Tomato Price Hike: ಮಗಳಿಗೆ ಟೊಮೆಟೊದಲ್ಲಿ ತುಲಾಭಾರ ಮಾಡಿಸಿದ ದಂಪತಿ, ಕಣ್ತುಂಬಿಕೊಂಡ ಭಕ್ತರು

ಮಗಳಿಗೆ ಟೊಮೆಟೊದಲ್ಲಿ ತುಲಾಭಾರ ಮಾಡಿಸಿರುವುದು ಎಲ್ಲರ ಗಮನ ಸೆಳೆದಿದೆ. ಈ ಘಟನೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ನಡೆದಿದೆ. ಮಲ್ಲ ಜಗ್ಗ ಅಪ್ಪಾರಾವ್ ಮತ್ತು ಮೋಹಿನಿ ದಂಪತಿಯ ಪುತ್ರಿ ಭವಿಷ್ಯಾ ಅವರಿಗೆ ಟೊಮೆಟೊದಲ್ಲಿ ತುಲಾಭಾರ ಮಾಡಿದ್ದಾರೆ.

Tomato Price Hike: ಮಗಳಿಗೆ ಟೊಮೆಟೊದಲ್ಲಿ ತುಲಾಭಾರ ಮಾಡಿಸಿದ ದಂಪತಿ, ಕಣ್ತುಂಬಿಕೊಂಡ ಭಕ್ತರು
ಟೊಮೆಟೊದಲ್ಲಿ ತುಲಾಭಾರ

Updated on: Jul 17, 2023 | 2:34 PM

ಅಮರಾವತಿ: ದೇಶದಲ್ಲಿ ಟೊಮೆಟೊ (Tomato) ಬೆಲೆ ಗಗನಕ್ಕೇರುತ್ತಿದೆ, ಟೊಮೆಟೊಗೆ ಚಿನ್ನ ಬೆಲೆಯಾಗುತ್ತಿದೆ ಎಂದು ಜನ ಗೋಳಾಡುತ್ತಿದ್ದಾರೆ, ಆದರೆ ಇಲ್ಲೊಂದು ದಂಪತಿಗಳು ತಮ್ಮ ಮಗಳಿಗೆ ಟೊಮೆಟೊದಲ್ಲಿ ತುಲಾಭಾರ ಮಾಡಿರುವ ಘಟನೆ ಎಲ್ಲ ಕಡೆ ವೈರಲ್​​ ಆಗುತ್ತಿದೆ. ಅಕ್ಕಿ, ಚಿನ್ನ, ಬೆಲ್ಲದಲ್ಲಿ ತುಲಾಭಾರ ಮಾಡಿರುವುದನ್ನು ನೋಡಿದ್ದೇವೆ, ಆದರೆ ಟೊಮೆಟೊದಲ್ಲೂ ತುಲಾಭಾರ ಮಾಡಿರುವುದನ್ನು ಇದೇ ಮೊದಲು ನೋಡುತ್ತಿದ್ದರೆ ಒಂದು ಬಾರಿ ನೀವು ಅಚ್ಚರಿಯಾಗುವುದು ಖಂಡಿತ. ಟೊಮೆಟೊ ಬೆಲೆ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ತಮ್ಮ ಮಗಳಿಗೆ ಟೊಮೆಟೊದಲ್ಲಿ ತುಲಾಭಾರ ಮಾಡಿಸಿರುವುದು ಎಲ್ಲರ ಗಮನ ಸೆಳೆದಿದೆ. ಈ ಘಟನೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ನಡೆದಿದೆ. ಮಲ್ಲ ಜಗ್ಗ ಅಪ್ಪಾರಾವ್ ಮತ್ತು ಮೋಹಿನಿ ದಂಪತಿಯ ಪುತ್ರಿ ಭವಿಷ್ಯಾ ಅವರಿಗೆ ಟೊಮೆಟೊದಲ್ಲಿ ತುಲಾಭಾರ ಮಾಡಿದ್ದಾರೆ. ನೂಕಾಲಮ್ಮ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ನಡೆದಿದೆ.

ಈ ತುಲಾಭಾರದಲ್ಲಿ 50 ಕೆ.ಜಿ ಟೊಮೆಟೊವನ್ನು ಇರಿಸಲಾಗಿತ್ತು. ಅದಕ್ಕೆ ಜತೆಯಾಗಿ ಬೆಲ್ಲ ಮತ್ತು ಸಕ್ಕರೆಯನ್ನು ಕೂಡ ಇಡಲಾಗಿತ್ತು. ಈ ತುಲಾಭಾರದಲ್ಲಿ ಇಡಲಾಗಿದ್ದ, ಟೊಮೆಟೊ ಮತ್ತು ಸೆಕ್ಕರೆಯನ್ನು ದೇವಾಲಯದಲ್ಲಿ ನೀಡುವ ನಿತ್ಯಾನ್ನದಾನಕ್ಕೆ ಬಳಸಲಾಗುವುದು ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:  ಇಂದಿನಿಂದ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಪ್ರಾರಂಭ, ಕರ್ನಾಟಕದ ಮಾರುಕಟ್ಟೆಗೆ ಡಿಮ್ಯಾಂಡ್

ಸದ್ಯ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆಜಿಗೆ 120 ರೂ. ಇದರಿಂದ ದರ್ಶನಕ್ಕೆ ಬಂದ ಭಕ್ತರು ಈ ತುಲಾಭಾರ ಕಣ್ತುಂಬಿಕೊಂಡಿದ್ದಾರೆ. ಇನ್ನೂ ಕೇಂದ್ರ ಸರ್ಕಾರ ಟೊಮೆಟೊವನ್ನು ರಿಯಾಯಿತಿ ದರದಲ್ಲಿ ನೀಡುವ ಯೋಜನೆಯನ್ನು ಹಾಕಿಕೊಂಡಿದೆ. ಈ ರಿಯಾಯಿತಿ ದರದ ಪ್ರಕಾರ 1 ಕಿಲೋಗೆ 90ರಂತೆ ಮಾರಾಟ ಮಾಡಿ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಹೇಳಿದೆ. ಇದಕ್ಕಾಗಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದ ಟೊಮೆಟೊ ಖರೀದಿ ಮಾಡುವಂತೆ ಗ್ರಾಹಕ ವ್ಯವಹಾರಗಳ ಇಲಾಖೆಯು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟಕ್ಕೆ ಸೂಚನೆ ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:54 pm, Mon, 17 July 23