ಒಂದೂವರೆ ಲಕ್ಷದ ಮಾಂಗಲ್ಯ ಸರವನ್ನು ನುಂಗಿದ ಎಮ್ಮೆ, ಆಮೇಲೇನಾಯ್ತು ಇಲ್ಲಿದೆ ಮಾಹಿತಿ

ಎಮ್ಮೆಯೊಂದು ಒಂದೂವರೆ ಲಕ್ಷದ ಮಾಂಗಲ್ಯಸರವನ್ನು ನುಂಗಿರುವ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಘಟನೆ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ನಡೆದಿದೆ. ರೈತ ರಾಮಹರಿ ಅವರ ಪತ್ನಿ ಸ್ನಾನಕ್ಕೆ ತೆರಳುತ್ತಿದ್ದ ವೇಳೆ ಸೋಯಾಬೀನ್, ಶೇಂಗಾ ಚಿಪ್ಪು ತುಂಬಿದ್ದ ತಟ್ಟೆಯಲ್ಲಿ ಮಂಗಳಸೂತ್ರ ಬಿಚ್ಚಿಟ್ಟಿದ್ದರು. ಮಂಗಳಸೂತ್ರವನ್ನು ಇಟ್ಟಿದ್ದನ್ನು ಮರೆತು , ರಾಮಹರಿಯ ಹೆಂಡತಿ ಅಕಸ್ಮಾತ್ ಅದೇ ತಟ್ಟೆಯನ್ನು ಎಮ್ಮೆಯ ಮುಂದೆ ತಿನ್ನಲು ಇಟ್ಟಿದ್ದರು, ಸ್ನಾನ ಮುಗಿಸಿ ಮನೆಯ ಕೆಲಸದಲ್ಲಿ ತೊಡಗಿದರು.

ಒಂದೂವರೆ ಲಕ್ಷದ ಮಾಂಗಲ್ಯ ಸರವನ್ನು ನುಂಗಿದ ಎಮ್ಮೆ, ಆಮೇಲೇನಾಯ್ತು ಇಲ್ಲಿದೆ ಮಾಹಿತಿ
ಮಂಗಳಸೂತ್ರ
Image Credit source: IndiaToday

Updated on: Oct 02, 2023 | 2:16 PM

ಎಮ್ಮೆಯೊಂದು ಒಂದೂವರೆ ಲಕ್ಷದ  ಮಂಗಳಸೂತ್ರವನ್ನು ನುಂಗಿರುವ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಘಟನೆ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ನಡೆದಿದೆ. ರೈತ ರಾಮಹರಿ ಅವರ ಪತ್ನಿ ಸ್ನಾನಕ್ಕೆ ತೆರಳುತ್ತಿದ್ದ ವೇಳೆ ಸೋಯಾಬೀನ್, ಶೇಂಗಾ ಚಿಪ್ಪು ತುಂಬಿದ್ದ ತಟ್ಟೆಯಲ್ಲಿ ಮಂಗಳಸೂತ್ರ ಬಿಚ್ಚಿಟ್ಟಿದ್ದರು. ಮಂಗಳಸೂತ್ರವನ್ನು ಇಟ್ಟಿದ್ದನ್ನು ಮರೆತು , ರಾಮಹರಿಯ ಪತ್ನಿ ಅಕಸ್ಮಾತ್ ಅದೇ ತಟ್ಟೆಯನ್ನು ಎಮ್ಮೆಯ ಮುಂದೆ ತಿನ್ನಲು ಇಟ್ಟಿದ್ದರು, ಸ್ನಾನ ಮುಗಿಸಿ ಮನೆಯ ಕೆಲಸದಲ್ಲಿ ತೊಡಗಿದರು.

ಸ್ವಲ್ಪ ಸಮಯದ ನಂತರ, ಅವರ ಮಂಗಳಸೂತ್ರ ಕಾಣೆಯಾಗಿದೆ ಎಂಬುದು ಅವರ ಗಮನಕ್ಕೆ ಬಂದಿತ್ತು. ಹುಡುಕಾಟದ ನಂತರ, ಅವರು ಎಮ್ಮೆಗೆ ತಿನ್ನಲು ಕೊಟ್ಟ ಆಹಾರದಲ್ಲಿ ಮಂಗಳಸೂತ್ರವನ್ನು ಇಟ್ಟಿದ್ದನ್ನು ನೆನಪಿಸಿಕೊಂಡರು. ತಕ್ಷಣ ಎಮ್ಮೆಯ ಬಳಿಗೆ ಓಡಿದ್ದಾರೆ ಮತ್ತು ತಟ್ಟೆ ಖಾಲಿಯಾಗಿತ್ತು.

ಮತ್ತಷ್ಟು ಓದಿ: ಕೊಲ್ಲೂರು: ತನ್ನ ಜಮೀನಿನೊಳಕ್ಕೆ ಬಂದ ಹತ್ತಾರು ಹಸುಗಳಿಗೆ ಗುಂಡಿಕ್ಕಿದ ನಿರ್ದಯಿ ಮನುಷ್ಯ, ಅಸು ನೀಗಿದ ನಾಲ್ಕು ಹಸುಗಳು

ಆಕೆ ತನ್ನ ಪತಿಗೆ ಮಾಹಿತಿ ನೀಡಿದ್ದು, ಅವರು ಸ್ಥಳೀಯ ಪಶುವೈದ್ಯಾಧಿಕಾರಿ ಬಾಳಾಸಾಹೇಬ್ ಕೌಂಡನೆ ಅವರಿಗೆ ಕರೆ ಮಾಡಿದ್ದಾರೆ. ವೈದ್ಯರು ಮೆಟಲ್ ಡಿಟೆಕ್ಟರ್ ಮೂಲಕ ಎಮ್ಮೆಯ ಹೊಟ್ಟೆಯನ್ನು ತಪಾಸಣೆಗೆ ಒಳಪಡಿಸಿದಾಗ ಅದರೊಳಗೆ ವಸ್ತು ಇರುವುದು ಗೊತ್ತಾಗಿತ್ತು.

ನಂತರ ಎಮ್ಮೆಯ ಹೊಟ್ಟೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಬಳಿಕ ಪ್ರಾಣಿಯ ಹೊಟ್ಟೆಯಿಂದ ಚಿನ್ನದ ಮಂಗಳಸೂತ್ರವನ್ನು ಹೊರಕ್ಕೆ ತೆಗೆದಿದ್ದಾರೆ.
ಎಮ್ಮೆಯದ್ದು ತಪ್ಪೇನು ಇಲ್ಲದಿದ್ದರೂ ನೋವು ಅನುಭವಿಸುವಂತಾಯಿತು.

ಹೊಟ್ಟೆಯ ಆಪರೇಷನ್​ ಸಂದರ್ಭದಲ್ಲಿ 65 ಹೊಲಿಗೆಗಳನ್ನು ಹಾಕಲಾಗಿದೆ. ಈ ಆಪರೇಷನ್ ಎರಡರಿಂದ ಎರಡೂವರೆ ಗಂಟೆಗಳ ಕಾಲ ನಡೆಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ