ ಗಾಯಗೊಂಡವರಿಗೆ 50,000 ರೂಗಳನ್ನು ಸರ್ಕಾರ ಪರಿಹಾರವಾಗಿ ನೀಡುವುದಾಗಿ ತಿಳಿಸಿದರು.
Reached Kozhikode to take stock of the status & implementation of relief measures after the air accident last evening. Will hold consultations with senior civil aviation officials & professionals: Hardeep Singh Puri, Civil Aviation Minister https://t.co/NUy4UqFfkX
— ANI (@ANI) August 8, 2020