CBSE Exams: ಪರೀಕ್ಷೆ ಬೇಕೇ, ಬೇಡವೇ? ವಿದ್ಯಾರ್ಥಿಗಳ ಬಳಿ ಸಲಹೆ ಕೇಳಿದ ಕೇಂದ್ರ ಸರ್ಕಾರ

CBSE Exams 2021: ಕೊವಿಡ್ ಕಾಲದಲ್ಲಿ ಸಿಬಿಎಸ್​ಇ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವ ಕಾರಣ, ಪಾಲಕರು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಟ್ವಿಟರ್​ ಮೂಲಕ ಹಂಚಿಕೊಳ್ಳುವಂತೆ ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.

CBSE Exams: ಪರೀಕ್ಷೆ ಬೇಕೇ, ಬೇಡವೇ? ವಿದ್ಯಾರ್ಥಿಗಳ ಬಳಿ ಸಲಹೆ ಕೇಳಿದ ಕೇಂದ್ರ ಸರ್ಕಾರ
ಸಂಗ್ರಹ ಚಿತ್ರ

Updated on: May 22, 2021 | 4:47 PM

ದೆಹಲಿ: ಸಿಬಿಎಸ್​ಇ ಬೋರ್ಡ್​ನ 12ನೇ ತರಗತಿಯ ಪರೀಕ್ಷೆಗಳನ್ನು ನಡೆಸುವ ಕುರಿತು ನಾಳೆ (ಮೇ22) ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಗಳ ಕಾರ್ಯದರ್ಶಿಗಳು, ರಾಜ್ಯ ಪರೀಕ್ಷಾ ಮಂಡಳಿಗಳ ಅಧ್ಯಕ್ಷರುಗಳನ್ನು ಒಳಗೊಂಡ ಸಭೆ ಕರೆಯಲಾಗಿದೆ. ಕೊವಿಡ್ ಸೋಂಕಿನಿಂದ ಈವರೆಗೆ ಆಫ್​ಲೈನ್ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದ ಕಾರಣ ಪರೀಕ್ಷೆಗಳನ್ನು ನಡೆಸುವ ಸಂಭಾವ್ಯತೆಯ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಜತೆಗೆ  ಕೇಂದ್ರ ಶಿಕ್ಷಣ ಸಚಿವ ವಿದ್ಯಾರ್ಥಿಗಳು ಮತ್ತು ಪಾಲಕರ ಬಳಿ ಸಲಹೆಯನ್ನೂ ಕೇಳಿದ್ದಾರೆ. 

ಕೊವಿಡ್ ಕಾಲದಲ್ಲಿ ಸಿಬಿಎಸ್​ಇ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವ ಕಾರಣ, ಪಾಲಕರು ವಿದ್ಯಾರ್ಥಿಗಳು ಸಹ ತಮ್ಮ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಟ್ವಿಟರ್​ ಮೂಲಕ ಹಂಚಿಕೊಳ್ಳುವಂತೆ ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ. ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿ ರಾಜನಾಥ್ ಸಿಂಗ್ ಮತ್ತು ಶಿಕ್ಷಣ ಸಚಿವ ಡಾ. ರಮೇಶ್ ಪೋಖ್ರಿಯಾಲ್ ಮಹಿಳಾ ಮತ್ತು ಮಕ್ಕಳ ಇಲಾಖೆಗಳ ಸಚಿವೆ ಸ್ಮೃತಿ ಇರಾನಿ, ಮಾಹಿತಿ ತಂತ್ರಜ್ಞಾನ ಸಚಿವ ಪ್ರಕಾಶ್ ಜಾವಡೇಕರ್ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಜೊಮ್ಯಾಟೊದ 1.5 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ಕೊವಿಡ್​ ಲಸಿಕೆ ಉಚಿತ; ಸಿಇಒ ದೀಪಿಂದರ್​ ಗೋಯಲ್ ಘೋಷಣೆ

Karnataka SSLC Exam 2021: ಜೂ.21ರಿಂದ ಪ್ರಾರಂಭವಾಗಬೇಕಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆ ಮುಂದೂಡಿಕೆ